ಲಖನೌ(ಫೆ.23): ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದು, ಅದರ ಸಂಬಂಧಿತ ಕಾರ್ಯಚಟುವಟಿಕೆ ಆರಂಭವಾಗಿರುವ ಬೆನ್ನಲ್ಲೇ, ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಭರ್ಜರಿ 640 ಕೋಟಿ ರು. ಅನುದಾನ ಪ್ರಕಟಿಸಿದೆ.

ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ವಿವಿಧ ಯೋಜನೆಗಳಿಗೆ ಹಣ ನೀಡಲಾಗಿದೆ.

ರಾಮಮಂದಿರ ಮತ್ತು ಮಂದಿರ ಸಂಕೀರ್ಣವನ್ನು ತಲುಪಲು ಸಂಪರ್ಕ ರಸ್ತೆಗೆ 300 ಕೋಟಿ ರು., ಅಯೋಧ್ಯೆ ನಗರದ ಅಭಿವೃದ್ದಿ ಕಾರ್ಯಗಳು ಮತ್ತು ಪ್ರವಾಸೋದ್ಯಮ ಸ್ಥಳಗಳ ಸೌಂದರೀಕರಣ ಯೋಜನೆಗೆ 140 ಕೋಟಿ ರು., ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ 101 ಕೋಟಿ ರು. ಮತ್ತು ನಗರದ ಸರ್ವಾಂಗೀಣ ಅಬಿವೃದ್ಧಿ ಯೋಜನೆಗಳಿಗೆ 100 ಕೋಟಿ ರು. ಮೀಸಲಿಡಲಾಗಿದೆ.