ಸಾವು ಅನ್ನೋದು ಯಾರಿಗೆ, ಹೇಗೆ ಬರುತ್ತದೆ ಅನ್ನೋದು ಯಾರಿಗೂ ಹೇಳಲು ಸಾಧ್ಯವಿಲ್ಲ. ಆಕೆಯ ಪಾಲಿಗೂ ಹಾಗೆಯೇ ಆಗುವುದಿತ್ತು. ಆದ್ರೆ ಅದೃಷ್ಟವಶಾತ್ ಯಮರಾಯ ಹಾಗೇ ಬಂದು ಮುತ್ತಿಕ್ಕಿ ಹೋಗಿದ್ದಾನೆ. ಮಹಿಳೆ ಅಪಾಯದಿಂದ ಪಾರಾಗಿದ್ದಾಳೆ.
ರಸ್ತೆ ಬದಿ ಮಲಗಿರುವ ಪಾದಚಾರಿಗಳ ಮೇಲೆ ಕಾರು ಚಲಿಸಿ ಸಾವು ಸಂಭವಿಸುವುದು ಹೊಸ ವಿಷಯವೇನಲ್ಲ. ಅದೆಷ್ಟೋ ಬಾರಿ ಚಾಲಕರ ಅಜಾಗರೂಕತೆಯಿಂದ, ಕೆಲವೊಮ್ಮೆ ಅಚಾನಕ್ ಆಗಿ ಇಂಥಾ ಘಟನೆಗಳು ಪ್ರಪಂಚದಾದ್ಯಂತ ವರದಿಯಾಗುತ್ತವೆ. ಇಂಥಾ ಅಪಘಾತ ನಡೆದಾಗ ಪಾದಚಾರಿಗಳು ಸಾಯುವ ಸಾಧ್ಯತೆಯೇ ಹೆಚ್ಚು. ಆದ್ರೆ ಇಲ್ಲೊಂದು ಘಟನೆಯಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದವರು ಅದೃಷ್ಟವಶಾತ್ ಅಪಾಯದಿಂ ಪಾರಾಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವೈರಲ್ ಆದ ವೀಡಿಯೋದಲ್ಲಿ ನೆಲದ ಮೇಲೆ ಮಲಗಿರುವ ಮಹಿಳೆಯ ತುಂಬಾ ಸಮೀಪದಲ್ಲೇ ಕಾರು ಹಾದು ಹೋಗುತ್ತದೆ. ಆಕೆ ಕೂದಲೆಳೆ ಅಂಚಿನಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಒಂದು ಕಾರು ಮಲಗಿದ್ದ ಪಾದಚಾರಿಗಳನ್ನು ಸಮೀಪಿಸುತ್ತದೆ. ಕಾರಿನ ಚಲನೆ ಮತ್ತು ವೇಗದಿಂದ ಅದು ಮೊದಲ ವ್ಯಕ್ತಿಯ ಮೇಲೆ ಹರಿದು ಹೋಯಿತು ಎಂದು ತೋರುತ್ತದೆ. ಆದರೆ ಹಾಗೆ ಆಗಿರುವುದಿಲ್ಲ. ಮಲಗಿದ್ದ ಇಬ್ಬರೂ ಭಯದಿಂದ ಎದ್ದೇಳುತ್ತಾರೆ. ಅಷ್ಟರಲ್ಲಿ ಕಾರು ಚಾಲಕ ಗಾಡಿ ನಿಲ್ಲಿಸಿ ಕೆಳಗಿಳಿದು ಬಂದು ಮಹಿಳೆಯ (Woman) ಯೋಗಕ್ಷೇಮ ವಿಚಾರಿಸುತ್ತಾನೆ. ಮಹಿಳೆ ನೋವಿನಿಂದ ಕಿರುಚುತ್ತಿರುವಂತೆ ತೋರುತ್ತದೆ. ಆದರೆ, ಆಕೆ ಅದ್ಭುತವಾಗಿ (Miracle) ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಪಾಕಿಸ್ತಾನದಲ್ಲಿ ಭೀಕರ ರೈಲು ದುರಂತ, ಕನಿಷ್ಠ 15 ಸಾವು, 50 ಕ್ಕೂ ಹೆಚ್ಚು ಗಂಭೀರ ಗಾಯ
ಚಾಲಕ ಮಹಿಳೆಯ ಹತ್ತಿರ ನಡೆದು ಅವಳನ್ನು ತಬ್ಬಿ ಸಮಾಧಾನಪಡಿಸುತ್ತಾನೆ. ಮತ್ತು ತನ್ನ ತಪ್ಪಿಗೆ ಕ್ಷಮೆಯಾಚಿಸುತ್ತಾನೆ. ಸಮೀಪದಲ್ಲಿ ಮಲಗಿದ್ದ ಇನ್ನೊಬ್ಬ ವ್ಯಕ್ತಿ ಘಟನೆಯಿಂದ ಗಾಬರಿಗೊಂಡು ಎದ್ದು ನಿಲ್ಲುತ್ತಾರೆ. ಈ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಸಿಸಿಟಿವಿ ಈಡಿಯಟ್ಸ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊ ಭಾರಿ ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ನೆಟಿಜನ್ಸ್ ತಮ್ಮ ಆಘಾತ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಮುದ್ದು ಕಂದಮ್ಮನ ಮೇಲೆ ಕಾರು ಹತ್ತಿಸಿ ಮಗಳ ಸಾವಿಗೆ ಕಾರಣವಾದ ತಾಯಿ
ತಾಯಿ ತನ್ನ ಕಾರನ್ನು ಚಲಿಸುತ್ತಿದ್ದಾಗ 1 ವರ್ಷದ ಹೆತ್ತ ಮಗಳ ಮೇಲೆ ಕಾರು ಹತ್ತಿಸಿದ ನಂತರ ಬಾಲಕಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಅಮೆರಿಕದ ಅರಿಝೋನಾದಲ್ಲಿ ನಡೆದಿತ್ತು. ಕುಟುಂಬದ ಕಾಟನ್‌ವುಡ್ ಮನೆಯ ಬಳಿ ಈ ಹೃದಯವಿದ್ರಾವಕ ಘಟನೆ ನಡೆದಿತ್ತು. ಸ್ವತ: ತಾಯಿಯೇ ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ತಪ್ಪು ಒಪ್ಪಿಕೊಂಡಿದ್ದರು. ಯವಪೈ ಕೌಂಟಿ ಶೆರಿಫ್‌ನ ಕಚೇರಿಗೆ ಜುಲೈ 6, ಗುರುವಾರದಂದು ಮಹಿಳೆಯೊಬ್ಬರು ಕರೆ ಮಾಡಿ ತನ್ನ 13 ತಿಂಗಳ ಮಗುವಿನ ಮೇಲೆ ತನ್ನ ಕಾರನ್ನು ಹತ್ತಿಸಿದ್ದಾಗಿ ಹೇಳಿಕೊಂಡಿದ್ದರು. ಮೃತ ಬಾಲಕಿಯನ್ನು 13 ತಿಂಗಳ ಸೈರಾ ರೋಸ್ ಥೋಮಿಂಗ್ ಎಂದು ಗುರುತಿಸಲಾಗಿತ್ತು.
ರೇಸ್ ವೇಳೆ ಅಪಘಾತ: ಬೆಂಗಳೂರಿನ 13 ವರ್ಷದ ಪ್ರತಿಭಾನ್ವಿತ ಬೈಕರ್ ಶ್ರೇಯಸ್ ಹರೀಶ್ ನಿಧನ.!
