ರೇಸ್ ವೇಳೆ ಅಪಘಾತ: ಬೆಂಗಳೂರಿನ 13 ವರ್ಷದ ಪ್ರತಿಭಾನ್ವಿತ ಬೈಕರ್ ಶ್ರೇಯಸ್ ಹರೀಶ್ ನಿಧನ.!
ಶನಿವಾರ ಪೋಲ್ ಪೊಸಿಷನ್‌ಗೆ ನಡೆಯುತ್ತಿದ್ದ ರೇಸ್ ವೇಳೆ ಶ್ರೇಯಸ್‌ರ ಬೈಕ್ ಅಪಘಾತಕ್ಕೀಡಾಯಿತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮಾರ್ಗ ಮಧ್ಯಯೇ ಶ್ರೇಯಸ್ ಕೊನೆಯುಸಿರೆಳೆದರು.
ಚೆನ್ನೈ(ಜು.06): ಬೆಂಗಳೂರಿನ 13 ವರ್ಷದ ಬೈಕ್ ರೇಸರ್ ಶ್ರೇಯಸ್ ಹರೀಶ್ ಶನಿವಾರ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದು ಭವಿಷ್ಯದ ತಾರೆ ಎನಿಸಿದ್ದ ಶ್ರೇಯಸ್, ಕಿರಿಯರ ವಿಭಾಗದಲ್ಲಿ ಪೆಟ್ರೊನಾಸ್ ಟಿವಿಎಸ್ ಒನ್ ತಂಡವನ್ನು ಪ್ರತಿನಿಧಿಸುತ್ತಿದ್ದರು.
ಶನಿವಾರ ಪೋಲ್ ಪೊಸಿಷನ್‌ಗೆ ನಡೆಯುತ್ತಿದ್ದ ರೇಸ್ ವೇಳೆ ಶ್ರೇಯಸ್‌ರ ಬೈಕ್ ಅಪಘಾತಕ್ಕೀಡಾಯಿತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮಾರ್ಗ ಮಧ್ಯಯೇ ಶ್ರೇಯಸ್ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಈ ದುರ್ಘಟನೆ ಬಳಿಕ ಆಯೋಜಕರು ಶನಿವಾರ ಹಾಗೂ ಭಾನುವಾರದ ರೇಸ್‌ಗಳನ್ನು ರದ್ದುಗೊಳಿಸಿದರು.
ಜುಲೈ 26, 2010ರಲ್ಲಿ ಜನಿಸಿದ್ದ ಶ್ರೇಯಸ್, ಬೆಂಗಳೂರಿನ ಕೆನ್‌ಶ್ರೀ ಶಾಲೆಯ ವಿದ್ಯಾರ್ಥಿಯಾಗಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದು ಭವಿಷ್ಯದ ತಾರೆ ಎನಿಸಿದ್ದ ಶ್ರೇಯಸ್, ಕಳೆದ ಮೇ ತಿಂಗಳಿನಲ್ಲಿ ನಡೆದ ಮಿನಿ ಜಿಪಿ ಇಂಡಿಯಾ ಟೈಟಲ್ ಜಯಿಸಿದ್ದರು. ಇದಷ್ಟೇ ಅಲ್ಲದೇ ಸ್ಪೇನ್‌ನಲ್ಲಿ ನಡೆದ MiniGP ಸ್ಪರ್ಧೆಯಲ್ಲಿ ಭಾಗವಹಿಸಿ 5& 4ನೇ ಸ್ಥಾನ ಪಡೆದಿದ್ದರು.
ಅದಿತಿ ಅತಿಕಿರಿಯ ಆರ್ಚರಿ ವಿಶ್ವ ಚಾಂಪಿಯನ್..! ಚಿನ್ನ ಗೆದ್ದ ದೇಶದ ಮೊದಲ ಆರ್ಚರಿ ಪಟು 17ರ ಅದಿತಿ
ಏಷ್ಯನ್ ಹಾಕಿ: ಭಾರತಕ್ಕೆ ಇಂದು ಮಲೇಷ್ಯಾ ಸವಾಲು
ಚೆನ್ನೈ: 3 ಬಾರಿ ಚಾಂಪಿಯನ್, ಆತಿಥೇಯ ಭಾರತ ತಂಡ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾನುವಾರ ಬಲಿಷ್ಠ ಮಲೇಷ್ಯಾ ವಿರುದ್ಧ ಸೆಣಸಲಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದು ಬಿಂಬಿತವಾಗಿದ್ದರೂ ಭಾರತ ಆಡಿರುವ 2 ಪಂದ್ಯಗಳಲ್ಲೂ ಕೆಲ ತಪ್ಪುಗಳನ್ನೆಸಗಿದೆ. ಮೊದಲ ಪಂದ್ಯದಲ್ಲಿ ಚೀನಾವನ್ನು 7-2ರಿಂದ ಮಣಿಸಿದರೂ, ಜಪಾನ್ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟಿತ್ತು. ಮೊದಲ ಪಂದ್ಯದ ದ್ವಿತೀಯಾರ್ಧದಲ್ಲಿ ಮಂಕಾಗಿದ್ದ ಭಾರತ, ಜಪಾನ್ ವಿರುದ್ಧ 15 ಪೆನಾಲ್ಟಿ ಕಾರ್ನರ್ ಸಿಕ್ಕರೂ ದಾಖಲಾಗಿದ್ದು ಕೇವಲ ಒಂದೇ ಒಂದು ಗೋಲು. ಹೀಗಾಗಿ ಭಾರತ ಸುಧಾರಿತ ಆಟವಾಡಿದರಷ್ಟೇ ಮಲೇಷ್ಯಾವನ್ನು ಮಣಿಸಲು ಸಾಧ್ಯ.
ಅದಿತಿ ಅತಿಕಿರಿಯ ಆರ್ಚರಿ ವಿಶ್ವ ಚಾಂಪಿಯನ್..! ಚಿನ್ನ ಗೆದ್ದ ದೇಶದ ಮೊದಲ ಆರ್ಚರಿ ಪಟು 17ರ ಅದಿತಿ
ಮತ್ತೊಂದೆಡೆ ಮಲೇಷ್ಯಾ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದಿದೆ. ಅಂಕಪಟ್ಟಿಯಲ್ಲಿ ಭಾರತ ಸದ್ಯ 2ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮಲೇಷ್ಯಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು. ಭಾನುವಾರ ಇನ್ನೆರಡು ಪಂದ್ಯ ನಡೆಯಲಿದ್ದು, ಚೀನಾ-ಕೊರಿಯಾ, ಪಾಕಿಸ್ತಾನ-ಜಪಾನ್ ಸೆಣಸಲಿವೆ.
2ನೇ ಆವೃತ್ತಿ ಜಿಪಿಬಿಎಲ್ ಟ್ರೋಫಿ ಅನಾವರಣ
ಬೆಂಗಳೂರು: ಆ.27ರಿಂದ ಸೆ.9ರ ವರೆಗೂ ನಡೆಯಲಿರುವ 2ನೇ ಆವೃತ್ತಿಯ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಲೀಗ್(ಜಿಪಿಬಿಎಲ್)ನ ಟ್ರೋಫಿಯನ್ನು ಶನಿವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅನಾವರಣಗೊಳಿಸಿದರು. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಸೆಣಸಲಿದ್ದು, ರಾಜ್ಯದ ಪ್ರತಿಭೆಗಳ ಜೊತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಶಟ್ಲರ್‌ಗಳು ಪಾಲ್ಗೊಳ್ಳಲಿದ್ದಾರೆ.