Asianet Suvarna News Asianet Suvarna News

ನವೀಕರಣದ ವೇಳೆ ಕುಸಿದ ಬಹುಮಹಡಿ ಕಟ್ಟಡ, 6 ಮಹಿಳಾ ಕಾರ್ಮಿಕರು ಸಾವು!

ಬಹುಮಹಡಿ ಕಟ್ಟದ ನವೀಕರಣ ಕೆಲಸ ನಡೆಯುತ್ತಿದ್ದ ವೇಳೆ ಅನಾಹುತ ಸಂಭವಿಸಿದೆ. ಕಟ್ಟಡ ಕುಸಿದ ಕಾರಣ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, 6 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ.

Six workers died after multi storey building collapse in Ooty rescue operation underway ckm
Author
First Published Feb 7, 2024, 4:13 PM IST

ಊಟಿ(ಫೆ.07) ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಊಟಿಯಲ್ಲಿ ದುರ್ಘಟನೆ ನಡೆದಿದೆ. ನವೀಕರಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡಗಳ ದಿಡೀರ್ ಕುಸಿತಗೊಂಡಿದೆ. ಕಾರ್ಮಿಕರು ಕೆಲಸ ಮಾಡುತ್ತದ್ದ ವೇಳೆ ಕಟ್ಟಡ ಕುಸಿದಕಾರಣ ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಇತ್ತ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ಅವಶೇಷಗಳಡಿಯಲ್ಲಿ ಸಿಲುಕಿ 6 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ. ಒಟ್ಟು 13ಕ್ಕೂ ಹೆಚ್ಚು ಕಾರ್ಮಿಕರು ಕಡ್ಡಡ ನವೀಕರಣದಲ್ಲಿ ತೊಡಗಿಸಿಕೊಂಡಿದ್ದರು. 

ಊಟಿಯ ಲವ್‌ಡೇಲ್ ಬಳಿ ಈ ದುರಂತ ಸಂಭವಿಸಿದೆ. ಹಳೇ ಕಟ್ಟಡದ ನವೀಕರಣ ಕೆಲಸದ ವೇಳೆ ಈ ಘಟನೆ ನಡೆದಿದೆ. ಬಹುಮಹಡಿ ಕಟ್ಟಟಡ ಒಂದು ಭಾಗದ ನವೀಕರಣ ಕೆಲಸದಲ್ಲಿ ಕಾರ್ಮಿಕರು ನಿರತರಾಗಿದ್ದರು. ಕಟ್ಟಡದ ಕೆಳ ಹಂತದಲ್ಲಿ ಕೊರೆಯುವ ಹಾಗೂ ದುರಸ್ತಿ ಕೆಲಸಗಳು ನಡೆಯುತ್ತಿದ್ದರೆ, ಮೇಲಿನ ಹಂತದಲ್ಲಿ ದುರಸ್ತಿಗಾಗಿ ಕೊರೆದ ಕಲ್ಲು, ಸಿಮೆಂಟ್, ಕಬ್ಣಿಗಳನ್ನು ಬೇರೆಗೆ ಸ್ಥಳಾಂತರ ಮಾಡಲಾಗುತ್ತಿತ್ತು.

ಪಾಯ ತೆಗೆಯುವಾಗ ಮೊಬೈಲ್‌ಟವರ್‌ ಸಹಿತ ಬಿದ್ದ ಹಳೆ ಕಟ್ಟಡ; ವಿಡಿಯೋ ವೈರಲ್!

13ಕ್ಕೂ ಹೆಚ್ಚಿನ ಕಾರ್ಮಿಕರು ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕೆಲಸ ನಡೆಯುತ್ತದ್ದ ವೇಳೆ ಏಕಾಏಕಿ ಕಡ್ಡದ ಒಂದು ಭಾಗ ಕುಸಿದಿದೆ. ಇದರಿಂದ ಕಟ್ಟಡ ನೆಲಕ್ಕುರುಳಿದೆ. ಕಾರ್ಮಿಕರು ಇದರ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ತಕ್ಷಣವೇ ಮಾಹಿತಿ ಪಡೆದು ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡದ ಜೊತೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ 6 ಮಹಿಳಾ ಕಾರ್ಮಿಕರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಇನ್ನು ಅವಶೇಷಗಳಡಿಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡ ನಾಲ್ವರು ಕಾರ್ಮಿಕನ್ನು ಊಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Viral Video: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಲೇವಡಿ ಮಾಡುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ!

ಪ್ರಕರಣ ದಾಖಲಿಸಿಕೊಂಡಿರುವ ಊಟಿ ಪೊಲೀಸರು ಕಡ್ಡಟ ಮಾಲೀಕರ, ನವೀಕರಣ ಗುತ್ತಿಗೆ ಪಡೆದ ಕಾಂಟ್ರಾಕ್ಟರ್ ಸೇರಿದಂತೆ ಹಲವರನ್ನು ವಿಚಾರಣ ನಡೆಸಲು ಮುಂದಾಗಿದ್ದಾರೆ. ಶಿಥಿಲಗೊಂಡಿದ್ದ ಕಟ್ಟಡ ನವೀಕರಣಕ್ಕೆ ಅನುಮತಿ ಪಡೆಯಲಾಗಿತ್ತೆ? ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಅನ್ನೋ ಮಾಹಿತಿಗಳು ಬಯಲಾಗಿದೆ. ಇನ್ನು ಅವೈಜ್ಞಾನಿಕವಾಗಿ ಕಟ್ಟಡ ನವೀಕರಣ ಕೆಲಸ ಕೂಡ ಕಟ್ಟಡ ಕುಸಿತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿದೆ
.

Follow Us:
Download App:
  • android
  • ios