Viral Video: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಲೇವಡಿ ಮಾಡುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ!
ಬಿಹಾರದ ಗಯಾದಲ್ಲಿ ಪಸ್ಮಾಂಡ ವಂಚಿತ್ ಮಹಾಸಂಘಟನ್ ಜನವರಿ 18 ರಂದು ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ಪುಣ್ಯಸ್ಮರಣೆ ಸಭೆಯನ್ನು ಆಯೋಜಿಸಿತ್ತು. ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸಹ ಇದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ರಾಮ ಮಂದಿರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಂತೆ ಅವರಿದ್ದ ವೇದಿಕೆಯೇ ಕುಸಿದು ಬಿದ್ದಿದೆ.
ನವದೆಹಲಿ (ಜ.19): ದೇಶದೆಲ್ಲೆಡೆ ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆಯ ಬಗ್ಗೆ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ, ಕೆಲವರು ಇನ್ನೂ ರಾಮ ಮಂದಿರದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ, ಇಡೀ ಕಾರ್ಯಕ್ರಮದ ಬಗ್ಗೆ ಲೇವಡಿ ಮಾಡುತ್ತಿದ್ದಾರೆ.ಬಿಹಾರದಲ್ಲಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸಭೆಯೊಂದರಲ್ಲಿ ರಾಮ ಮಂದಿರದ ಬಗ್ಗೆ ಪ್ರಶ್ನೆ ಮಾಡುತ್ತಾ, ಇಡೀ ಸಮಾರಂಭದ ಬಗ್ಗೆ ಲೇವಡಿ ಮಾಡುತ್ತಿದ್ದರು. ರಾಮ ಮಂದಿರದ ರಚನೆಯ ಬಗ್ಗೆ, ರಾಮನ ಬಗ್ಗೆ ಈತ ಪ್ರಶ್ನೆ ಮಾಡುತ್ತಿರುವಾಗಲೇ, ಈತ ಮಾತನಾಡುತ್ತಿದ್ದ ಇಡೀ ವೇದಿಕೆಯೇ ಕಾಕತಾಳೀಯ ಎನ್ನುವಂತೆ ಕುಸಿದು ಬಿದ್ದಿದೆ. ಪಸ್ಮಾಂಡ ವಂಚಿತ್ ಮಹಾಸಂಘಟನ್ ಜನವರಿ 18 ರಂದು ಗಯಾದ ಅಟಾರಿ ಬ್ಲಾಕ್‌ನ ದಿಹುರಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ವಾರ್ಷಿಕೋತ್ಸವದ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಪಸ್ಮಾಂಡ ವಂಚಿತ್ ಮಹಾಸಂಘಟನ್‌ನ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಜನರನ್ನು ಉದ್ದೇಶಿಸಿ ಅಲಿ ಅನ್ವರ್ ಅನ್ಸಾರಿ ಮಾತನಾಡುತ್ತಿದ್ದರು. ಭಗವಾನ್ ಶ್ರೀರಾಮನ ಕಾರ್ಯಕ್ರಮಗಳು ಹಾಗೂ ಕೇಂದ್ರ ಸರ್ಕಾರವನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವಿಚಾರವಾಗಿ ಮಾತನಾಡುವ ವೇಳೆಗಾಗಲೇ ಇಡೀ ವೇದಿಕೆ ಇಸ್ಪೀಟ್‌ನ ಎಲೆಗಳ ರೀತಿ ಉದುರಿಬಿದ್ದಿದೆ. ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಎಲ್ಲರೂ ನೆಲಕ್ಕೆ ಬಿದ್ದಿದ್ದಾರೆ. ವೇದಿಕೆಯಿಂದ ಬೀಳುವ ಮುನ್ನವೇ ಮಾಜಿ ಸಂಸದ ಹಾಗೂ ಪಸ್ಮಾಂಡ ವಂಚಿತ್ ಮಹಾಸಂಘಟನ್‌ನ ರಾಷ್ಟ್ರೀಯ ಅಧ್ಯಕ್ಷ ಅಲಿ ಅನ್ವರ್ ಅನ್ಸಾರಿ ಅವರ ಕಾಲಿಗೆ ಗಾಯವಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಡೀ ವೇದಿಕೆ ಕುಸಿದು ಬಿದ್ದ ಬಳಿಕ, ಮೈದಾನದಲ್ಲಿ ಮೇಜು ಇಟ್ಟು ಸಭೆಯನ್ನು ಮುಂದುವರಿಸಲಾಗಿದೆ. ಈ ವೇಳೆ ಮಾತನಾಡಿದ ಅಲಿ ಅನ್ವರ್ ಅನ್ಸಾರಿ, ವೇದಿಕೆ ಕುಸಿದು ಬೀಳುತ್ತದೆಯೇ ಇಲ್ಲವೇ ಎಂದು ನಾನು ಇಲ್ಲಿಗೆ ಬರುವ ಮುನ್ನವೇ ಕೇಳಿದ್ದೆ. ಆದರೆ, ವೇದಿಕೆ ಮುರಿದು ಬೀಳುವುದಿಲ್ಲ ಎಂದು ತುಂಬಾ ಜನ ಹೇಳಿದ್ದರು. ಆದರೆ, ಈ ಚಳಿಯಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಾಗಲೇ ಇಡೀ ವೇದಿಕೆ ಕುಸಿದು ಬಿದ್ದಿದೆ.
ಶ್ರೀರಾಮನ ಹೊಸ ಮೂರ್ತಿ ಬಾಲರೂಪದಲ್ಲಿಲ್ಲ, ವಿವಾದಿತ ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್!
ಬಿಜೆಪಿಯ ಮುಂದಿನ ಚುನಾವಣೆ ವೇಳೆ ಪಾಸ್ಮಾಂಡ ಮುಸ್ಲಿಂ ಸಮುದಾಯದ ಮೇಲೆ ಹೆಚ್ಚಿನ ಗಮನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಾಸ್ಮಾಂಡ ಮತಬ್ಯಾಂಕ್‌ಅನ್ನು ಗಟ್ಟಿ ಮಾಡಿಕೊಳ್ಳುವ ಮೂಲಕ ಮುಸ್ಲಿಂಮರ ವೋಟ್ ಪಡೆಯಲು ನಿರ್ಧಾರ ಮಾಡಿದ್ದಾರೆ. ಪಸ್ಮಾಂಡ ಮುಸ್ಲಿಂ ಸಮಾಜದ ಹಿಂದುಳಿದ ವರ್ಗ . ಈ ವರ್ಗವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ. 2022ರಲ್ಲಿಯೇ ಪಸ್ಮಾಂಡ ಮುಸ್ಲಿಂ ಮೋರ್ಚಾದ ರೂಪದಲ್ಲಿ ಪಕ್ಷವು ಪ್ರತ್ಯೇಕ ವಿಭಾಗವನ್ನು ರಚಿಸಿದೆ.
RamLalla Photo: ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ, ಹೀಗಿದ್ದಾನೆ ನೋಡಿ ಶ್ರೀರಾಮ!