Asianet Suvarna News Asianet Suvarna News

ದೇಶದ ಸ್ಥಿತಿ ಮೊದಲಿನಂತಿಲ್ಲ, ಎಲ್ಲದಕ್ಕೂ ಈಗ ಉತ್ತರ: ಚೀನಾ, ಪಾಕ್‌ಗೆ ಜೈಶಂಕರ್‌ ಎಚ್ಚರಿಕೆ

ಉಗಾಂಡಾ ಪ್ರವಾಸದಲ್ಲಿ ಮಾತನಾಡಿದ ಜೈಶಂಕರ್‌ ಚೀನಾ ಮತ್ತು ಪಾಕಿಸ್ತಾನದಿಂದ ಉಂಟಾಗುತ್ತಿರುವ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಭಾರತ ಎದುರಿಸುತ್ತದೆ. ಗಡಿಯಾಚೆ ದಶಕಗಳಿಂದ ಭಯೋತ್ಪಾದನೆಯಲ್ಲಿ ತೊಡಗಿರುವ ಪಡೆಗಳಿಗೆ ಇದು ವಿಭಿನ್ನ ಭಾರತ ಎಂದು ಈಗ ಅರ್ಥವಾಗಿದೆ ಎಂದರು.

Situation is not like before now answer to everything Jai Shankars warning to China and Pakistan akb
Author
First Published Apr 14, 2023, 12:55 PM IST

ಕಂಪಾಲಾ: ಈಗಿನದು ವಿಭಿನ್ನ ಭಾರತ. ಮೊದಲಿನ ಭಾರತ ಇದಲ್ಲ ಎಂದು ನೆರೆಯ ಪಾಕಿಸ್ತಾನ ಹಾಗೂ ಚೀನಾಗೆ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪರೋಕ್ಷ ಚಾಟಿ ಬೀಸಿದ್ದಾರೆ.  ಉಗಾಂಡಾ ಪ್ರವಾಸದಲ್ಲಿ ಮಾತನಾಡಿದ ಜೈಶಂಕರ್‌ ಚೀನಾ ಮತ್ತು ಪಾಕಿಸ್ತಾನದಿಂದ ಉಂಟಾಗುತ್ತಿರುವ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಭಾರತ ಎದುರಿಸುತ್ತದೆ. ಗಡಿಯಾಚೆ ದಶಕಗಳಿಂದ ಭಯೋತ್ಪಾದನೆಯಲ್ಲಿ ತೊಡಗಿರುವ ಪಡೆಗಳಿಗೆ ಇದು ವಿಭಿನ್ನ ಭಾರತ ಎಂದು ಈಗ ಅರ್ಥವಾಗಿದೆ ಎಂದರು.

ಜನರು ಇಂದು ಎದ್ದು ನಿಲ್ಲುತ್ತಿರುವ ಭಾರತವನ್ನು ನೋಡುತ್ತಿದ್ದಾರೆ. ಉರಿ ಅಥವಾ ಬಾಲಾಕೋಟ್‌ನಂತಹ ಯಾವುದೇ ದಾಳಿಯಾಗಲಿ ಭಾರತ ತನ್ನ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳುತ್ತದೆ. ದಶಕಗಳಿಂದ ಭಾರತ ಸಹಿಸಿಕೊಂಡಿರುವ ಶಕ್ತಿಗಳಿಗೆ ಇದು ನವ ಭಾರತ ಎಂಬುದು ಅರ್ಥವಾಗಿದೆ. ಈ ಭಾರತ ಅವರಿಗೆ ಪ್ರತ್ಯುತ್ತರ ನೀಡುತ್ತದೆ ಎಂದ ಜೈಶಂಕರ್ (Jai shankar) ಕ್ಯಾತೆ ತೆಗೆಯುವ ಚೀನಾ, ಪಾಕ್‌ಗಳಿಗೆ ಎಚ್ಚರಿಕೆ ನೀಡಿದರು.

ದೇಶದ ಪ್ರತಿಯೊಬ್ಬ ಪ್ರಜೆಯ ಹಿತ ಕಾಯುವದೇ ವಿದೇಶಾಂಗ ನೀತಿ : ಜೈಶಂಕರ

ಅಲ್ಲದೇ ದ್ವಿಪಕ್ಷೀಯ ನಿಯಮಗಳನ್ನು ಉಲ್ಲಂಘಿಸಿ ಕಳೆದ 3 ವರ್ಷಗಳಿಂದ ಗಡಿಯಲ್ಲಿ ಚೀನಾ (china) ದೊಡ್ಡ ಪಡೆಗಳನ್ನು ನಿಯೋಜಿಸುತ್ತಿದೆ. ಭಾರತೀಯ ಸೇನೆಯು ಎತ್ತರದ ಮತ್ತು ಕಠಿಣ ಪ್ರದೇಶಗಳಲ್ಲಿ ನಿಯೋಜನೆಗೊಂಡಿದೆ. ಈ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಿದೆ. ಏಕೆಂದರೆ ಭಾರತೀಯ ಸೈನಿಕರು (Indian Soldier) ಉತ್ತಮ ಉಪಕರಣ ಹಾಗೂ ಮೂಲಸೌಕರ್ಯಗಳನ್ನು ಹೊಂದಿದ್ದಾರೆ. ಈ ಹಿಂದೆ ನಿರ್ಲಕ್ಷಿಸಲ್ಪಟ್ಟಿದ್ದ ಚೀನಾ ಗಡಿಯಲ್ಲಿ ಹೆಚ್ಚಿನ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಬೇಕಿದೆ. ಈಗ ಭಾರತದ ನೀತಿಗಳು ಹೊರಗಿನ ಒತ್ತಡದಿಂದ ಪ್ರಭಾವಿತವಾಗಿಲ್ಲ. ಸ್ವತಂತ್ರವಾಗಿದೆ ಎಂದರು.

ಕ್ರಿಕೆಟ್‌ ಟೀಂ ಸ್ಟೈಲಲ್ಲಿ ಕ್ಯಾಪ್ಟನ್‌ ಮೋದಿ ಕೆಲಸ: ವಿದೇಶಾಂಗ ಸಚಿವ ಜೈಶಂಕರ್‌ ವಿವರಿಸಿದ್ದು ಹೀಗೆ..

Follow Us:
Download App:
  • android
  • ios