ಕ್ರಿಕೆಟ್‌ ಟೀಂ ಸ್ಟೈಲಲ್ಲಿ ಕ್ಯಾಪ್ಟನ್‌ ಮೋದಿ ಕೆಲಸ: ವಿದೇಶಾಂಗ ಸಚಿವ ಜೈಶಂಕರ್‌ ವಿವರಿಸಿದ್ದು ಹೀಗೆ..

'ಕ್ಯಾಪ್ಟನ್' ಮೋದಿ ಅವರ ಅಡಿಯಲ್ಲಿ ವಿದೇಶಾಂಗ ನೀತಿಯನ್ನು ವಿವರಿಸಿದ್ದಾರೆ. ಕ್ರಿಕೆಟ್‌ ಭಾಷೆಯಲ್ಲಿ ಕೇಂದ್ರ ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ.

s jaishankar explains how government functions under captain modi in cricket style ash

ಹೊಸದೆಹಲಿ (ಮಾರ್ಚ್‌ 4, 2023): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಲವು ವಿದೇಶಿ ನಾಯಕರಿಂದ, ಸಂಸ್ಥೆಗಳಿಂದ ಸಾಕಷ್ಟು ಮೆಚ್ಚುಗೆ ಕೇಳಿಬರುತ್ತಿದೆ. ಅದರಲ್ಲೂ ವಿದೇಶಾಂಗ ಇಲಾಖೆ ಹಾಗೂ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಕಾರ್ಯ ವೈಖರಿ ಬಗ್ಗೆಯೂ ಸಾಕಷ್ಟು ಮೆಚ್ಚುಗೆ ಕೇಳಿಬರುತ್ತಿದೆ. ಈ ಹಿನ್ನೆಲೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 'ಕ್ಯಾಪ್ಟನ್' ಮೋದಿ ಅವರ ಅಡಿಯಲ್ಲಿ ವಿದೇಶಾಂಗ ನೀತಿಯನ್ನು ವಿವರಿಸಿದ್ದಾರೆ. ಕ್ರಿಕೆಟ್‌ ಭಾಷೆಯಲ್ಲಿ ಕೇಂದ್ರ ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ.
 
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (Ministry of External Affairs) (MEA) ಸಹಭಾಗಿತ್ವದಲ್ಲಿ ಅಬ್ಸರ್ವರ್ ರೀಸರ್ಚ್ ಫೌಂಡೇಶನ್ (Observer Research Foundation) (ORF) ಆಯೋಜಿಸಿದ್ದ ಪ್ರಮುಖ ಥಿಂಕ್-ಟ್ಯಾಂಕ್ ಕಾರ್ಯಕ್ರಮವಾದ ರೈಸಿನಾ ಡೈಲಾಗ್‌ನಲ್ಲಿ (Raisina Dialogue) ವಿದೇಶಾಂಗ ಸಚಿವ ಎಸ್‌. ಜೈಶಂಕರ್ (S. Jaishankar) ಮಾತನಾಡುತ್ತಿದ್ದರು. ಭಾರತ ಮತ್ತು ಯುಕೆ ನಡುವಿನ ಸಂಬಂಧವನ್ನು (India - UK Relations) ವಿವರಿಸುವಾಗ ವಿದೇಶಾಂಗ ಸಚಿವರು ಬ್ಲಾಕ್‌ಬಸ್ಟರ್ ಚಲನಚಿತ್ರ 'ಆರ್‌ಆರ್‌ಆರ್’ (RRR) ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ ಕೆವಿನ್ ಪೀಟರ್ಸನ್ ಸಹ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಇದನ್ನು ಓದಿ: ನಾನು ಭಾರತದ ದೊಡ್ಡ ಅಭಿಮಾನಿ ಎಂದ China ಉನ್ನತ ಅಧಿಕಾರಿ..!

ಈ ವೇಳೆ ಸರ್ಕಾರದ ಕಾರ್ಯವೈಖರಿ ವಿವರಿಸಿದ ವಿದೇಶಾಂಗ ಸಚಿವರು "ಕ್ಯಾಪ್ಟನ್ (ಪಿಎಂ) ಮೋದಿಯವರೊಂದಿಗೆ (Modi) ನೆಟ್ ಅಭ್ಯಾಸವು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ ಸಾಕಷ್ಟು ತಡವಾಗುವವರೆಗೆ ಇದು ಮುಂದುವರೆಯುತ್ತದೆ" ಎಂದು ಸರ್ಕಾರದ ಕಾರ್ಯವೈಖರಿಯನ್ನು ವಿವರಿಸಲು ಕೇಳಿದ್ದಕ್ಕೆ ಜೈಶಂಕರ್‌ ಈ ರೀತಿ ವಿಶಿಷ್ಟವಾಗಿ ಹೇಳಿದ್ದಾರೆ.

ಅಲ್ಲದೆ, ನಾಯಕನ ಬಳಿ ಉತ್ತಮ ಪ್ರದರ್ಶನ ನೀಡುವ ಬೌಲರ್ ಇದ್ದರೆ, ಅವರು ಆ ಬೌಲರ್‌ಗೆ ಚೆಂಡನ್ನು ನೀಡುತ್ತಾರೆ ಎಂದೂ ಜೈಶಂಕರ್‌ ಹೇಳಿದ್ದಾರೆ. ''ಆ ಅರ್ಥದಲ್ಲಿ ನಾಯಕ ಮೋದಿ ಅವರು ತಮ್ಮ ಬೌಲರ್‌ಗಳಿಗೆ ಒಂದು ನಿರ್ದಿಷ್ಟ ಪ್ರಮಾಣದ ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ನಿಮಗೆ ಅವಕಾಶ ನೀಡಿದರೆ, ನೀವು ಆ ವಿಕೆಟ್ ಅನ್ನು ತೆಗೆದುಕೊಳ್ಳುತ್ತೀರಿ ಎಂದು ಅವರು ನಿರೀಕ್ಷಿಸುತ್ತಾರೆ. ಆದರೆ ಅದರಲ್ಲಿ ಕೆಲವರು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರಗಳನ್ನು (ನಾಯಕ) ನೋಡುತ್ತಿದ್ದಾರೆ ಎಂದು ನಾನು ಹೇಳುತ್ತೇನೆ.

ಇದನ್ನೂ ಓದಿ: ‘‘Pak ನಾಯಕರಿಗೆ ಕಾಫಿ, ಬಿಸ್ಕತ್ತು; ಕೇಂದ್ರ ಸಚಿವ Jaishankarಗೆ ಅಮೆರಿಕ ಸರ್ಕಾರ ಡಿನ್ನರ್‌’’

ಲಾಕ್‌ಡೌನ್ ನಿರ್ಧಾರವು ತುಂಬಾ ಕಠಿಣ ನಿರ್ಧಾರವಾಗಿದೆ, ಅದನ್ನು ತೆಗೆದುಕೊಳ್ಳಲೇಬೇಕಾಗಿತ್ತು. ಅದನ್ನು ನಾವು ಈಗ ಹಿಂತಿರುಗಿ ನೋಡಿದರೆ, ನಾವು ಆ ನಿರ್ಧಾರ ತೆಗೆದುಕೊಳ್ಳದಿದ್ದರೆ ಏನಾಗುತ್ತಿತ್ತು?" ಎಂದೂ ಜೈಶಂಕರ್‌ ನೆನಪಿಸಿಕೊಂಡಿದ್ದಾರೆ.

ವಿಡಿಯೋ ನೋಡಿ..

ನಂತರ ವಿದೇಶಾಂಗ ಸಚಿವರು ಭಾರತದ ವಿದೇಶಾಂಗ ನೀತಿಯಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಬಗ್ಗೆಯೂ ಗಮನ ಸೆಳೆದಿದ್ದಾರೆ. "ಜಗತ್ತು ಕಷ್ಟಕರವಾದ ಸ್ಥಳದಲ್ಲಿರುವುದರಿಂದ ಹೆಚ್ಚಿನ ಜನರು ಪ್ರಪಂಚದ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಎರಡನೆಯ ಕಾರಣ ಭಾರತದ ಜಾಗತೀಕರಣ. ಕ್ರಿಕೆಟ್ ತಂಡದಂತೆ, ನಾವು ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಪಂದ್ಯಗಳನ್ನು ಗೆಲ್ಲಲು ಬಯಸುತ್ತೇವೆ’’ ಎಂದೂ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. 

ಇದನ್ನೂ ಓದಿ: ಎದ್ದಿದ್ದೀರಾ..? ತಡರಾತ್ರಿ Jaishankarಗೆ ಕರೆ ಮಾಡಿದ್ದ ಪ್ರಧಾನಿ Narendra Modi

ಟೋನಿ ಬ್ಲೇರ್‌ ಸಹ ಸ್ಥಳದಲ್ಲಿ ಇದ್ದರಿಂದ, ಭಾರತವು ಬ್ರಿಟನ್‌ಗಿಂತ ದೊಡ್ಡ ಆರ್ಥಿಕತೆ ಮತ್ತು ಕ್ರಿಕೆಟ್‌ನಲ್ಲಿ ಸಹ ಪ್ರಾಬಲ್ಯ ಸಾಧಿಸಿರುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಉಗ್ರರ ರಕ್ಷಿಸುವ ಚೀನಾ, ಪಾಕ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ Jaishankar ವಾಗ್ದಾಳಿ

Latest Videos
Follow Us:
Download App:
  • android
  • ios