ಕಣ್ಮುಂದೆ ಬೆಂಕಿ ಹಚ್ಚಿಕೊಂಡ ಅಕ್ಕನ ರಕ್ಷಿಸದೇ ವೀಡಿಯೋ ಮಾಡ್ತಾ ನಿಂತ ತಮ್ಮ
ಕಣ್ಮುಂದೆಯೇ ಸಹೋದರಿ ಬೆಂಕಿ ಹಚ್ಚಿಕೊಂಡು ಒದ್ದಾಡುತ್ತಿದ್ದರೂ ಆಕೆಯ ಸಹೋದರ ಆಕೆಯನ್ನು ರಕ್ಷಿಸಲು ಮುಂದಾಗದೇ ವೀಡಿಯೋ ಮಾಡುತ್ತಾ ನಿಂತಿದ್ದಂತಹ ಆಘಾತಕಾರಿ ಘಟನೆ ಉತ್ತರಪ್ರದೇಶದ ಶಜಹಾನ್‌ಪುರದಲ್ಲಿ ಬೆಳಕಿಗೆ ಬಂದಿದೆ.
ಶಜಹಾನ್‌ಪುರ: ಕಣ್ಮುಂದೆಯೇ ಸಹೋದರಿ ಬೆಂಕಿ ಹಚ್ಚಿಕೊಂಡು ಒದ್ದಾಡುತ್ತಿದ್ದರೂ ಆಕೆಯ ಸಹೋದರ ಆಕೆಯನ್ನು ರಕ್ಷಿಸಲು ಮುಂದಾಗದೇ ವೀಡಿಯೋ ಮಾಡುತ್ತಾ ನಿಂತಿದ್ದಂತಹ ಆಘಾತಕಾರಿ ಘಟನೆ ಉತ್ತರಪ್ರದೇಶದ ಶಜಹಾನ್‌ಪುರದಲ್ಲಿ ಬೆಳಕಿಗೆ ಬಂದಿದೆ. ಈ ದೃಶ್ಯಾವಳಿ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರೋಜಾ ಯಾದವ್ (Saroja Yadav) ಹೀಗೆ ಸಹೋದರನ ಕಣ್ಮುಂದೆ ಬೆಂಕಿ ಹಚ್ಚಿಕೊಂಡ ಮಹಿಳೆ. ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ವೀಡಿಯೋದಲ್ಲಿ ನೇರಳೆ ಬಣ್ಣದ ಚೂಡಿಧಾರ್ ಧರಿಸಿದ್ದ ಮಹಿಳೆ ತನ್ನ ಮನೆಯ ಆವರಣದಲ್ಲಿ ನಿಂತಿದ್ದು, ಮೊದಲೇ ಮೈಗೆ ಗ್ಯಾಸೋಲಿನ್ ಸುರಿದುಕೊಂಡಿದ್ದ ಆಕೆ ತನ್ನ ಮೈಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಆದರೆ ಅದಕ್ಕಿಂತ ವಿಪರ್ಯಾಸ ಎಂದರೆ ಈ ವೇಳೆ ಅಲ್ಲಿದ್ದ ಆಕೆಯ ಸ್ವಂತ ಸಹೋದರ ಸಂಜೀವ್ ಯಾದವ್ ಆಕೆಯನ್ನು ರಕ್ಷಿಸಲು ಮುಂದಾಗದೇ ಮೊಬೈಲ್ ತೆಗೆದುಕೊಂಡು ವೀಡಿಯೋ ಮಾಡಿದ್ದು, ಹಾಗಂತ ಈತನೇನು ಸಣ್ಣ ಹುಡುಗನಲ್ಲ 26 ವರ್ಷದ ತರುಣ.
ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿದ್ದ ಮುಖಂಡರ ಕಾರಿಗೆ ಬೆಂಕಿ
ಇದಕ್ಕೂ ಮೊದಲು ಸರೋಜಾಳ ಪೋಷಕರಾದ ಸುಂದರ್‌ಲಾಲ್ ಯಾದವ್ (Sundarlal) ಮತ್ತು ಊರ್ಮಿಳಾ (Urmila) ಅವರಿಗೆ ನೆರೆಮನೆಯ ಪವನ್ ಗುಪ್ತಾ ಮತ್ತು ಸುಮನ್ ಗುಪ್ತಾ ಅವರೊಂದಿಗೆ ದೊಡ್ಡ ಜಗಳವಾಗಿತ್ತು. ಈ ಮಧ್ಯೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೆರೆಮನೆಯ ಪವನ್ ಗುಪ್ತಾ ಪತ್ನಿ ಪ್ರತೀಕ್ಷಾ ಗುಪ್ತಾ ಅವರು, ಗೆಲುವು ಸಾಧಿಸಿ ಸಮುದಾಯದಲ್ಲಿ ತಮ್ಮ ಸ್ಥಾನಮಾನವನ್ನು ಹೆಚ್ಚಿಸಿಕೊಂಡಿದ್ದರು. ಪವನ್ ಗುಪ್ತಾ (Pavan Gupta) ಹೆಂಡತಿಯ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಆಕೆಯ ಕುಟುಂಬಕ್ಕೆ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಪತ್ನಿ ಚುನಾವಣೆಯಲ್ಲಿ ಗೆದ್ದ ಬಳಿಕ ಸರೋಜಾ ಕುಟುಂಬಕ್ಕೆ ಪವನ್‌ಗುಪ್ತಾನಿಂದ ಕಿರುಕುಳ ಹೆಚ್ಚಾಗಿತ್ತು ಎನ್ನಲಾಗಿದೆ.
ಈ ಗಲಾಟೆಯಲ್ಲಿ ಸರೋಜಾಳ ಪೋಷಕರಾದ ಸುಂದರ್‌ಲಾಲ್ ಯಾದವ್ (Sundarlal Yadav) ಮತ್ತು ಊರ್ಮಿಳಾ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದು, ಇದರಿಂದ ಧೃತಿಗೆಟ್ಟ ಸರೋಜಾ ಈ ಅನಾಹುತಕಾರಿ ನಿರ್ಧಾರ ಕೈಗೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಬೆಂಕಿ ಹಚ್ಚಿಕೊಂಡ ಸರೋಜಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಹೊತ್ತಿ ಭಸ್ಮವಾದ ಮದುವೆ ದಿಬ್ಬಣದ ಖಾಸಗಿ ಬಸ್!