Asianet Suvarna News Asianet Suvarna News

ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಹೊತ್ತಿ ಭಸ್ಮವಾದ ಮದುವೆ ದಿಬ್ಬಣದ ಖಾಸಗಿ ಬಸ್!

ಮಂಡ್ಯದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ವೊಂದು ಹೊತ್ತಿ ಉರಿದ ದಾರುಣ ಘಟನೆ ನಡೆದಿದೆ. ಬಸ್‌ನಲ್ಲಿದ್ದವರು ಮದುವೆ ದಿಬ್ಬಣ ಹೊರಟಿದ್ದರು ಎಂದು ತಿಳಿದುಬಂದಿದೆ.

Miraculous escape for passengers as private bus catches fire in Srirangapatna gow
Author
First Published Apr 22, 2023, 4:39 PM IST

ಮಂಡ್ಯ (ಏ.22): ಮಂಡ್ಯದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ವೊಂದು ಹೊತ್ತಿ ಉರಿದ ದಾರುಣ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯ ಬೆಂಗಳೂರು - ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ  ಘಟನೆ ನಡೆದಿದೆ.  ಬೆಂಗಳೂರಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಹೊತ್ತಿ ಉರಿದಿದ್ದು,  ಮದುವೆ ತೆರಳುತ್ತಿದ್ದ ಜನರನ್ನು ಖಾಸಗಿ ಬಸ್ ಕರೆದೊಯ್ಯುತ್ತಿತ್ತು ಎಂದು ತಿಳಿದುಬಂದಿದೆ.  ಶಾರ್ಟ್ ಸರ್ಕ್ಯೂಟ್ ನಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡು ಈ ದುರಂತ ನಡೆದಿದೆ. ಹೊಗೆ ಬರ್ತಿದ್ದಂತೆ ಪ್ರಯಾಣಿಕರು ಚಾಲಕನಿಗೆ ಬಸ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಬಸ್ ನಿಂದ ಪ್ರಯಾಣಿಕರು ಕೆಳಗೆ ಇಳಿಯುತ್ತಂತೆ ಮತ್ತಷ್ಟು ಬೆಂಕಿ ಆವರಿಸಿದೆ.  ನೋಡ ನೋಡುತ್ತಿದ್ದಂತೆಯೇ  ಕ್ಷಣಾರ್ಧದಲ್ಲಿ ಬಸ್ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಶುರುವಿಟ್ಟುಕೊಳ್ಳುತ್ತಿದ್ದಂತೆಯೇ ಅಷ್ಡರಲ್ಲಾಗಲೇ ಬಸ್ ಭಾಗಶಃ ಸುಟ್ಟುಕರಕಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಪರಿಣಾಮವಾಗಿ  ಬಸ್ ನಲ್ಲಿದ್ದ ಮೂವತ್ತಕ್ಕು ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೈಸೂರಿನ ಪಟಾಕಿ ಗೋದಾಮಿಗೆ ಬೆಂಕಿ, ಸ್ಫೋಟ:
ಹೆಬ್ಬಾಳದ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಜುಪಿಟರ್‌ ಪಟಾಕಿ ಗೋದಾಮಿನಲ್ಲಿ ಬುಧವಾರ ಮಧ್ಯಾಹ್ನ 1.15ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರು.ಮೌಲ್ಯದ ಪಟಾಕಿಗಳು ನಾಶವಾಗಿವೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್‌ ಗೋದಾಮಿನಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ.

ರಾಜ್ಯ ಪೊಲೀಸರ ಭ್ರಷ್ಟಾಚಾರ ಬಗ್ಗೆ ಮೋದಿಗೆ ಟ್ವೀಟ್ ದೂರು, ಫೋನ್ ಪೇ ಮೂಲಕ ಹಣ ಹಾಕಿಸಿಕೊಂ

ದೊಡ್ಡ ಗೋಡೌನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆಯೆ ಬೆಂಕಿಯ ಕೆನ್ನಾಲಿಗೆ ಇಡೀ ಗೋದಾಮನ್ನು ವ್ಯಾಪಿಸಿತು. ಪಟಾಕಿಗಳು ಸಿಡಿಯಲು ಆರಂಭಿಸಿದವು. ಇದರಿಂದಾಗಿ ಸುತ್ತಮುತ್ತಲ ಕಾರ್ಖಾನೆಗಳು ಮತ್ತು ಇತರ ಗೋದಾಮಿನವರು ಭಯ ಭೀತರಾದರು. ಅಕ್ಕಪಕ್ಕದ ಹೊಟೇಲ್‌ನವರು, ಅಂಗಡಿ ಮಾಲೀಕರು, ತಮ್ಮ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ, ಗ್ಯಾಸ್‌ಗಳನ್ನು ಬಂದು ಮಾಡಿ ಹೊರ ಬಂದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸುಮಾರು ಎರಡೂವರೆ ಗಂಟೆ ಶ್ರಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟರಲ್ಲಾಗಲೇ ಲಕ್ಷಾಂತರ ರು.ಮೌಲ್ಯದ ಪಟಾಕಿಗಳು ಸುಟ್ಟು ಭಸ್ಮವಾದವು. 3 ದಿನದ ಹಿಂದೆ 2 ಲೋಡ್‌ ಪಟಾಕಿ ಶಿವಕಾಶಿಯಿಂದ ಬಂದಿತ್ತು ಎನ್ನಲಾಗಿದೆ.

Shivamogga: ಕದ್ದ ಮೊಬೈಲ್ ಮಾರಾಟ, ಹಣಕಾಸಿನ ವಿಷಯದಲ್ಲಿ ನಡೆಯಿತು ಕೊಲೆ!

ಕೈಗಾರಿಕಾ ಪ್ರದೇಶದಲ್ಲಿ ಪಟಾಕಿ ಗೋದಾಮಿಗೆ ಅವಕಾಶ ನೀಡಬಾರದು ಎಂದು ಅನೇಕ ಬಾರಿ ಮನವಿ ಮಾಡಲಾಗಿತ್ತಾದರೂ, ಪ್ರಯೋಜನವಾಗಿಲ್ಲ ಎಂದು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್‌ ಜೈನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios