Asianet Suvarna News Asianet Suvarna News

ಸಿಂಗಲ್‌ ಡೋಸ್‌ ಕೊರೋನಾ ಲಸಿಕೆ ಇಲಿಗಳಲ್ಲಿ ಯಶಸ್ವಿ!

ಸಿಂಗಲ್‌ ಡೋಸ್‌ ಕೊರೋನಾ ಲಸಿಕೆ ಇಲಿಗಳಲ್ಲಿ ಯಶಸ್ವಿ| ಅತಿ ಅಗ್ಗದ ಲಸಿಕೆ ಶೋಧಿಸುತ್ತಿರುವ ವಿಜ್ಞಾನಿಗಳು

Single dose COVID 19 vaccine candidate generates immunity in mice Study pod
Author
Bangalore, First Published Jan 12, 2021, 10:28 AM IST

ನವದೆಹಲಿ(ಜ.12): ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಕೊರೋನಾ ಲಸಿಕೆ ಪಡೆಯುವ ಅನಿವಾರ್ಯತೆಯನ್ನು ತಪ್ಪಿಸಲು ವಿಜ್ಞಾನಿಗಳು ಹೊಸ ಲಸಿಕೆಯೊಂದರ ಶೋಧದಲ್ಲಿ ನಿರತರಾಗಿದ್ದಾರೆ. ಈ ಲಸಿಕೆಯನ್ನು ಒಂದು ಬಾರಿ ಪಡೆದರೆ ಸಾಕು. ಅಲ್ಲದೆ ಈ ಲಸಿಕೆ ಈಗ ಅನುಮತಿ ಪಡೆದುಕೊಂಡಿರುವ ಲಸಿಕೆಗಳಿಗಿಂತ ಅಗ್ಗವಾಗಿದ್ದು, ಸಾಮಾನ್ಯ ಉಷ್ಣಾಂಶದಲ್ಲೇ ಶೇಖರಿಸಿಡಬಹುದಾಗಿದೆ.

ಎಸಿಎಸ್‌ ಸೆಂಟ್ರಲ್‌ ಸೈನ್ಸ್‌ ಜರ್ನಲ್‌ನಲ್ಲಿ ಹೊಸ ಲಸಿಕೆಯ ಕುರಿತು ಅಧ್ಯಯನ ವರದಿ ಪ್ರಕಟವಾಗಿದೆ. ಇಲಿಗಳಲ್ಲಿನ ಕೊರೋನಾ ವೈರಸ್‌ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುವಲ್ಲಿ ಈ ಲಸಿಕೆ ಯಶಸ್ವಿಯಾಗಿದೆ ಎಂದು ಅಮೆರಿಕದ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪೀಟರ್‌ ಕಿಮ್‌ ಅವರು ಅಧ್ಯಯನ ವರದಿ ಪ್ರಕಟಿಸಿದ್ದಾರೆ.

ಕೊರೋನಾ ವೈರಸ್‌ನಲ್ಲಿರುವ ಸ್ಪೈಕ್‌ ಪ್ರೋಟಿನ್‌ನ ಕೆಳಗಿನ ಒಂದು ಭಾಗವನ್ನು ತೆಗೆದು ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಬ್ಬಿಣಾಂಶದ ಪ್ರೋಟಿನ್‌ ಆಗಿರುವ ಫೆರ್ರಿಟಿನ್‌ನ ನ್ಯಾನೋಕಣಗಳ ಜತೆ ಅದನ್ನು ಸೇರಿಸಲಾಗಿದೆ. ದೇಹ ಸೇರುತ್ತಿದ್ದಂತೆ ರೋಗ ನಿರೋಧಕ ಪ್ರೋಟಿನ್‌ಗಳನ್ನು ಇದು ಒದಗಿಸುತ್ತದೆ ಎಂದು ವಿವರಿಸಿದ್ದಾರೆ.

 

Follow Us:
Download App:
  • android
  • ios