Asianet Suvarna News Asianet Suvarna News

ಮಸೀದಿಗೆ ಜಾಗ ಕೊಟ್ಟ ಸಿಖ್: ಸೌಹಾರ್ದತೆ ಕಟ್ಟುತ್ತೇವೆ ಎಂದ ಮುಸ್ಲಿಂ ಬಾಂಧವರು!

ಮಸೀದಿ ನಿರ್ಮಾಣಕ್ಕೆ ಜಾಗ ಕೊಟ್ಟ ಸಿಖ್ ವ್ಯಕ್ತಿ| ಮಸೀದಿಗಾಗಿ 900 ಚದರ ಅಡಿ ಸ್ವಂತ ಜಾಗ ದಾನ| ಉತ್ತರಪ್ರದೇಶದ ಮುಜಾಫರ್‌ನಗರ್‌ದ ಪುರ್ಕಾಜಿಯಲ್ಲಿ ಸೌಹಾರ್ದತೆಯ ಸಂದೇಶ|  ಮಸೀದಿ ನಿರ್ಮಾಣಕ್ಕೆ ಸ್ವಂತ ಜಾಗ ಬಿಟ್ಟುಕೊಟ್ಟ 70 ವರ್ಷದ ಸುಖ್‌ಪಾಲ್ ಸಿಂಗ್ ಬೇಡಿ| ಮಸೀದಿ ಜೊತೆಗೆ ಸೌಹಾರ್ದತೆ ಕಟ್ಟುವ ವಾಗ್ದಾನ ಮಾಡಿದ ಮುಸ್ಲಿಂ ಭಾಂಧವರು|

Sikh Man Donates Land To Bulid Mosque In Mujaffarnagar
Author
Bengaluru, First Published Nov 27, 2019, 1:19 PM IST

ಮುಜಾಫರ್‌ನಗರ್(ನ.27): ಕೋಮುಗಲಭೆಗಳಿಗೆ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದ ಮುಜಫರ್‌ನಗರ್‌ದಲ್ಲಿ, ಈ ಬಾರಿ ಕೋಮು ಸೌಹಾರ್ದತೆಯ ಸಂದೇಶ ವಿನಿಮಯವಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಇಲ್ಲಿನ 70 ವರ್ಷದ ಸಿಖ್ ವ್ಯಕಕ್ತಿಯೋರ್ವ ಮುಸ್ಮಿಂ ಭಾಂಧವರಿಗೆ ಮಸೀದಿ ಕಟ್ಟಲು ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಡುವ ಮೂಲಕ ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ.

ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!

ಸಿಖ್‌ರ ಧರ್ಮಗುರು ಗುರುನಾನಕ್ ದೇವ್ ಅವರ 550ನೇ ಜನ್ಮ ಜಯಂತಿ ಅಂಗವಾಗಿ, ಸಾಮಾಜಿಕ ಕಾರ್ಯಕರ್ತ ಸುಖ್‌ಪಾಲ್ ಸಿಂಗ್ ಬೇಡಿ ಮುಸ್ಲಿಂ ಭಾಂಧವರಿಗೆ ಮಸೀದಿ ಕಟ್ಟಲು ತಮ್ಮ ಸ್ವಂತ ಜಾಗ ನೀಡಿದ್ದಾರೆ.

ಅಯೋಧ್ಯೆ ತೀರ್ಪು: ರಾಮಜನ್ಮಭೂಮಿ ಸನಿಹ ಮಸೀದಿಗಿಲ್ಲ ಜಾಗ?

900 ಚದರ ಅಡಿ ಸ್ವಂತ ಜಾಗವನ್ನು ಪುರ್ಕಾಜಿ ನಗರ ಪಂಚಾಯ್ತಿ ಮುಖ್ಯಸ್ಥ ಜಹೀರ್ ಫಾರೂಖಿ ಅವರಿಗೆ ಸುಖ್‌ಪಾಲ್ ಸಿಂಗ್ ಬೇಡಿ ಹಸ್ತಾಂತರಿಸುವ ಮೂಲಕ ಸೌಹಾರ್ದತೆ ಮೆರೆದರು.

ಇನ್ನು ಜಾಗವನ್ನು ಸ್ವೀಕರಿಸಿರುವ ಮುಸ್ಲಿಂ ಭಾಂಧವರು ಮಸೀದಿ ಜೊತೆ ಜೊತೆಗೆ ಸಮಾಜದಲ್ಲಿ ಸೌಹಾರ್ದತೆಯನ್ನು ಕಟ್ಟುವ ವಾಗ್ದಾನ ಮಾಡಿದರು.

ಅಯೋಧ್ಯೆ ಹೊರ ಭಾಗದಲ್ಲಿ ಮಸೀದಿಗೆ ಜಾಗ ನೀಡಿ, ಸರ್ಕಾರಕ್ಕೆ ವಿಹಿಂಪ ಒತ್ತಾಯ!

Follow Us:
Download App:
  • android
  • ios