ಸಿಖ್ ಪರಂಪರೆಯ ಶ್ರೇಷ್ಠತೆ ವಿವರಿಸಿದ ಪ್ರಧಾನಿ ಮೋದಿ ಪ್ರಧಾನಿ ನಿವಾಸದಲ್ಲಿ ಸಿಖ್ ನಿಯೋಗಕ್ಕೆ ಮೋದಿ ಆತಿಥ್ಯ ಮೋದಿ ನಿವಾಸ ಅಲ್ಲ, ನಿಮ್ಮಲ್ಲರ ನಿವಾಸ ಎಂದ ಮೋದಿ
ನವದೆಹಲಿ(ಏ.29): ಸಂಪೂರ್ಣ ಭಾರತಕ್ಕೆ ಪ್ರೇರಣೆ ನೀಡಬಲ್ಲ, ಒಗ್ಗಟ್ಟಿನಿಂದ ಮುನ್ನಡೆಯಬಲ್ಲ, ಸಿಖ್ ಪರಂಪರೆ ಏಕ ಭಾರತ ಶ್ರೇಷ್ಠ ಭಾರತ ಪರಂಪರೆಯಾಗಿದೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ನಿವಾಸದಲ್ಲಿ ಆಯೋಜಿಸಿದ ಸಿಖ್ ನಿಯೋಗಕ್ಕೆ ಅತಿಥ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೋದಿ ಭಾರತದ ಸಾಧನೆ ಹಾಗೂ ಸಿಖ್ ಸಮುದಾಯದ ಕೊಡುಗೆ ಕುರಿತು ಬೆಳಕು ಚೆಲ್ಲಿದ್ದಾರೆ.
ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ಟರ್ಬನ್ ಧರಿಸಿ ಬಂದ ಮೋದಿ ಎಲ್ಲರ ಗಮನಸೆಳೆದರು. ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಸಿಖ್ ಗುರುಗಳ ಮಾರ್ಗದರ್ಶನ ಭಾರತಕ್ಕೆ ಪ್ರೇರಣೆಯಾಗಿದೆ ಎಂದರು.ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಗುರುದ್ವಾರಕ್ಕೆ ಭೇಟಿ ನೀಡುವ ಸೌಭಾಗ್ಯ ಸಿಕ್ಕಿತ್ತು. ಸಿಖ್ ಸಮುದಾಯದಿಂದ ಹಲವು ದೇಶಗಳ ಜೊತೆಗೆ ಭಾರತದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಮೋದಿ ಹೇಳಿದ್ದಾರೆ.
ಕೊರೊನಾ 4ನೇ ಅಲೆ ತಡೆಗೆ 3T ಸೂತ್ರ: ಸಿಎಂಗಳಿಗೆ ಮೋದಿ ಸೂಚನೆ
ಭಾರತದ ಜನರಿಗೆ ಹೇಗೆ ಲಸಿಕೆ ಸಿಗಲಿದೆ? ಇಷ್ಟು ಜನಸಂಖ್ಯೆ ಹೊಂದಿರುವ ದೇಶಕ್ಕೆ ಲಸಿಕೆ ತಯಾರಿಕೆ ಅಸಾಧ್ಯ, ಪೂರೈಕೆ ಅಸಾಧ್ಯ, ಲಸಿಕೆ ನೀಡುವಿಕೆ ಅಸಾಧ್ಯ ಎಂಬ ಮಾತುಗಳೇ ಕೇಳಿಬರುತ್ತಿದೆ. ಆದರೆ ಇದೀಗ ಇಡೀ ವಿಶ್ವವೇ ನೋಡಿ ಭಾರತದಲ್ಲಿ ಈ ರೀತಿ ಮಾದರಿ ಅನುಸರಿಸಲಾಗಿದೆ. ಯಶಸ್ವಿಯಾಗಿದೆ. ಅದೇ ಮಾರ್ಗ ಅನುಸರಿಸಿ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಮೇಡ್ ಇನ್ ಇಂಡಿಯಾ ಲಸಿಕೆ ನೀಡಲಾಗಿದೆ. ಉಚಿತವಾಗಿ, ಪರಿಣಾಮಕಾರಿಯಾಗಿ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ದೇಶ ಮೊದಲು ಇದು ನಮ್ಮ ಧ್ಯೇಯ. ಗುರು ನಾನಕ್ ಇಡೀ ರಾಷ್ಟ್ರವನ್ನೇ ಕತ್ತಲಿನಿಂದ ಮುಕ್ತಿ ನೀಡಿದ್ದಾರೆ. ಇಡೀ ಭಾರತ ಪ್ರವಾಸ ಮಾಡಿ ಪ್ರೇರಣೆ ನೀಡಿದ್ದಾರೆ. ಪಂಜಾಬ್‌ನಿಂದ ಹಿಡಿದು ಎಲ್ಲಾ ರಾಜ್ಯಗಳಲ್ಲಿನ ಗುರುದ್ವಾರ ಶಾಂತಿ, ಸೌಹಾರ್ಧತೆ ಮಂತ್ರದ ಜೊತೆಗೆ ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಿಖ್ ಪರಂಪರೆ ಏಕ ಭಾರತ ಶ್ರೇಷ್ಠ ಭಾರತ ಪರಂಪರೆಯಾಗಿದೆ ಎಂದು ಮೋದಿ ಹೇಳಿದ್ದಾರೆ.
ವಾರಾಣಸಿಯ ಈ ಹೆಣ್ಮಗಳ ಅಭಿಮಾನಿ ಪಿಎಂ ಮೋದಿ, ಅಂದು ಪ್ರಧಾನಿಯೇ ಶಿಖಾಗೆ ನಮಿಸಿದ್ದೇಕೆ?
ಗುರು ತೇಗ್ ಬಹದ್ದೂರ್ 400ನೇ ವರ್ಷ ಜಯಂತಿ ಆಚರಣೆ ಮಾಡಲಾಗಿದೆ. ಇದೇ ವೇಳೆ ಕರ್ತಾಪುರ್ ಕಾರಿಡಾರ್ ಯೋಜನೆಯನ್ನು ಮರು ಚಾಲನೆ ನೀಡಲಾಗಿದೆ. ಅಮೃತ ಮಹತೋತ್ಸವದ ಈ ಕಾಲದಲ್ಲಿ ಅಮೃತಸರದ ಸರೋವರ ಅಭಿಯಾನಕ್ಕೆ ಚಾಲನೆ ನೀಡಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.
ಇದು ಮೋದಿ ನಿವಾಸ ಅಲ್ಲ, ನಿಮ್ಮಲ್ಲೆರ ಅಧಿಕಾರದ ಮನೆ. ಮತ್ತೆ ಮತ್ತೆ ಈ ನಿವಾಸದಲ್ಲಿ ಎಲ್ಲರನ್ನೂ ಭೇಟಿಯಾಗಿ ಭಾರತ ಮಾತೆಯ ಈ ಪುಣ್ಯ ಭೂಮಿಯ ಅಭಿವೃದ್ಧಿಯಲ್ಲಾ ಪಾಲುದಾರರಾಗೋಣ ಎಂದು ಮೋದಿ ಹೇಳಿದ್ದಾರೆ. ನಾವು ದೇಶದ ಯಾವುದೇ ಮೂಲೆಯಲ್ಲಿರಲಿ, ದೇಶ ಮೊದಲು ಚಿಂತನೆ ನಮ್ಮದಾಗಬೇಕು ಎಂದು ಮೋದಿ ಹೇಳಿದ್ದಾರೆ.
2015ರಲ್ಲಿ ಕೆನಡಾ ಪ್ರವಾಸ ನೆನಪಿಸಿದ ಮೋದಿ
2015ರಲ್ಲಿ ಪ್ರಧಾನಿ ಮೋದಿ ಕೆನಾಡ ಪ್ರವಾಸ ನೆನಪಿಸಿದ ಮೋದಿ, ದ್ವಿಪಕ್ಷೀಯ ಒಪ್ಪಂದ, ಮಾತುಕತೆ ಬಳಿಕ ನೇರವಾಗಿ ಸಿಖ್ ಗುರುದ್ವಾರಕ್ಕೆ ತೆರಳಿ ಅನುಗ್ರಹ ಪಡೆಯುವ ಅವಕಾಶ ಸಿಕ್ಕಿತ್ತು.ಇದೇ ವೇಳೆ ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳ ಪ್ರವಾಸದಲ್ಲಿ ಗುರುದ್ವಾರ ಭೇಟಿ ನೀಡಿ ಆರ್ಶಿವಾದ ಪಡೆಯುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದ ಮೋದಿ ಹೇಳಿದ್ದಾರೆ.
