Asianet Suvarna News Asianet Suvarna News

ವಾರಾಣಸಿಯ ಈ ಹೆಣ್ಮಗಳ ಅಭಿಮಾನಿ ಪಿಎಂ ಮೋದಿ, ಅಂದು ಪ್ರಧಾನಿಯೇ ಶಿಖಾಗೆ ನಮಿಸಿದ್ದೇಕೆ?

* ವಿಕಲ ಚೇತನ ಹೆಣ್ಮಗಳಿಗೆ ಬದುಕಲು ದಾರಿ

* ಶಿಖಾಗೆ ಎರಡು ಲಕ್ಷ ರೂಪಾಯಿ ಹಣ ಹಾಗೂ ವಿಧ್ವನಾಥನ ಆವರಣದಲ್ಲಿ ಒಂದು ಶಾಪ್‌ ಕೊಡಿಸಿದ ಸಿಎಂ

* ಮತ್ತೆ ವೈರಲ್ ಆಯ್ತು ಶಿಖಾ ಸ್ಟೋರಿ

 

specially abled Varanasi girl Shikha gets 2L cheque from Yogi also gest a ashop in Viswanath dham pod
Author
Bangalore, First Published Apr 26, 2022, 3:37 PM IST | Last Updated Apr 26, 2022, 3:39 PM IST

ವಾರಾಣಸಿ(ಏ.26): ಒಬ್ಬ ವ್ಯಕ್ತಿಯು ಉತ್ಸಾಹವನ್ನು ಹೊಂದಿದ್ದರೆ, ಯಾದೆಷ್ಟೇ ದೊಡ್ಡ ಸಮಸ್ಯೆ ಎದುರಾದರೂ ಅದು ಅಡಚಣೆಯಾಗುವುದಿಲ್ಲ. ಈ ಸತ್ಯವನ್ನು ವಾತರಾಣಸಿಯ ವಿಕಲ ವಚೇತನ ಯುವತಿ ಶಿಖಾ ರಸ್ತೋಗಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಎತ್ತರ ಸಮಸ್ಯೆ ಮತ್ತು ಕಷ್ಟದ ಜೀವನ ಹೊರತಾಗಿಯೂ, ಅವರು ಎಂದಿಗೂ ಸೋಲಲಿಲ್ಲ . ತನ್ನನ್ನು ತಾನೇ ಸ್ವಾವಲಂಬಿಯನ್ನಾಗಿ ಮಾಡಲು, ಸಿಖಾ ಹೊಲಿಗೆ ಕೆಲಸ ಮಾಡಲು ಪ್ರಾರಂಭಿಸಿರು. ಇದರೊಂದಿಗೆ ಸಮಾಜ ಸೇವೆಯನ್ನೂ ಮಾಡಿದಳು. ಶಿಖಾ ಅವರ ಈ ಸ್ಪೂರ್ತಿಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸಿಎಂ ಯೋಗಿ ಆದಿತ್ಯನಾಥ್ ವರೆಗೆ ಅಭಿಮಾನಿಗಳಾಗಿದ್ದಾರೆ.

ತಲೆಬಾಗಿ ನಮಸ್ಕರಿಸಿದ್ದ ಪ್ರಧಾನಿ ಮೋದಿ

ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ವಾರಣಾಸಿಗೆ ಆಗಮಿಸಿದ್ದಾಗ, ಶಿಖಾ ಅವರ ಹೆಸರನ್ನು ಕೂಗಿದ್ದರು. ವಿಕಲ ಚೇತನ ಹೆಣ್ಮಗಳು ಶಿಖಾ ಅವರ ಧ್ವನಿಯನ್ನು ಕೇಳಿದ ನಂತರ ಪ್ರಧಾನಿ ಮೋದಿ ಅಲ್ಲಿಯೇ ನಿಂತಿದ್ದರು. ಇದಾದ ನಂತರ ಶಿಖಾಳನ್ನು ಮಾತನಾಡಿಸಿ ಆಕೆಯ ಕಥೆಯನ್ನು ಆಲಿಸಿದರು. ಶಿಖಾಳ ಉತ್ಸಾಹವನ್ನು ಕಂಡು ಅವರೂ ಅವಳ ಅಭಿಮಾನಿಯಾಗಿ ತಲೆಬಾಗಿ ನಮಸ್ಕರಿಸಿದನು.

ಸಿಎಂ ಯೋಗಿ ಜೊತೆ ಮಾತನಾಡುತ್ತಿದ್ದೇನೆ

ವಿಕಲ ಚೇತನ ಶಿಖಾಳಿಗೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಹಾಯ ಮಾಡಿದ್ದಾರೆ. ಏಪ್ರಿಲ್ 21 ರಂದು, ಶಿಖಾ ಅವರು ಲಕ್ನೋದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದಾಗ, ಅವರು ಕಾಶಿ ವಿಶ್ವನಾಥ್ ಕಾರಿಡಾರ್‌ನಲ್ಲಿ ಅಂಗಡಿಯನ್ನು ನೀಡುವಂತೆ ಒತ್ತಾಯಿಸಿದರು. ಶಿಖಾ ಅವರ ಬೇಡಿಕೆಯನ್ನು ಆಲಿಸಿದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಎರಡು ಲಕ್ಷ ರೂಪಾಯಿ ಸಹಾಯಧನವೂ ದೊರೆಯುವಂತೆ ಮಾಡುತ್ತೇನೆ ಎಂದೂ ಹೇಳಿದ್ದಾರೆ. ಸಿಎಂ ನಿವಾಸದ ಆತಿಥ್ಯಕ್ಕೆ ಶಿಖಾ ಬೆರಗಾಗಿದ್ದಾರೆ.

ಅಂಗವಿಕಲದಿಂದ ವಿಕಲಚೇತನ ಆದಾಗ ಬದಲಾಯ್ತು ಬದುಕು

ಅಂಗವಿಕಲರನ್ನು ವಿಕಲ ಚೇತನ ಎಂದು ಘೋಷಿಸಿದಾಗ ತನ್ನ ಜೀವನ ಬದಲಾಗಿದೆ ಎಂದು ವಾರಾಣಸಿಯ ಮಗಳು ಶಿಖಾ ಹೇಳಿದ್ದಾರೆ. ಹಿಂದೆ ಜನರು ತನನ್ನು ನಮ್ರತೆಯಿಂದ ನೋಡುತ್ತಿದ್ದರು. ಯಾವಾಗ ಪ್ರಧಾನಿಯವರು ಅವರನ್ನು ವಿಕಲ ಚೇತನಳು ಎಂದು ಕರೆದು ಗೌರವಿಸಿದರು, ಆಗ ಜನರ ವರ್ತನೆ ಇನ್ನಷ್ಟು ಬದಲಾಯಿತು. ತಾನು ಯಾರಿಗೂ ಕಮ್ಮಿ ಇಲ್ಲ ಎಂಬ ಭಾವನೆ ಹುಟ್ಟಿತು ಎನ್ನುತ್ತಾರೆ ಶಿಖಾ.

Latest Videos
Follow Us:
Download App:
  • android
  • ios