ನಿಮ್ಮ ಬಳಿ ಆಟೋಗ್ರಾಫ್ ತಗೋಬೇಕು: ಪ್ರಧಾನಿ ಮೋದಿ ಬಳಿ ದುಂಬಾಲು ಬಿದ್ದ ವಿಶ್ವದ ದೊಡ್ಡಣ್ಣ ಜೋ ಬೈಡೆನ್!
ಯುಎಸ್ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿ ಅವರ ಆಟೋಗ್ರಾಫ್ ಕೇಳಿದರು ಎಂದು ವರದಿಗಳು ತಿಳಿಸಿವೆ. ದೊಡ್ಡ ಜನಸಂದಣಿಯನ್ನು ಅವರು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಕಂಡುಕೊಂಡ ನಂತರ ಹೀಗೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಹಿರೋಷಿಮಾ (ಜಪಾನ್) (ಮೇ 21, 2023): ಜಪಾನ್‌ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ, ಜಪಾನ್ ನಾಯಕರು ಸೇರಿ ವಿಶ್ವದ ಅನೇಕ ರಾಷ್ಟ್ರಗಳ ನಾಯಕರು ಆಗಮಿಸಿದ್ದಾರೆ. ಇನ್ನು, ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಕ್ವಾಡ್ ಸಭೆ ರದ್ದಾದರೂ, ಜಪಾನ್‌ನಲ್ಲಿ ಕ್ವಾಡ್ ಸದಸ್ಯರು ಭೇಟಿಯಾಗಿ ಮಾತನಾಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ಮೋದಿಯನ್ನು ಆಲಿಂಗನ ಮಾಡಿದ್ದ ವರದಿಯೂ ಆಗಿತ್ತು. ಈಗ ಅಮೆರಿಕ ಅಧ್ಯಕ್ಷರು ಪ್ರಧಾನಿ ಮೋದಿ ಬಳಿ ಆಟೋಗ್ರಾಫ್ ಕೇಳಿದ್ದಾರೆ ನೋಡಿ..
ಹೌದು, ಯುಎಸ್ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿ ಅವರ ಆಟೋಗ್ರಾಫ್ ಕೇಳಿದರು ಎಂದು ವರದಿಗಳು ತಿಳಿಸಿವೆ. ದೊಡ್ಡ ಜನಸಂದಣಿಯನ್ನು ಅವರು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಕಂಡುಕೊಂಡ ನಂತರ ಹೀಗೆ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಜಿ 7 ಶೃಂಗಸಭೆಯ ನಡುವೆ ಕ್ವಾಡ್ ಸಭೆ ನಡೆದಿದೆ. ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಭಾಗಿಯಾಗಿದ್ದರು. ಈ ವೇಳೆ, ಯುಎಸ್ ಅಧ್ಯಕ್ಷರು ಪ್ರಧಾನಿ ಮೋದಿಯವರ ಬಳಿಗೆ ಬಂದು ಅಮೆರಿಕದ ವೈಟ್‌ಹೌಸ್ ಅಥವಾ ಶ್ವೇತ ಭವನದಲ್ಲಿ ನಡೆಯುವ ಭಾರತದ ಪ್ರಧಾನ ಮಂತ್ರಿಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಐಪಿಗಳಿಂದ ವಿನಂತಿಗಳ ಮಹಾಪೂರವೇ ಹರಿದುಬರುತ್ತಿದೆ ಎಂದು ಹೇಳಿದರು.
ಇದನ್ನು ಓದಿ: ಕ್ವಾಡ್ ಶೃಂಗಸಭೆ ರದ್ದಾದ್ರೂ ಆಸ್ಪ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ; ಜೋ ಬೈಡೆನ್ ಭೇಟಿಯಾಗ್ತಾರಾ ಮೋದಿ?
ಪ್ರಧಾನಿ ಮೋದಿ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಅಧ್ಯಕ್ಷ ಬೈಡೆನ್ "ನೀವು ನನಗೆ ನಿಜವಾದ ಸಮಸ್ಯೆಯನ್ನು ಉಂಟುಮಾಡುತ್ತಿದ್ದೀರಿ. ಮುಂದಿನ ತಿಂಗಳು, ನಾವು ನಿಮಗಾಗಿ ವಾಷಿಂಗ್ಟನ್‌ನಲ್ಲಿ ಔತಣಕೂಟವನ್ನು ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಇಡೀ ದೇಶದ ಪ್ರತಿಯೊಬ್ಬರೂ ಬರಲು ಬಯಸುತ್ತಿದ್ದಾರೆ. ಈಗಾಗ್ಲೇ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿದೆ. ನೀವು ಯೋಚಿಸುತ್ತೀರಿ ನಾನು ತಮಾಷೆ ಮಾಡುತ್ತಿದ್ದೇನೆ ಎಂದು. ಆದರೆ, ನನ್ನ ತಂಡವನ್ನು ಕೇಳಿ. ನಾನು ಹಿಂದೆಂದೂ ಕೇಳಿರದ ಜನರಿಂದ ನನಗೆ ಫೋನ್ ಕರೆಗಳು ಬರುತ್ತಿವೆ. ಚಲನಚಿತ್ರ ನಟರಿಂದ ಸಂಬಂಧಿಕರವರೆಗೆ ಎಲ್ಲರಿಂದಲೂ ಫೋನ್ ಕರೆ ಬರುತ್ತಿದೆ. ನೀವು ತುಂಬಾ ಜನಪ್ರಿಯರು." ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮೋದಿಗೆ ಹೇಳಿದ್ದಾರೆ.
ಅಲ್ಲದೆ, ಮಿಸ್ಟರ್ ಪ್ರಧಾನ ಮಂತ್ರಿ, ನಾವು ಕ್ವಾಡ್‌ನಲ್ಲಿ ಏನು ಮಾಡುತ್ತಿದ್ದೇವೆ ಎಂಬುದು ಸೇರಿದಂತೆ ಎಲ್ಲದರ ಮೇಲೆ ನೀವು ಗಮನಾರ್ಹ ಪರಿಣಾಮ ಬೀರಿದ್ದೀರಿ. ನೀವು ಹವಾಮಾನದಲ್ಲಿ ಮೂಲಭೂತ ಬದಲಾವಣೆಯನ್ನೂ ಮಾಡಿದ್ದೀರಿ. ಇಂಡೋ - ಪೆಸಿಫಿಕ್‌ನಲ್ಲಿ ನಿಮ್ಮ ಪ್ರಭಾವವಿದೆ. ನೀವು ವ್ಯತ್ಯಾಸವನ್ನು ಮಾಡುತ್ತಿದ್ದೀರಿ" ಎಂದೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದರು.
ಇದನ್ನೂ ಓದಿ: ಮೇ 19ರಿಂದ 6 ದಿನ ಮೋದಿ ವಿದೇಶ ಪ್ರವಾಸ: 71 ಸಾವಿರ ಜನರಿಗೆ ಉದ್ಯೋಗ ಪತ್ರ ವಿತರಣೆ
ಈ ವೇಳೆ, ಆಸ್ಟ್ರೇಲಿಯ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಸಹ ಸಂವಾದದಲ್ಲಿ ಸೇರಿಕೊಂಡರು ಮತ್ತು ಸಿಡ್ನಿಯಲ್ಲಿ ಸಮುದಾಯ ಸ್ವಾಗತಕ್ಕಾಗಿ 20,000 ಸಾಮರ್ಥ್ಯವಿರುವ ಹಾಲ್ ಬುಕ್ ಮಾಡಲಗಿದೆ. ಆದರೆ, ನನಗೆ ಬರುತ್ತಿರುವ ವಿನಂತಿಗಳನ್ನು ಸರಿಹೊಂದಿಸಲು ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಅಲ್ಲದೆ, ತಮ್ಮ ಭಾರತದ ಭೇಟಿ ವೇಳೆ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 90,000 ಕ್ಕೂ ಹೆಚ್ಚು ಜನರು ಪ್ರಧಾನಿ ಮೋದಿಯನ್ನು ಹೇಗೆ ಸ್ವಾಗತಿಸಿದರು ಎಂಬುದನ್ನು ಆಂಥೋನಿ ಅಲ್ಬನೀಸ್ ವಿವರಿಸಿದ್ದಾರೆ.
ಇದಕ್ಕೆ ಅಮೆರಿಕ ಅಧ್ಯಕ್ಷರು ಪ್ರಧಾನಿ ಮೋದಿ ಬಳಿ ‘ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು’ ಎಂದರು. ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಜಪಾನ್‌ಗೆ ತೆರಳಿದ್ದರು. ಪ್ರಧಾನಮಂತ್ರಿಯವರು ತಮ್ಮ ಜಪಾನ್ ಸಹವರ್ತಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪೂರ್ವ ಏಷ್ಯಾ ದೇಶಕ್ಕೆ ಭೇಟಿ ನೀಡಿದ್ದು, ಪ್ರಬಲ ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿ ಜಪಾನ್ G7 ಶೃಂಗಸಭೆಯನ್ನು ಆಯೋಜಿಸಿದೆ.
ಇದನ್ನೂ ಓದಿ: ಸೆಪ್ಟೆಂಬರ್‌ಗೆ ಜೋ ಬೈಡೆನ್ ಭಾರತಕ್ಕೆ; 2024 ನಮ್ಮ ಬಾಂಧವ್ಯಕ್ಕೆ ದೊಡ್ಡ ವರ್ಷ: ಅಮೆರಿಕ