ಮಗನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಂದೆ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆದ್ರೆ ಇದೀಗ ಪ್ರಕರಣಕ್ಕೆ ಮಗನೇ ಟ್ವಿಸ್ಟ್ ಕೊಟ್ಟಿದ್ದಾನೆ.
ಚಂಡೀಗಢ: ಜಗತ್ತಿನಲ್ಲಿ ಯಾರು ಬೇಕಾದರೂ ಶತ್ರುಗಳು ಆಗಬಹುದು. ಆದ್ರೆ ತಾಯಿ ಎಂದಿಗೂ ಮಕ್ಕಳನ್ನು ಶತ್ರುಗಳಂತೆ ಕಾಣಲ್ಲ. ತಾಯಿ ಮಕ್ಕಳನ್ನು (Mother And Children) ದಂಡಿಸುತ್ತಾಳೆ, ಶಿಕ್ಷಿಸುತ್ತಾಳೆ. ಆದರೆ ಇದೆಲ್ಲವೂ ಮಕ್ಕಳ ಒಳ್ಳೆಯದಕ್ಕಾಗಿರುತ್ತದೆ. ಆದ್ರೆ ಇತ್ತೀಚೆಗೆ ಆಘಾತಕಾರಿ ವಿಡಿಯೋವೊಂದು (Shocking Video) ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬಳು ತಾನು ಅಮ್ಮ ಅನ್ನೋದನ್ನು ಮರೆತು 11 ವರ್ಷದ ಮಗನನ್ನು ಕ್ರೂರವಾಗಿ ಥಳಿಸಿದ್ದಾಳೆ. ಮಗನ ಮೇಲೆ ಕುಳಿತು ತಾಯಿ ಥಳಿಸಿರುವ ವಿಡಿಯೋ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿದೆ. ಈ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ (Faridabad, Haryana) ನಡೆದಿದ್ದು, ಮಗನ ಮೇಲೆನ ಹಲ್ಲೆ (Woman Assault Son) ನಡೆಸಿರುವ ಮಹಿಳೆ ವೈದ್ಯೆ ಎಂದು ಗುರುತಿಸಲಾಗಿದೆ.
ಮಗುವಿನ ತಂದೆ ಎಂಜಿನೀಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಮಗನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವ್ಯಕ್ತಿ, ಪತ್ನಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಮಹಿಳೆಯ ಮೃಗೀಯ ವರ್ತನೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಪತ್ನಿಯ ವಿರುದ್ಧ ದೂರು ದಾಖಲಿಸಿದ ಪತಿ!
ಮಗನ ಮೇಲೆ ಹಲ್ಲೆ ನಡೆಸೋದನ್ನು ಖಂಡಿಸಿದ್ದಕ್ಕೆ ಪುತ್ರನಿಗೆ ವಿಷ ಕೊಟ್ಟು, ತಾನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಪತ್ನಿ ಬೆದರಿಕೆ ಹಾಕಿದ್ದಳು ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮೊದಲು ಮಹಿಳೆ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ದೂರು ನೀಡಲಾಗಿತ್ತು. ಇದೀಗ ಈ ಪ್ರಕರಣವನ್ನು ಸೂರಜ್‌ಕುಂಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಾಯಿ ಕಳೆದುಕೊಂಡ ಮರಿ ಆನೆ ರಕ್ಷಿಸಿ ಮಗುವಿನಂತೆ ಆರೈಕೆ, ಫೋಟೋ ಹಂಚಿಕೊಂಡ IFS ಅಧಿಕಾರಿ!
ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಮಗ
ದೂರು ದಾಖಲಾಗುತ್ತಿದ್ದಂತೆ ಮಹಿಳೆ ತನ್ನ ಮಗನ ಜೊತೆ ತವರು ಸೇರಿದ್ದಾಳೆ. ಹಲ್ಲೆಗೊಳಗಾದ 11 ವರ್ಷದ ಬಾಲಕ ತನ್ನ ತಂದೆಯೋರ್ವ ವ್ಯಸನಿ ಎಂದು ಮಕ್ಕಳ ಕಲ್ಯಾಣ ಸಮಿತಿಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಘಟನೆಯ ಸತ್ಯಾಸತ್ಯತೆಯನ್ನು ತಿಳಿಯಲು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಗುವಿನಿಂದ ಬಲವಂತವಾಗಿ ಹೇಳಿಕೆ ಕೊಡಿಸಲಾಗಿದೆ ಎಂಬುದರ ಸತ್ಯಾಸತ್ಯೆಯ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕನ ತಂದೆ ಹೇಳೋದೇನು?
17 ವರ್ಷದ ಹಿಂದೆ ದೆಹಲಿಯಲ್ಲಿ ನಮ್ಮ ಮದುವೆಯಾಗಿತ್ತು. ನಮಗೆ 11 ವರ್ಷದ ಮಗನಿದ್ದು, ಶಾಲೆಯಲ್ಲಿಯೂ ಒಳ್ಳೆಯ ವಿದ್ಯಾರ್ಥಿಯಾಗಿದ್ದಾನೆ. ಅಷ್ಟು ಮಾತ್ರವಲ್ಲದೇ ಒಳ್ಳೆಯ ಚಿತ್ರಕಾರ ಅಂತ ಬಾಲಕನ ತಂದೆ ಹೇಳುತ್ತಾರೆ. ಮಗ ದೊಡ್ಡವನಾಗುತ್ತಿದ್ದಂತೆ ಪತ್ನಿ ಅವನ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್ ಆಗಲಾರಂಭಿಸಿದಳು. ಅವನ ಮೇಲೆ ಹೆಚ್ಚು ಒತ್ತಡ ಹಾಕಿ ಹಲ್ಲೆಯೂ ಮಾಡಲಾರಂಭಿಸಿದಳು. ಮಗನಿಗೆ ಆಟವಾಡಲು, ಪೇಟಿಂಗ್ ಮಾಡಲು ಪತ್ನಿ ಬಿಡುತ್ತಿರಲಿಲ್ಲ. ಕೇವಲ ಮಗ ಓದಬೇಕು ಅನ್ನೋದು ಆಕೆಯ ಒತ್ತಡ ಆಗಿತ್ತು. ಆದ್ದರಿಂದ ಬೆಡ್‌ರೂಮ್ ಸೇರಿದಂತೆ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ ಎಂದು ಬಾಲಕನ ತಂದೆ ಹೇಳಿದ್ದಾರೆ.
Watch : ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಗುವನ್ನು ಪ್ರಾಣ ಪಣಕ್ಕಿಟ್ಟು ಕಾಪಾಡಿದ ಸ್ಥಳೀಯರು; ಬದುಕುಳಿದಿದ್ದೇ ರೋಚಕ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೂರಜ್‌ಕುಂಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಂಶೇರ್ ಸಿಂಗ್, ಚುನಾವಣೆ ಕರ್ತವ್ಯ ಹಿನ್ನೆಲೆ ಮಗುವಿನ ಹೇಳಿಕೆಯನ್ನು ನಾವು ದಾಖಲಿಸಿಕೊಂಡಿಲ್ಲ. ಶೀಘ್ರದಲ್ಲಿಯೇ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
