ತಾಯಿ ಕಳೆದುಕೊಂಡ ಮರಿ ಆನೆ ರಕ್ಷಿಸಿ ಮಗುವಿನಂತೆ ಆರೈಕೆ, ಫೋಟೋ ಹಂಚಿಕೊಂಡ IFS ಅಧಿಕಾರಿ!
ಮರಿ ಆನೆಗೆ ಜನ್ಮ ನೀಡಿದ ಕೆಲವೇ ದಿನದಲ್ಲಿ ತಾಯಿ ಆನೆ ಮೃತಪಟ್ಟಿದೆ. ದಟ್ಟಾರಣ್ಯದಲ್ಲಿ ತಾಯಿ ಆನೆ ಮುಂದೆ ರೋಧಿಸುತ್ತಿದ್ದ ಮರಿ ಆನೆಯನ್ನು ರಕ್ಷಿಸಿ ತಂದಿರುವ ಅರಣ್ಯಾಧಿಕಾರಿಗಳು ಮಗುವಿನಂತೆ ಆರೈಕೆ ಮಾಡಲಾಗುತ್ತಿದೆ. ಈ ಪೋಟೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನವದೆಹಲಿ(ಮೇ.28) ಆನೆಗಳ ಕುಟುಂಬ ಹೆಚ್ಚು ಒಗ್ಗಟ್ಟಾಗಿ ಜೊತೆಯಾಗಿ ಇರುತ್ತದೆ. ಇದರಿಂದ ತನ್ನ ಮರಿಗಳಿಗೆ ಗರಿಷ್ಠ ರಕ್ಷಣೆ ನೀಡುತ್ತದೆ. ಇತ್ತೀಚೆಗೆ ದಟ್ಟ ಕಾಡಿನಲ್ಲಿ ಮರಿ ಆನೆಗೆ ಜನ್ಮ ನೀಡಿದ ಕೆಲವೇ ದಿನದಲ್ಲಿ ತಾಯಿ ಆನೆ ಮೃತಪಟ್ಟಿದೆ. ತಾಯಿ ಆನೆ ಪಕ್ಕದಲ್ಲೇ ನಿಂತು ರೋಧಿಸುತ್ತಿದ್ದ ಮರಿ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಲಾಗಿದೆ. ಈ ಕುರಿತು ಅರಣ್ಯಾಧಿಕಾರಿ ಪ್ರವೀಣ್ ಕಾಸ್ವಾನ್ ಫೋಟೋ ಹಂಚಿಕೊಂಡಿದ್ದಾರೆ.
ಮೃತಪಟ್ಟ ತಾಯಿ ಆನೆ ಬಳಿಯಿಂದ ಮರಿ ಆನೆಯನ್ನು ರಕ್ಷಿಸಿ ವನ್ಯಜೀವಿ ಕ್ಯಾಂಪ್‌ಗೆ ತರಲಾಗಿದೆ. ಇಲ್ಲಿ ವನ್ಯಜೀವಿಗಳ ವೈದ್ಯರ ಸೂಚನೆಯಂತೆ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ತಾತ್ಕಾಲಿಕವಾಗಿ ಈ ಕ್ವಾರಂಟನ್‌ನಲ್ಲಿ ಇಡಲಾಗಿದೆ. ಇಲ್ಲಿ ಆನೆ ಮರಿಯ ಆರೈಕೆ ಮಾಡಲಾಗುತ್ತದೆ ಎಂದು ಪ್ರವೀಣ್ ಕಾಸ್ವಾನ್ ಹೇಳಿದ್ದಾರೆ. ಈ ಕುರುತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿಶ್ರಾಂತಿ ವೇಳೆ ಮರಿಯಾನೆಗೆ ಆನೆ ಕುಟುಂಬದ Z ಪ್ಲಸ್ ಭದ್ರತೆ, ಅಣ್ಣಾಮಲೈ ಅರಣ್ಯದ ವಿಡಿಯೋ ವೈರಲ್!
ಹೆಣ್ಣು ಮರಿ ಆನೆ ತಾಯಿಯನ್ನು ಕಳೆದುಕೊಂಡಿದೆ. ಮರಿ ಆನೆಯನ್ನು ರಕ್ಷಿಸಿ ಇದೀಗ ತಾತ್ಕಾಲಿಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ನಿರಂತರ ವೈದ್ಯರು ನಿಗಾ ವಹಿಸಲಿದ್ದಾರೆ. ರಾಷ್ಟ್ರೀಯ ಕ್ಯಾಂಪ್‌ನಲ್ಲಿ ಶೀಘ್ರದಲ್ಲೇ ಮರಿ ಆನೆ ಹೊಂದಿಕೊಳ್ಳಲಿದೆ ಎಂದು ಪ್ರವೀಣ್ ಕಾಸ್ವಾನ್ ಹೇಳಿದ್ದಾರೆ.
ಪ್ರವೀಣ್ ಕಾಸ್ವಾನ್ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಕೆಲ ಪ್ರಶ್ನೆಗಳು, ಆತಂಕಕ್ಕೆ ಅರಣ್ಯಾಧಿಕಾರಿ ಉತ್ತರ ನೀಡಿದ್ದಾರೆ. ಆನೆಗಳ ಕುಟುಂಬ ಸಂಬಂಧ ಅತ್ಯುತ್ತವಾಗಿದೆ. ಆನೆಗಳ ಹಿಂಡುಗಳ ಜೊತೆಗಿದ್ದರೆ ಇತರ ತಾಯಿ ಆನೆಗಳು ಮರಿ ಆನೆಯ ರಕ್ಷಣೆ, ಆರೈಕೆ ಮಾಡಲಿದೆ ಅಲ್ಲವೇ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ಪ್ರವೀಣ್ ಕಾಸ್ವಾನ್, ಇಲ್ಲಿ ತಾಯಿ ಆನೆ ಹಿಂಡಿನಿಂದ ಬೇರ್ಪಟ್ಟಿತ್ತು. ತಾಯಿ ಆನೆ ಹಾಗೂ ಮರಿ ಆನೆ ಮಾತ್ರ ಪ್ರತ್ಯೇಕವಾಗಿ ಕಾಡಿನಲ್ಲಿತ್ತು. ಮರಿ ಆನೆಗೆ ಜನ್ಮ ನೀಡಿದ ಕೆಲವೇ ದಿನದಲ್ಲಿ ತಾಯಿ ಆನೆ ಮೃತಪಟ್ಟಿದೆ. ನಾವು ಎಲ್ಲಾ ರೀತಿಯಲ್ಲಿ ಕೂಲಂಕುಷವಾಗಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅರಣ್ಯಧಿಕಾರಿ ಹೇಳಿದ್ದಾರೆ.
ಬಂಡೀಪುರ- ಊಟಿ ಹೆದ್ದಾರಿಯಲ್ಲಿ ಹುಲಿ ದಾಳಿ; ಮರಿಯಾನೆ ಸಾವಿನಿಂದ ರಸ್ತೆಯಿಂದ ಕದಲದ ತಾಯಿ ಆನೆ
ಹಿಂಡಿನಿಂದ ಬೇರ್ಪಟ್ಟಿದ್ದ ತಾಯಿ ಆನೆ, ಮರಿ ಆನೆಗೆ ಜನ್ಮ ನೀಡಿದೆ. ಆದರೆ ತಾಯಿ ಆನೆ ಮೃತಪಟ್ಟ ಕಾರಣ ಮರಿ ಆನೆ ಒಂಟಿಯಾಗಿತ್ತು. ಇತ್ತ ತಾಯಿ ಆನೆ ಬಳಿಯಿಂದ ಮರಿ ಆನೆ ಒಂದೆರೆಡು ದಿನವಾದರೂ ಕದಲಿರಲಿಲ್ಲ. ಆಹಾರವಿಲ್ಲದೆ ಮರಿ ಆನೆಯ ಪರಿಸ್ಥಿತಿಯೂ ಹದಗೆಟ್ಟಿತು. ಹೀಗಾಗಿ ಅರಣ್ಯಾಧಿಕಾರಿಗಳು ನೆರವಿಗೆ ಧಾವಿಸಿದ್ದಾರೆ.