Gyanvyapi Masjid Survey ಅಂತ್ಯ, ಬಾವಿಯಲ್ಲಿ ಶಿವಲಿಂಗ ಪತ್ತೆ: ವಕೀಲ

Gyanvapi Survey Updates: ಗ್ಯಾನವಾಪಿ ಮಸೀದಿ ಸಮೀಕ್ಷೆ ವೇಳೆ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ, ಇದು ಪ್ರಕರಣದ ಬಹುದೊಡ್ಡ ಸಾಕ್ಷಿಯಾಗಲಿದೆ ಎಂದು ಅರ್ಜಿದಾರರ ಪರ ವಕೀಲರು ಅಭಿಪ್ರಾಯಪಟ್ಟಿದ್ದಾರೆ. 

Shivling found in Gyanvapi well during survey says lawyer

ನವದೆಹಲಿ (ಮೇ 16): ಗ್ಯಾನವ್ಯಾಪಿ ಮಸೀದಿಯೊಳಗೆ ವಿಡಿಯೋ ಸಮೇತ ಸರ್ವೇ (Gyanvapi masjid video survey) ಕಾರ್ಯ ಅಂತ್ಯಗೊಂಡಿದ್ದು, ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಅರ್ಜಿದಾರರ ಪರ ವಕೀಲ ಹೇಳಿದ್ದಾರೆ. ಕೋರ್ಟ್‌ ಗ್ಯಾನವ್ಯಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ನಾಳೆ ಮಂಗಳವಾರ ಸರ್ವೇ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳ ತಂಡ ಸರ್ವೇ ಕಾರ್ಯ ಮಾಡಿದ್ದು, ಇಂದು ಅದು ಅಂತ್ಯಗೊಂಡಿದೆ ಎಂದು ವಕೀಲ ವಿಷ್ಣು ಜೈನ್‌ ಮಾಹಿತಿ ನೀಡಿದ್ದಾರೆ. ಜತೆಗೆ ಸಿವಿಲ್‌ ಕೋರ್ಟ್‌ಗೆ ಈ ಬಗ್ಗೆ ಮಾಹಿತಿ ನೀಡಿ, ಬಾವಿಯಲ್ಲಿ ಸಿಕ್ಕ ಶಿವಲಿಂಗಕ್ಕೆ ಸುರಕ್ಷತೆ ನೀಡುವಂತೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. 

ಅಲಹಾಬಾದ್‌ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಭಾರೀ ಸುರಕ್ಷತೆಯೊಂದಿಗೆ ಕೋರ್ಟ್‌ ನೇಮಿಸಿದ ಸಮಿತಿ ಸರ್ವೇ ಕಾರ್ಯ ಆರಂಭಿಸಿತ್ತು. ವಕೀಲ ಹರಿಶಂಕರ್‌ ಜೈನ್‌ ಮತ್ತು ವಿಷ್ಣು ಜೈನ್‌ ಅವರ ಪ್ರಕಾರ ಭಾನುವಾರ ಮಸೀದಿಯ ಒಳ ಪ್ರದೇಶದಲ್ಲಿ ದೇವಸ್ಥಾನವಿತ್ತು ಎನ್ನಲಾದ ಜಾಗದ ಸರ್ವೇ ಮಾಡಲಾಗಿದೆ. 

ಗ್ಯಾನವ್ಯಾಪಿ ಮಸೀದಿಯ ಪಶ್ಚಿಮ ಭಾಗದ ಬಾಗದಲ್ಲಿ ಹಿಂದೂ ದೇವಾಲಯವನ್ನು ಕೆಡವಿರುವ ಕುರುಹುಗಳಿವೆ ಎನ್ನಲಾಗಿದ್ದು ಅದರ ಫೋಟೊ ಕೂಡ ವೈರಲ್‌ ಆಗಿತ್ತು. ಉಳಿದ ಮೂರು ದಿಕ್ಕುಗಳ ಸರ್ವೇ ಶನಿವಾರವೇ ಅಂತ್ಯವಾಗಿತ್ತು ಮತ್ತು ಪಶ್ಚಿಮ ದಿಕ್ಕಿನ ಬಾಗಿಲನ್ನು ತೆರೆಸಿ ಭಾನುವಾರ ಸರ್ವೇ ಮಾಡಲಾಗಿದೆ. 

ವಿವಾದ ಏನು? Wat is Gyanvyapi Case?:
ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಕೆಡವಿ ಅಂದಿನ ಮುಘಲ್‌ ದೊರೆ ಔರಂಗಜೇಬ್‌ ಗ್ಯಾನವಾಪಿ ಮಸೀದಿ ಕಟ್ಟಿಸಿದ್ದ. ಈ ಮಸೀದಿಯಲ್ಲಿ ಶೃಂಗಾರ ಗೌರಿ, ಗಣೇಶ ಸೇರಿ ಅನೇಕ ದೇವರ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂಬ ಅರ್ಜಿ ವಾರಾಣಸಿ ಕೋರ್ಚ್‌ ಮುಂದಿದೆ. ಆದರೆ ಮಸೀದಿಯನ್ನು ಅನ್ಯಧರ್ಮದ ಚಟುವಟಿಕೆಗೆ ನೀಡುವುದು ಮಸೀದಿ ಕಮಿಟಿಗೆ ಇಷ್ಟವಿಲ್ಲ. ಇದು ವಿವಾದದ ಮೂಲ. ಆದರೆ, ಮಸೀದಿಯಲ್ಲಿ ನಿಜಕ್ಕೂ ಹಿಂದೂ ವಿಗ್ರಹಗಳು ಹಾಗೂ ಮಂದಿರದ ವಿನ್ಯಾಸಗಳು ಇವೆಯೇ ಎಂಬುದರ ಪತ್ತೆಗಾಗಿ ವಿಡಿಯೋ ಸಮೀಕ್ಷೆಗೆ ಕೋರ್ಚ್‌ ಆದೇಶಿಸಿದೆ.

ಇದನ್ನೂ ಓದಿ: Gyanvapi Survey : 2ನೇ ದಿನದ ಸರ್ವೇ ಮುಕ್ತಾಯ, ಮಸೀದಿಯ ಗುಮ್ಮಟದ ಚಿತ್ರೀಕರಣ!

ಸರ್ವೇ:
- 65% ಸಮೀಕ್ಷೆ ಪೂರ್ಣ, ಮಂಗಳವಾರ ಮುಕ್ತಾಯ

- 2ನೇ ದಿನವಾದ ಭಾನುವಾರವೂ ಮುಂದುವರಿದ ಸಮೀಕ್ಷೆ

- ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಸೀದಿಯಲ್ಲಿ ಸರ್ವೇ

- ಮಸೀದಿಯ ಹಲವು ಭಾಗ ವಿಡಿಯೋ ಚಿತ್ರೀಕರಣ ಪ್ರಕ್ರಿಯೆ

- ಉಭಯ ಪಕ್ಷಗಾರರು ಸೇರಿ ಹಲವರು ಈ ವೇಳೆ ಉಪಸ್ಥಿತಿ

- ಮುಂಚೆ ಮಂದಿರವಾಗಿತ್ತು ಎಂಬ ವಾದಕ್ಕೆ ಪುಷ್ಟಿ: ವಕೀಲ

ಮುಘಲ್‌ ದೊರೆ ಔರಂಗಜೇಬ್‌ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ನಿರ್ಮಿಸಿದ್ದ ಎನ್ನಲಾದ ಗ್ಯಾನವಾಪಿ ಮಸೀದಿಯಲ್ಲಿ ನಡೆಸಲಾದ ವಿಡಿಯೋ ಚಿತ್ರೀಕರಣವು ‘ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ತಮ್ಮ ವಾದವನ್ನು ಮತ್ತಷ್ಟುದೃಢೀಕರಿಸುತ್ತಿದೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.

ಇದನ್ನೂ ಓದಿ: Gyanvapi Mossque Case ಮಂದಿರ ಕೆಡವಿ ಗ್ಯಾನವಾಪಿ ಮಸೀದಿ ನಿರ್ಮಾಣ, ಸಿಕ್ತು ಮತ್ತಷ್ಟು ಸಾಕ್ಷ್ಯ!

ಭಾನುವಾರ ಸಮೀಕ್ಷೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹಿಂದೂ ಅರ್ಜಿದಾರರ ಪರ ವಕೀಲ ಹರಿಶಂಕರ ಜೈನ್‌ (Gyanvapi Case Advocate Harishankar Jain), ‘ಮಸೀದಿಯ ಒಳಗೆ 2 ದಿನದಿಂದ ನಡೆಸಲಾದ ಸಮೀಕ್ಷೆಯು ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ವಾದ ದೃಢೀಕರಿಸುತ್ತಿದೆ’ ಎಂದಿದ್ದಾರೆ. ಇನ್ನೊಬ್ಬ ಹಿಂದೂಪರ ವಕೀಲ ಮದನ್‌ಮೋಹನ್‌ ಯಾದವ್‌ ಮಾತನಾಡಿ, ‘ಶೇ.65ರಷ್ಟುಸಮೀಕ್ಷೆ ಮುಗಿದಿದೆ. ಉಳಿದ ಸಮೀಕ್ಷೆಗೆ ಸೋಮವಾರ 2 ತಾಸು ಹಿಡಿಯಬಹುದು. ಮಂಗಳವಾರದೊಳಗೆ ಕೋರ್ಚ್‌ ಸೂಚನೆಯಂತೆ ಸಮೀಕ್ಷೆ ಮುಗಿಯಲಿದೆ’ ಎಂದು ಮಾಹಿತಿ ನೀಡಿದ್ದರು.

Latest Videos
Follow Us:
Download App:
  • android
  • ios