ಮುಂಬೈ(ನ. 23)  ಅರ್ನಾಬ್ ಗೋಸ್ವಾಮಿ ಬಂಧನದ ನಂತರ  ಮಹಾರಾಷ್ಟ್ರ ಮತ್ತು ಮುಂಬೈ ನಲ್ಲಿ ಅನೇಕ ಮಹತ್ವದ ಚಟುವಟಿಕೆಗಳು ನಡೆದಿವೆ.  ಶಿವಸೇನೆ ಶಾಸಕ ಪ್ರತಾಪ್ ಸರ್ ನಾಯಕ್ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ದಾಳಿ ನಡೆದಿದೆ.

ಮುಂಬೈ ಮತ್ತು ಥಾಣೆಯ ಹತ್ತಕ್ಕೂ ಅಧಿಕ ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪ್ರಮೋಟ್ ಕಂಪನಿ, ಸೆಕ್ಯೂರಿಟಿ ವೆಂಚರ್ ಗಳ ಮೇಲೂ ದಾಳಿಯಾಗಿದೆ. ಶಾಸಕರ ಪುತ್ರನ ಕಚೇರಿಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಅಷ್ಟಕ್ಕೂ ಅರ್ನಾಬ್ ಬಂಧನಕ್ಕೆ ಕಾರಣವಾದ ಪ್ರಕರಣ ಯಾವುದು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ಕೇಂದ್ರ ಸರ್ಕಾರ ಮತ್ತೊಮ್ಮೆ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.  ಇಡಿ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ ಎಂದಿದ್ದಾರೆ.

ಶಾಸಕ ಸರ್ ನಾಯಕ್ ಶಾಸಕರ ಹಕ್ಕು ಚ್ಯುತಿಯಾಗಿದೆ ಎಂದು ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಹೋರಾಟಕ್ಕೆ ಇಳಿದಿದ್ದರು.  ಅರ್ನಾಬ್ ಬಂಧನಕ್ಕೆ ಒಳಗಾಗಿದ್ದ ಅನ್ವಯ್ ನಾಯ ಪ್ರಕರಣದ ಮರುವಿಚಾರಣೆಗೂ ಪಟ್ಟು ಹಿಡಿದಿದ್ದರು.