ಮುಂಬೈ(ನ. 05)  ಇಡೀ ದೇಶದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನದ ಚರ್ಚೆಯಾಗುತ್ತಿದೆ. ಹಾಗಾದರೆ ಮಹಾರಾಷ್ಟ್ರ ಪೊಲೀಸರು ಯಾವ ಕೇಸಿನಲ್ಲಿ ಅರ್ನಬ್ ಬಂಧನ ಮಾಡಿದ್ದಾರೆ? ಇಲ್ಲಿದೆ ಸಂಕ್ಷಿಪ್ತ ವಿವರಣೆ

ಅರ್ನಾಬ್ ಬಂಧನಕ್ಕೆ ಒಳಗಾಗಿರುವುದು ಎರಡು ವರ್ಷದ ಹಿಂದಿನ ಪ್ರಕರಣದಲ್ಲಿ . 2018 ರಲ್ಲಿ ಅನ್ವಯ್ ನಾಯ್ಕ್ ಎಂಬ ಇಂಟಿರಿಯರ್ ಡಿಸೈನರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಅವರ  ತಾಯಿ ಸಹ ಶವವಾಗಿ ಪತ್ತೆಯಾಗಿದ್ದರು.

ಸುಸೈಡ್ ನೋಟ್ ಒಂದು ಸಿಕ್ಕಿದ್ದು ಅದರಲ್ಲಿ ನಾಯ್ಕ್ ಅರ್ನಬ್ ಗೋಸ್ವಾಮಿ ಮತ್ತು ಇತರರಿಂದ ತಮಗೆ 5.40  ಕೋಟಿ ರೂ. ಬಾಲಿ ಬರಬೇಕಿತ್ತು ಎಂದು  ಬರೆದಿದ್ದರು.  ರಿಪಬ್ಲಿಕ್ ಟಿವಿಗೆ  ಮಾಡಿಕೊಟ್ಟಿದ್ದ ಕೆಲಸಕ್ಕೆ ಹಣ ಬರಬೇಕಿತ್ತು. ಇದು ಬಾರದ ಕಾರಣ ಇಂಥ  ತೀರ್ಮಾನ ಮಾಡುತ್ತಿದ್ದೇನೆ ಎಂದಿದ್ದರು. ಕಾನ್ ಕ್ರೋಡ್ ಡಿಸೈಟ್ ಕಂಪನಿಯನ್ನು ನಾಯ್ಕ್ ನಡೆಸುತ್ತಿದ್ದರು. ರಿಪಬ್ಲಿಕ್ ಟಿವಿ ಅಲ್ಲದೆ ಇತರ  ಎರಡು ಕಡೆಯಿಂದಲೂ ಬಾಕಿ ಬರಬೇಕಿತ್ತು ಎಂದು ಹೇಳಿದ್ದರು.

ನೇಶನ್ ವಾಂಟ್ಸ್ ಟು ನೌ... ಅರ್ನಾಬ್‌ ಗೆ ದೊಡ್ಡ ಗೆಲುವು

ಇದಾದ ಮೇಲೆ ನಾಯ್ಕ್ ಪತ್ನಿ, ಅರ್ನಾಬ್ ಗೋಸ್ವಾಮಿ, ಫಿರೋಜ್ ಶೇಖ್ ಮತ್ತು ನೀತೀಶ್ ಸರ್ದಾ ಎಂಬುವರ ಮೇಲೆ ದೂರು ದಾಖಲಿಸಿದ್ದರು.  ಆದರೆ  ಏಪ್ರಿಲ್  2019  ರಲ್ಲಿ ಪೊಲೀಸರು ಪ್ರಕರಣವನ್ನು ಕ್ಲೋಸ್ ಮಾಡಿದ್ದರು.   ಯಾವುದೇ ದಾಖಲೆಗಳು ಆರೋಪಿಗಳ ವಿರುದ್ಧ ಇಲ್ಲ ಎಂದು ಹೇಳಿದ್ದರು.

ಇಷ್ಟಕ್ಕೆ ಸುಮ್ಮನಾಗದ ನಾಯ್ಕ್ ಪತ್ನಿ ವಿಡಿಯೋ ಒಂದನ್ನು ಮಾಡಿ ನ್ಯಾಯಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಮೊರೆ ಇಟ್ಟಿದ್ದರು. ಇದನ್ನು ರಿಟ್ವೀಟ್ ಮಾಡಿದ ಮಹಾರಾಷ್ಟ್ರ ಗೃಹ ಸಚಿವರು ಕುಟುಂಬಕ್ಕೆ ನ್ಯಾಯ ನೀಡುವ ಭರವಸೆ ನೀಡಿದ್ದರು. ಅದಾದ ಮೇಲಿನ ಬೆಳವಣಿಗೆಯೇ ಅರ್ನಾಬ್ ಬಂಧನ