ಮುಂಬೈ(ಸೆ.12):  ಮಹಾರಾಷ್ಟ್ರದಲ್ಲಿ ಶಿವ ಸೇನೆ ಸರ್ಕಾರದ ಮೇಲೆ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಗೂಂಡಾಗಿರಿ, ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗುತ್ತಿದೆ.  ನಟಿ ಕಂಗನಾ ರನೌತ್ ಕಚೇರಿ ಧ್ವಂಸ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಉದ್ಧವ್ ಠಾಕ್ರೆ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದೊಡ್ಡಿದೆ. ಇದರ ಬೆನ್ನಲ್ಲೇ ಇದೀಗ ಶಿವ ಸೇನೆ ಮುಖಂಡ ಕಮಲೇಶ್ ಕದಮ್ ಸೇರಿದಂತೆ 6 ಮಂದಿ, ನಿವೃತ್ತಿ ನೌಕಾಪಡೆ ಅಧಿಕಾರಿಯನ್ನು ಥಳಿಸಿದ ಕಾರಣಕ್ಕೆ ಅರೆಸ್ಟ್ ಆಗಿದ್ದಾರೆ. 

ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಸ್‌ಗೆ ಎಚ್ಚರಿಕೆ!.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುರಿತ ಕಾರ್ಟೂನ್ ಫಾರ್ವರ್ಡ್ ಮಾಡಿದ್ದಾರೆ ಅನ್ನೋ ಆರೋಪದಡಿ ಮಾಜಿ ನೌಕಾ ಪಡೆ ಅಧಿಕಾರಿ ಮದನ್ ಶರ್ಮಾ ಮೇಲೆ ಶಿವಸೇನೆ ಮುಖಂಡ ಕಮಲೇಶ್ ಕದಮ್ ಸೇರಿದಂತೆ 8 ರಿಂದ 10 ಮಂದಿ ಏಕಾಏಕಿ ದಾಳಿ ಮಾಡಿ ಥಳಿಸಿದ್ದಾರೆ. ತೀವ್ರ ಗಾಯಗೊಂಡ ಮದನ್ ಶರ್ಮಾ ಆಸ್ಪತ್ರೆಗೆ ದಾಖಲಿಸಲಾಗಿದೆ.

 

'ನನ್ನ ಮಗಳು ಸತ್ಯದ ಜೊತೆ', ಮಹಾರಾಷ್ಟ್ರ ಸರ್ಕಾರದ ನಡೆ ಖಂಡಿಸಿದ ಕಂಗನಾ ತಾಯಿ

ಮುಂಬೈನ ಸಮತಾ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರಿನ ಆಧಾರದಲ್ಲಿ ಪೊಲೀಸರು ಕಮಲೇಶ್ ಕದಮ್ ಸೇರಿದಂತೆ 6 ಮಂದಿಯನ್ನು ಆರೆಸ್ಟ್ ಮಾಡಿದ್ದಾರೆ.  ದೇಶ ಸೇವೆ ಮಾಡಿದ ನನಗೆ ಈ ರೀತಿ ಥಳಿಸಲಾಗಿದೆ. ಇದು ಮಹಾರಾಷ್ಟ್ರ ಸರ್ಕಾರ ನನಗೆ ನೀಡಿದ ಗೌರವ. ಇಂತಹ ಸರ್ಕಾರಗಳು ಇರಬಾರದು ಎಂದು ಮದನ್ ಶರ್ಮಾ ನೋವು ತೋಡಿಕೊಂಡಿದ್ದಾರೆ.

ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ವ್ಯಾಟ್ಸಾಫ್ ಫಾರ್ವರ್ಡ್ ಸಂದೇಶಕ್ಕೆ ಮಾಜಿ ನೌಕಾಪಡೆ ಅಧಿಕಾರಿಯನ್ನು ಶಿವ ಸೇನೆ ಗೂಂಡಾಗಳು ಥಳಿಸಿದ್ದಾರೆ. ಮುಖ್ಯಮಂತ್ರಿಗಳೆ ಗೂಂಡಾಗಿರಿ ನಿಲ್ಲಿಸಿ, ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.