ಮುಂಬೈ(ಸೆ.11) ಮಹಾರಾಷ್ಟ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತ ನಟಿ ಕಂಗನಾ ರಣಾವತ್ ಮುಂಬೈ ನ್ನು ಪಾಕಿಸ್ತಾನ , ಪಾಕ್ ಆಕ್ರಮಿತ ಕಾಶ್ಮೀರ ಎಂದು ಟೀಕಿಸಿದ್ದರು .ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತು ಕಂಗನಾ ನಡುವೆ ದೊಡ್ಡ ಯುದ್ಧವೇ ನಡೆದು ಹೋಗಿತ್ತು.

 ಪಾಕಿಸ್ತಾನ ಎಂದು ಕರೆದವರು ಮುಂಬೈಗೆ ಹೇಗೆ ಕಾಲು ಇಡುತ್ತೀರಿ ಎಂದು ಶಿವಸೇನೆ ಸವಾಲು ಹಾಕಿದರೆ , ನಾನು ಬಂದೇ ಬರುತ್ತೇನೆ, ಬರುವ ಸಮಯ ಮತ್ತು ವಿಳಾಸವನ್ನು ತಿಳಿಸುತ್ತೇನೆ ತಾಕತ್ ಇದ್ದರೆ  ತಡೆಯಿರಿ ಎಂದು ಕಂಗನಾ ಸವಾಲು ಹಾಕಿದ್ದರು.

ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ; ಕಂಗನಾ ಬೋಲ್ಡ್ ಮಾತು

ಇದಾದ ಮೇಲೆ ಕಂಗನಾ ಮುಂಬೈಗೆ ಬಂದಿಳಿದಿದ್ದರು. ಇತ್ತ ಮಹಾರಾಷ್ಟ್ರ ಸರ್ಕಾರ  ಕಂಗನಾಗೆ ಸೇರಿದ್ದ ಕಚೇರಿಯನ್ನು ಅಕ್ರಮ ಎಂಬ ಆರೋಪದಲ್ಲಿ ಒಡೆದು ಹಾಕಿತ್ತು. ಆದರೆ ಇದೆಲ್ಲದರ ನಡುವೆ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಕಂಗನಾ ಅವರನ್ನು ಝಾಡಿಸಲು ಶುರು ಮಾಡಿದೆ.

ನಿಮ್ಮ ಜಗಳದಲ್ಲಿ ನಮ್ಮನ್ನು ಯಾಕೆ ಎಳೆದು ತರುತ್ತೀರಿ? ಎಂದು ಪಾಕಿಸ್ತಾನದ ಹಲವು ಸೋಶಿಯಲ್ ಮೀಡಿಯಾ ವೀರರು ಟ್ವೀಟ್ ಮಾಡಿದ್ದಾರೆ.  ಕಂಗನಾ ಮಾತಿಒಗೆ ಪಾಕ್ ನಿಂದ ಬಂದ ಪ್ರತಿಕ್ರಿಯೆ ಹೇಗಿತ್ತು?