ನವದೆಹಲಿ[ನ.28]: ‘ಮಹಾರಾಷ್ಟ್ರದಲ್ಲಿ ಅಧಿಕಾರ ಕಬಳಿಸುವ ಒಂದೇ ಉದ್ದೇಶದಿಂದ ಪರಸ್ಪರ ವಿರುದ್ಧ ರಾಜಕೀಯ ಸಿದ್ಧಾಂತ ಹೊಂದಿರುವ ಪಕ್ಷಗಳು ಒಂದಾಗಿವೆ. ಜನಾದೇಶವನ್ನು ಧಿಕ್ಕರಿಸಿ ಅವು ಅಧಿಕಾರಕ್ಕೆ ಬಂದಿವೆ’ ಎಂದು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ.

ಅವ್ರೂ ಬರ್ಲಿ: ಪ್ರಮಾಣವಚನಕ್ಕೆ ಮೋದಿ, ಶಾಗೂ ಆಮಂತ್ರಣ ಇರ್ಲಿ!

‘ರಿಪಬ್ಲಿಕ್‌’ ಟೀವಿ ವಾಹಿನಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದ ಜನತೆ ಬಿಜೆಪಿ-ಶಿವಸೇನೆಗೆ ಸ್ಪಷ್ಟಜನಾದೇಶ ನೀಡಿದ್ದರು. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಒಂದಾಗಿವೆ’ ಎಂದರು.

‘ಮುಖ್ಯಮಂತ್ರಿ ಸ್ಥಾನ ನಿಮಗೇ ನೀಡುತ್ತೇವೆ ಎಂದು ಹೇಳಿ ಬೆಂಬಲ ನೀಡುವುದು ಕುದುರೆ ವ್ಯಾಪಾವಲ್ಲವೇ?’ ಎಂದವರು ಪ್ರಶ್ನಿಸಿದರು. ಇದೇ ವೇಳೆ, ‘ಶಿವಸೇನೆಗೆ ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ನಾನು ಯಾವುದೇ »ವಚನ ನೀಡಿರಲಿಲ್ಲ’ ಎಂದು ಪುನರುಚ್ಚರಿಸಿದರು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು