YouTube Shorts income reality: ಸೋಶಿಯಲ್ ಮೀಡಿಯಾದಿಂದ ಲಕ್ಷಗಟ್ಟಲೆ ಸಂಪಾದಿಸಬಹುದು ಎಂಬ ನಂಬಿಕೆ ಹಲವರಲ್ಲಿದೆ. ಗಾಯಕ ಹಾಗೂ ಯೂಟ್ಯೂಬರ್ ಗಣೇಶ್ ಕಾರಂತ್ ತಮ್ಮ ವೈರಲ್ ಯೂಟ್ಯೂಬ್ ಶಾರ್ಟ್ಸ್‌ನಿಂದ ಬಂದ ಆದಾಯವನ್ನು ಬಹಿರಂಗಪಡಿಸಿದ್ದು, ಯೂಟ್ಯೂಬರ್ ಆಗಬಯಸುವವರಿಗೆ ಕಿವಿಮಾತು ಹೇಳಿದ್ದಾರೆ.

ಯೂಟ್ಯೂಬರ್‌ಗಳ ಆದಾಯದ ಬಗ್ಗೆ ಜನರಿಗೆ ತೀವ್ರ ಕುತೂಹಲ

ಇದು ಸೋಶಿಯಲ್ ಮೀಡಿಯಾ ಯುಗ ಅನೇಕ ಜನಸಾಮಾನ್ಯರು ಇಂದು ಸೋಶಿಯಲ್ ಮೀಡಿಯಾದ ಮೂಲಕ ಸೆಲೆಬ್ರಿಟಿಗಳು ಎನಿಸಿದ್ದಾರೆ. ಸೋಶಿಯಲ್ ಮೀಡಿಯಾದ ವೀಡಿಯೋಗಳಿಂದನೇ ಅನೇಕರು ಹಣ ಸಂಪಾದನೆ ಮಾಡಿ ಶ್ರೀಮಂತರಾಗಿದ್ದಾರೆ. ಕೆಲವರು ಮನೆ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅನೇಕರು ಯೂಟ್ಯೂಬ್‌ಗಳಾಗಿ ಅಥವಾ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸಿದ್ದಾರೆ. ಇದೊಂದು ಸ್ವಂತ ಉದ್ಯೋಗವಾಗಿದ್ದು, ಯಾವಾಗ ಬೇಕಾದರೂ ನೀವು ಬ್ರೇಕ್ ತೆಗೆದುಕೊಳ್ಳಬಹುದು. ನಿಮಗಿಷ್ಟ ಬಂದಂತೆ ಜೀವನ ಮಾಡಬಹುದು. ದಿನ ಬೆಳಗಾದರೆ ಆಫೀಸ್‌ಗೆ ಹೋಗಿ ಸಂಜೆ ಮುಗಿದರೂ ಅಲ್ಲಿ ಕೆಲಸ ಮಾಡಬೇಕು, ನಮಗೆ ಬೇಕೆನಿಸಿದಾಗ ವಿರಾಮ ತೆಗೆದುಕೊಳ್ಳಲು ಯಾರನ್ನೋ ಕೇಳಬೇಕು ಮುಂತಾದ ಯಾವುದೇ ನಿರ್ಬಂಧಗಳು ಈ ಉದ್ಯೋಗದಲ್ಲಿ ಇಲ್ಲ. ನಮ್ದೇ ಲೈಫ್ ನಮ್ದೇ ರೂಲ್ಸ್ ಎಂಬಂತೆ ಈ ಉದ್ಯೋಗ ಇರೋದ್ರಿಂದ ಅನೇಕರು ಯುಟ್ಯೂಬರ್ ಆಗಬೇಕು ಐಷಾರಾಮದ ಜೊತೆ ಆರಾಮ ಜೀವನ ಮಾಡ್ಬೇಕು ಎಂದು ಬಯಸುತ್ತಾರೆ. ಆದರೆ ಹೀಗಾಗಿಯೇ ಅನೇಕರಿಗೆ ಈ ಯೂಟ್ಯೂಬ್‌, ಇನ್ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ನಿಂದ ಒಳ್ಳೆಯ ಸಂಪಾದನೆ ಬರ್ತಿದೆ ಎಂಬ ಅಭಿಪ್ರಾಯ ಇದೆ. ಜೊತೆಗೆ ಯಶಸ್ವಿ ಯುಟ್ಯೂಬರ್‌ಗಳು ಎನಿಸಿರುವ ಅನೇಕರ ಆದಾಯ ಎಷ್ಟಿರಬಹುದು ಎಂಬ ಕುತೂಹಲ ಅನೇಕರಿಗೆ ಇದೆ.

ಅಷ್ಟೊಂದು ಆದಾಯ ಬರ್ತಿದ್ಯಾ ಯೂಟ್ಯೂಬ್‌ನಿಂದ

ಆದರೆ ಹೀಗೆ ಪ್ರೊಫೆಷನಲ್‌ ಯೂಟ್ಯೂಬರ್‌ ಆಗಬೇಕು ಎಂದು ಬಯಸುತ್ತಿರುವ ಅನೇಕರಿಗೆ ಗಾಯಕ ಯೂಟ್ಯೂಬರ್, ಗಣೇಶ್ ಕಾರಂತ್ ಅವರು ತಮ್ಮ ಸಂಪಾದನೆ ಎಷ್ಟು, ಯೂಟ್ಯೂಬ್‌ನಿಂದ ಎಷ್ಟು ಆದಾಯ ಬರ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದು, ಅವರ ರೀಲ್ಸ್ ಈಗ ಭಾರಿ ವೈರಲ್ ಆಗ್ತಿದೆ. ಹಾಗಿದ್ದರೆ ಗಣೇಶ್ ಕಾರಂತ್ ಅವರು ತಮ್ಮ ರೀಲ್ಸ್‌ನಲ್ಲಿ ಏನ್ ಹೇಳಿದ್ದಾರೆ. ಈ ಸೋಶಿಯಲ್ ಮೀಡಿಯಾವನ್ನೇ ನಂಬಿಕೊಂಡು ಬದುಕು ಕಟ್ಟಿಕೊಳ್ಳಬಹುದೇ? ಅಷ್ಟೊಂದು ಆದಾಯ ನಿಜವಾಗಿಯೂ ಬರುತ್ತಿದೆಯಾ ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಯೂಟ್ಯೂಬ್‌ ರೀಲ್ಸ್‌ಗೆ ಬಂದ ಆದಾಯ ರಿವೀಲ್ ಮಾಡಿದ ಗಣೇಶ್ ಕಾರಂತ್ ಹೇಳಿದ್ದೇನು?

ತುಂಬಾ ಜನ ಗಣೇಶ್ ಕಾರಂತ್ ಅವರನ್ನ ಕೇಳ್ತಾರಂತೆ ಏನ್ ಬ್ರೋ ಸಿಂಗಿಂಗ್, ಯುಟ್ಯೂಬ್ ರೀಲ್ಸ್, ಸಿಕ್ಕಾಪಟ್ಟೆ ದುಡ್ಡು ಬರುತ್ತೆ ಅಂತ, ಆದ್ರೆ ಇವತ್ತು ನಾನು ನಿಮಗೆ ನಿಜ ಏನು ಎಂಬುದನ್ನು ತೊರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ನಂತರ ಅವರು ಇತ್ತಿಚೆಗೆ ವೈರಲ್ ಆದಂತಹ ತಮ್ಮ ರೀಲ್ಸ್‌ ಒಂದನ್ನು ತೋರಿಸಿದ್ದಾರೆ. ಮೋನಿಕಾ ಲವ್ ಯೂ ಮೋನಿಕಾ ಹಾಡಿಗೆ ಅವರು ಯೂಟ್ಯೂಬ್‌ ಶಾರ್ಟ್ಸ್‌ ಮಾಡಿದ್ದು, ಆ ರೀಲ್ಸ್ ಯೂಟ್ಯೂಬ್‌ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ ರೀಲ್ಸ್‌ ಅನ್ನೇ ಯೂಟ್ಯೂಬ್ ಶಾರ್ಟ್ಸ್‌ನಲ್ಲಿ ಹಾಕಿದ್ದೆ. ಯೂಟ್ಯೂಬ್‌ನಲ್ಲಿ ನನಗೆ ಸಾಮಾನ್ಯವಾಗಿ 5 ರಿಂದ 6 ಸಾವಿರ ವೀವ್ಸ್ ಮಾಮೂಲಾಗಿ ಯಾವುದೇ ರೀಲ್ಸ್‌ಗೆ ಬರ್ತಿತ್ತು. ಆದರೆ ಈ ಯೂಟ್ಯೂಬ್ ರೀಲ್ಸ್ ವೈರಲ್ ಆಗಿದ್ದರಿಂದ 50 ಸಾವಿರ ವೀವ್ಸ್ ಬಂತು.

ಯೂಟ್ಯೂಬ್ ವೃತ್ತಿ ನಂಬಿ ಜೀವನ ಮಾಡ್ಬಹುದಾ?

ಆದರೆ ಇದರಿಂದ ಬಂದ ಆದಾಯ ಎಷ್ಟು ಎಂದು ತೋರಿಸುತ್ತೇನೆ. ಸಾಮಾನ್ಯವಾಗಿ ಯೂಟ್ಯೂಬ್ ನಿಯಮಗಳ ಪ್ರಕಾರ ತೋರಿಸುವಂತಿಲ್ಲ, ಆದರೂ ನಿಮಗಾಗಿ ನನಗೆ ಈ ರೀಲ್ಸ್‌ನಿಂದ ಬಂದ ಆದಾಯ ಎಷ್ಟು ಎಂದು ತೋರಿಸುತ್ತೇನೆ ಎಂದು ಹೇಳಿ ಅವರು ಅದರ ದತ್ತಾಂಶವನ್ನು ತೋರಿಸಿದ್ದು, ಅವರಿಗೆ ಆ ರೀಲ್ಸ್‌ನಿಂದ 54.4 ವೀವ್ಸ್‌ ಬಂದಿದ್ದು, ಹೊಸದಾಗಿ 4 ಸಬ್‌ಸ್ರೈಬರ್‌ಗಳು ಆಗಿದ್ದರು ಆದರೆ ಆಯೂಟ್ಯೂಬ್ ರೀಲ್ಸ್‌ಗೆ ಬಂದ ಆದಾಯ ಕೇವಲ 9 ರೂಪಾಯಿ ಆಗಿತ್ತು.

ಹೀಗಾಗಿ 50 ಸಾವಿರ ವೀವ್ಸ್‌ ಇದ್ದ ಶಾರ್ಟ್ಸ್‌ಗೆ ಸಿಕ್ಕಿದ್ದು 9 ರೂಪಾಯಿ ಹೀಗಾಗಿ ಯಾರಾದರು ನಾನು ದೊಡ್ಡ ಕಂಟೆಂಟ್ ಕ್ರಿಯೇಟರ್ ಆಗುತ್ತೇನೆ. ಯೂಟ್ಯೂಬರ್ ಆಗ್ತೇನೆ ಅಂತ ಅನ್ಕೊಂಡ್ರೆ ವಾಸ್ತವ ಹೀಗಿದೆ. ಅದಕ್ಕೆ ನೀವು ರೆಡಿಯಾಗಿರಬೇಕು. ಯೂಟ್ಯೂಬ್‌ನಲ್ಲಿ ಬಹಳ ಉದ್ದದ ವೀಡಿಯೋಗಳಿಗೆ ಅಂದರೆ 10ರಿಂದ 15 ನಿಮಿಷದ ವೀಡಿಯೋಗಳು ಕೆಲಸ ಮಾಡುತ್ತವೆ. ಅದೂ ಜನರಿಂದ ವೀವ್ಸ್ ಚೆನ್ನಾಗಿ ಬಂದಿದ್ರೆ ಮಾತ್ರ. ಆದರೆ 2 ನಿಮಿಷ ರೀಲ್ಸ್ ಮಾಡ್ಕೊಂಡು ಅದನ್ನು ನಂಬಿಕೊಂಡು ಜೀವನ ಮಾಡುವುದಕ್ಕೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿಯೇ ಬಹುತೇಕ ಕಂಟೆಂಟ್ ಕ್ರಿಯೇಟರ್‌ಗಳು ಯೂಟ್ಯೂಬ್ ರೀಲ್ಸ್ ಮಾಡುವುದನ್ನು ಬಿಟ್ಟಿದ್ದಾರೆ ಏಕೆಂದರೆ ಅದರಿಂದ ಜೀವನ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

View post on Instagram