. ಸಂಖ್ಯಾಶಾಸ್ತ್ರವನ್ನು ನಂಬುವ ಜನರು ತಮ್ಮ ವಾಹನಕ್ಕೆ ಇಷ್ಟದ ನಂಬರ್ ಪಡೆಯಲು ಲಕ್ಷದವರೆಗೂ ಖರ್ಚು ಮಾಡುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಗ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಕೂಡ ಜನ ಇಷ್ಟದ ನಂಬರ್ ಪಡೆಯಲು ಪೈಪೋಟಿಗೆ ಬಿದ್ದಿದ್ದಾರೆ.
ಶಿಮ್ಲಾ: ಜನ ವಾಹನ ಕೊಳ್ಳುವುದಕ್ಕಷ್ಟೇ ಹಣ ಖರ್ಚು ಮಾಡುವುದಿಲ್ಲ. ತಮ್ಮಿಷ್ಟದ ನಂಬರ್ ಪಡೆಯುವುದಕ್ಕೂ ಸಾಕಷ್ಟು ಖರ್ಚು ಮಾಡುತ್ತಾರೆ. ಸೆಲೆಬ್ರಿಟಿಗಳು ತಮ್ಮಿಷ್ಟದ ನಂಬರ್ ಇರುವ ನಂಬರ್ ಪ್ಲೇಟ್ ಪಡೆಯಲು ಲಕ್ಷ ಲಕ್ಷ ರೂಪಾಯಿ ವೆಚ್ಚ ಮಾಡುವುದನ್ನು ನೀವು ಕೇಳಿರಬಹುದು. ಈ ನಂಬರ್ ಹುಚ್ಚು ಜನ ಸಾಮಾನ್ಯರಲ್ಲೂ ಕಡಿಮೆ ಎನ್ನಿಲ್ಲ. ಸಂಖ್ಯಾಶಾಸ್ತ್ರವನ್ನು ನಂಬುವ ಜನರು ತಮ್ಮ ವಾಹನಕ್ಕೆ ಇಷ್ಟದ ನಂಬರ್ ಪಡೆಯಲು ಲಕ್ಷದವರೆಗೂ ಖರ್ಚು ಮಾಡುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಗ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಕೂಡ ಜನ ಇಷ್ಟದ ನಂಬರ್ ಪಡೆಯಲು ಪೈಪೋಟಿಗೆ ಬಿದ್ದಿದ್ದಾರೆ. ಇದರಿಂದ ಜನರ ಈ ವ್ಯಾಮೋಹದಿಂದ ಆರ್‌ಟಿಒ ಇಲಾಖೆಗೆ ಲಾಭವಾಗಿದೆ.
ಸ್ಕೂಟಿಗೆ ಫ್ಯಾನ್ಸಿ ನಂಬರ್ HP99-9999) ಪಡೆಯುವುದಕ್ಕಾಗಿ ಪೈಪೋಟಿ ಶುರುವಾಗಿದೆ. 26 ಜನ ಈ ನಂಬರ್ ಪಡೆಯಲು ಪೈಪೋಟಿಗೆ ಬಿದ್ದಿದ್ದರಿಂದ ಸಾರಿಗೆ ಇಲಾಖೆ ಹರಾಜು ಕರೆಯಲು ಮುಂದಾಗಿದೆ. ಇದರಿಂದ ಈ ನಂಬರ್ ಬೆಲೆ ಕೋಟಿ ದಾಟಿದೆ. ಜನ ಈ ನಂಬರ್‌ಗಾಗಿ 1.12 ಕೋಟಿ ವರೆಗೆ ಆನ್‌ಲೈನ್‌ನಲ್ಲಿ ಹರಾಜು (Online bidding) ಕೂಗಿದ್ದಾರೆ ಎಂದು ತಿಳಿದು ಬಂದಿದೆ.
Number Plate 70 ಸಾವಿರ ರೂ ಆ್ಯಕ್ಟಿವಾ ಸ್ಕೂಟರ್ ಫ್ಯಾನ್ಸಿ ನಂಬರ್‌ಗಾಗಿ ಮಾಲೀಕನಿಂದ 15.14 ಲಕ್ಷ ರೂ ಖರ್ಚು!
ಪರ್ವತಗಳ ಪ್ರದೇಶ ಶಿಮ್ಲಾದಲ್ಲಿ (Shimla) ಸ್ಕೂಟಿ ಕೊಳ್ಳುವವರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ. 30 ರಿಂದ 40 ರಷ್ಟು ಪ್ರಮಾಣದಲ್ಲಿ ಸ್ಕೂಟಿ ಕೊಳ್ಳುವವರ ಪ್ರಮಾಣ ಹೆಚ್ಚಾಗಿದೆ. ಹಾಗೆಯೇ ಈ ರೀತಿ ನಂಬರ್ ಗಾಗಿ ಪೈಪೋಟಿಗೆ ಬಿದ್ದವರ ಸಂಖ್ಯೆಯೂ ಹೆಚ್ಚಿದೆ. ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ ಕೊಟ್‌ಖಾಯ್‌ನಿಂದ ಸ್ಕೂಟಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆ (HP 99-9999) ಪಡೆಯಲು ಆನ್‌ಲೈನ್‌ನಲ್ಲಿ 1.12 ಕೋಟಿ ಬಿಡ್ ಸ್ವೀಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಿಡ್‌ನ ಪ್ರಾರಂಭದ ಬೆಲೆ ₹ 1,000 ಆಗಿತ್ತು ಮತ್ತು 26 ಜನರು ಈ ಸಂಖ್ಯೆಗೆ ಬಿಡ್ ಮಾಡಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಈ ನಂಬರ್‌ಗಾಗಿ ಆನ್‌ಲೈನ್‌ನಲ್ಲಿ 1,12,15,500 ರೂಪಾಯಿ ಅತಿ ಹೆಚ್ಚು ಬಿಡ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಹರಾಜು ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಹೀಗೆ ಹರಾಜು ಕೂಗಿದವರ ವಿವರ ಪತ್ತೆಯಾಗಿಲ್ಲ ಮತ್ತು ಅವರು ಹರಾಜು ಕೂಗಿದ ಹಣವನ್ನು ಠೇವಣಿ ಮಾಡದಿದ್ದಲ್ಲಿ ಈ ಫ್ಯಾನ್ಸಿ ಸಂಖ್ಯೆಯು ಎರಡನೇ ಬಿಡ್ಡರ್‌ಗೆ ಹೋಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾರಿಗೆ ಇಲಾಖೆ ಇತಿಹಾಸದಲ್ಲೇ ಇದೇ ಮೊದಲು: ದುಬಾರಿ ಮೊತ್ತಕ್ಕೆ ಹರಾಜಾದ ಫ್ಯಾನ್ಸಿ ನಂಬರ್..!
ಬಿಡ್ಡಿಂಗ್ ಸಮಯದಲ್ಲಿ 30 ಪ್ರತಿಶತ ಬಿಡ್ ಮೊತ್ತವನ್ನು ಠೇವಣಿ ಮಾಡಲು ಷರತ್ತು ಮಾಡುವ ಬಗ್ಗೆಯೂ ನಾವು ಯೋಚಿಸುತ್ತಿದ್ದೇವೆ, ಒಂದು ವೇಳೆ ಹರಾಜು ಕರೆದು ಪೂರ್ತಿ ಹಣ ನೀಡದಿದ್ದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಒಂದು ಸ್ಕೂಟಿಯ ಬೆಲೆ 70,000 ರಿಂದ 1,80,000 ದವರೆಗೆ ಇದೆ. ಗುಡ್ಡಗಾಡು ಪ್ರದೇಶದೊಂದಿಗೆ ರಾಜ್ಯದ ಕೆಲವು ಭಾಗಗಳಲ್ಲಿ ಇದು ಯಶಸ್ವಿಯಾಗಿದೆ. ಶಿಮ್ಲಾದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಕೋವಿಡ್ ಅವಧಿಯ ನಂತರದ ಅವಧಿಗೆ ಹೋಲಿಸಿದರೆ ಸ್ಕೂಟಿಗಳ ಮಾರಾಟವು ಶೇಕಡಾ 30-40 ರಷ್ಟು ಹೆಚ್ಚಾಗಿದೆ ಎಂದು ಶಿಮ್ಲಾದ ಲೋವನೇಶ್ ಮೋಟಾರ್ಸ್ ಮಾಲೀಕ ಲೊವ್ನೇಶ್ ಹೇಳಿದರು. ಹಿಂದಿನ ವರ್ಷಗಳಲ್ಲಿ ಇದೇ ಅವಧಿಗೆ ಹೋಲಿಸಿದರೆ ಕಳೆದ ನಾಲ್ಕು ತಿಂಗಳಲ್ಲಿ ನಾವು ಸುಮಾರು 30ರಿಂದ 40 ಸ್ಕೂಟಿಗಳನ್ನು ಮಾರಾಟ ಮಾಡಿದ್ದೇವೆ ಎಂದು ಶಿಮ್ಲಾದ ಯಮಹಾ ಶೋರೂಮ್‌ನ (Yamaha showroom) ಮಾಲೀಕ ಕಾರ್ತಿಕ್ ಶರ್ಮಾ (Kartik Sharma)ಹೇಳಿದರು.
