ಸಾಯಲೆಂದು ಬಂದವಳು ರೈಲ್ವೆ ಟ್ರ್ಯಾಕ್‌ನಲ್ಲೇ ನಿದ್ದೆಗೆ ಜಾರಿದಳು

ಸಾಯಲೆಂದು ರೈಲ್ವೆ ಟ್ರ್ಯಾಕ್‌ನಲ್ಲಿ ಮಲಗಿದ್ದ ಯುವತಿಯೊಬ್ಬಳು ರೈಲಿಗಾಗಿ ಕಾದು ಕಾದು ಟ್ರ್ಯಾಕ್‌ನಲ್ಲೇ ನಿದ್ದೆಗೆ ಜಾರಿದ ವಿಚಿತ್ರ ಘಟನೆಯೊಂದು ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ, ರೈಲ್ವೆ  ಚಾಲಕನ ಸಮಯಪ್ರಜ್ಞೆಯಿಂದಾಗಿ ಈಗ ಸಾಯಲು ಬಂದಿದ್ದ ಯುವತಿಯ ಜೀವ ಉಳಿದಿದೆ.

She came to die fell asleep on the railway track Loco pilots punctuality saved her life in Bihar akb

ಸಾಯಲೆಂದು ರೈಲ್ವೆ ಟ್ರ್ಯಾಕ್‌ನಲ್ಲಿ ಮಲಗಿದ್ದ ಯುವತಿಯೊಬ್ಬಳು ರೈಲಿಗಾಗಿ ಕಾದು ಕಾದು ಟ್ರ್ಯಾಕ್‌ನಲ್ಲೇ ನಿದ್ದೆಗೆ ಜಾರಿದ ವಿಚಿತ್ರ ಘಟನೆಯೊಂದು ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ, ರೈಲ್ವೆ  ಚಾಲಕನ ಸಮಯಪ್ರಜ್ಞೆಯಿಂದಾಗಿ ಈಗ ಸಾಯಲು ಬಂದಿದ್ದ ಯುವತಿಯ ಜೀವ ಉಳಿದಿದೆ.

ಜೀವ ಕೊನೆಗೊಳಿಸಬೇಕು ಎಂದು ನಿರ್ಧರಿಸಿದ ಯುವತಿಯೊಬ್ಬಳು ಹಾಲು ಕೆನೆ ಬಣ್ಣದ ಚೂಡಿಧಾರ್ ಧರಿಸಿ ಬೆನ್ನಿಗೊಂದು ಬ್ಯಾಗ್ ಹೇರಿಕೊಂಡು ಮೋತಿಹಾರ್ ಜಿಲ್ಲೆಯ ಛಕಿಯಾದ ರೈಲು ನಿಲ್ದಾಣಕ್ಕೆ ಬಂದಿದ್ದಾಳೆ. ಬಳಿಕ ಅಲ್ಲೇ ಸಮೀಪವಿದ್ದ ರೈಲು ಹಳಿಗಳ ಮೇಲೆ ಆಕೆ ಮಲಗಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ರೈಲು ಮಾತ್ರ ಬಂದಿಲ್ಲ, ಹೀಗಾಗಿ ರೈಲಿಗಾಗಿ ಕಾದು ಕಾದು ಸುಸ್ತಾದ ಆಕೆ ಅಲ್ಲೇ ನಿದ್ದೆಗೆ ಜಾರಿದ್ದಾಳೆ. ಇದಾಗಿ ತುಂಬಾ ಹೊತ್ತಿನ ನಂತರ ಆ ಹಳಿಯ ಮೇಲೆ ರೈಲು ಬಂದಿದೆ. ಆದರೆ ಅದೃಷ್ಟವಶಾತ್ ರೈಲು ಚಾಲಕ ಈ ಯುವತಿ ಟ್ರ್ಯಾಕ್ ಮೇಲೆ ಮಲಗಿರುವುದನ್ನು ದೂರದಿಂದಲೇ ಗಮನಿಸಿದ್ದು, ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಸಾಯಲು ಬಂದಿದ್ದ ಯುವತಿಯ ಜೀವ ಉಳಿದಿದೆ. 

ಕುಡಿದ ಮತ್ತಿನಲ್ಲಿ ಹಳಿಗೆ ಬಿದ್ದ ವ್ಯಕ್ತಿ ಮೇಲಿಂದ ಸಾಗಿತು ರೈಲು, ನಂತರ ನಡೆಯಿತು ಪವಾಡ!

ಸೆಪ್ಟೆಂಬರ್  10 ರಂದು ಅಂದರೆ ನಿನ್ನೆ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ರೈಲು ಚಾಲಕ ರೈಲಿನಿಂದ ಇಳಿದು ಬಂದ ಯುವತಿಯ ಕೈ ಹಿಡಿದು ಮೇಲೆಳಿಸುವುದನ್ನು ಕಾಣಬಹುದು. ಈ ವೇಳೆ ಯುವತಿ ನಿದ್ದೆಯಿಂದ ಎದ್ದಿದ್ದು ತನ್ನ ತಲೆಗೆ ಚೂಡಿಧಾರದ ಶಾಲು ಹಾಕಿ ಎದ್ದು ಕುಳಿತುಕೊಂಡು ಅತ್ತಿತ್ತ ನೋಡುತ್ತಾಳೆ. ಕೂಡಲೇ ಅಲ್ಲಿಸೇರಿದ ಸ್ಥಳೀಯರು ಆಕೆಯನ್ನು ರೈಲ್ವೆ ಹಳಿಯಿಂದ ಮೇಲೆಳಿಸಿ ಪಕ್ಕಕ್ಕೆ ಕರೆತರುತ್ತಾರೆ. ಆದರೆ ಆಕೆ ಅವರ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈಲ್ವೆ ಚಾಲಕನ ಕಾರ್ಯಕ್ಕೆ  ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೇ ಅನೇಕರು ಹೀಗೆ ರೈಲ್ವೆ ಟ್ರ್ಯಾಕ್ ಮೇಲೆ ನಿದ್ದೆಗೆ ಜಾರಿದ ಯುವತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸಾವು ಯಾವಾಗ ಬೇಕಾದರು ಬರಬಹುದು. ಆದರೆ ನಮಗೆ ಬೇಕು ಎಂದಾಗ ಬಾರದು ಎಂಬುದಕ್ಕೆ ಈ ಘಟನೆಯೊಂದು ನಿದರ್ಶನವಾಗಿದೆ.

ಕುಡಿದ ಮತ್ತಿನಲ್ಲಿ ಹಳಿಗೆ ಬಿದ್ದರು ಬದುಕಿದ ವ್ಯಕ್ತಿ
ತಿಂಗಳ ಹಿಂದಷ್ಟೇ ಕುಡಿದ ಮತ್ತಿನಲ್ಲಿ ಹಳಿಗೆ ಬಿದ್ದ ಕುಡುಕನ ಮೇಲೆ ರೈಲು ಪಾಸಾದರೂ ಆತ ಬದುಕುಳಿದಂತಹ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿತ್ತು. ಬಿಜ್ನೋರ್‌ನ ಪಟ್ಟಣದಲ್ಲಿರುವ ಬಾರ್‌ನಲ್ಲಿ ರಾತ್ರಿ ವೇಳೆ ಕಂಠಪೂರ್ತಿ ಕುಡಿದ ಈತ ನಡೆದುಕೊಂಡೇ ಮನೆ ಸೇರಲು ಮುಂದಾಗಿದ್ದಾನೆ. ನಡೆಯಲು ಸಾಧ್ಯವಾಗದಷ್ಟು ಕುಡಿದ ಕಾರಣ ತೂರಾಡುತ್ತಾ ಸಾಗಿದ್ದಾನೆ. ಆದರೆ ಹೆಚ್ಚಿನ ದೂರ ಸಾಗಲು ಸಾಧ್ಯವಾಗಿಲ್ಲ. ಎದ್ದು ಬಿದ್ದು ಸಾಗಿದ ಈತ ಕೆಲ ದೂರದಲ್ಲಿರುವ ರೈಲು ಹಳಿ ದಾಟಲು ಮುಂದಾಗಿದ್ದಾನೆ. ಆದರೆ ಮೊದಲೇ ನಡೆಯಲು ಪರದಾಡುತ್ತಿದ್ದ ಈತ ರೈಲು ಹಳಿಯಲ್ಲಿ ಬಿದ್ದಿದ್ದಾನೆ. ಇದೇ ವೇಳೆ ಆತನ ಮೇಲೆ ರೈಲೊಂದು ಪಾಸಾಗಿದೆ.  ಆದರೆ ಆತ ರೈಲು ಹಳಿಗಳ ಮಧ್ಯೆ ಬಿದ್ದಿದ್ದರಿಂದ ಆತನ ಜೀವ ಉಳಿದಿದೆ.

ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್: ನಿರಂತರ ರೈಲ್ವೆ ಅವಘಡಗಳ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ

 

Latest Videos
Follow Us:
Download App:
  • android
  • ios