ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್: ನಿರಂತರ ರೈಲ್ವೆ ಅವಘಡಗಳ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ
ದೇಶದಲ್ಲಿ ಒಂದಾದ ಮೇಲೊಂದರಂತೆ ನಡೆಯುತ್ತಿರುವ ರೈಲು ಅವಘಡಗಳ ಹಿಂದೆ ವಿಧ್ವಂಸಕ ಕೃತ್ಯದ ಸಂಚು ಇರಬಹುದೇ ಎಂಬ ಅನುಮಾನ ಮೂಡಿದ್ದು, ಅಧಿಕಾರಿಗಳು ಈ ಬಗ್ಗೆ ಕಠಿಣವಾದ ತನಿಖೆಗೆ ಮುಂದಾಗಿದ್ದಾರೆ.
ಕಾನ್ಪುರ: ನಿನ್ನೆ ಮುಂಜಾನೆ ವಾರಣಾಸಿಯಿಂದ ಅಹ್ಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್ ರೈಲೊಂದು ಹಳಿ ತಪ್ಪಿತ್ತು, ರೈಲು ಹಳಿಯಲ್ಲಿ ಅಡ್ಡಲಾಗಿದ್ದ ಗಟ್ಟಿಯಾದ ವಸ್ತುವಿಗೆ ಇಂಜಿನ್ ಗುದ್ದಿದ ಪರಿಣಾಮ 19168 ಸಂಖ್ಯೆಯ ರೈಲಿನ 22 ಕೋಚ್‌ಗಳು ಹಳಿ ತಪ್ಪಿದ್ದವು. ಉತ್ತರ ಪ್ರದೇಶದ ಕಾನ್ಪುರದ ಗೋವಿಂದ್‌ಪುರಿ ರೈಲು ನಿಲ್ದಾಣದ ಸಮೀಪವೇ ಈ ಘಟನೆ ನಡೆದಿತ್ತು. ರೈಲು ಹಳಿಯ ಮೇಲೆ ಅಡ್ಡಲಾಗಿದ್ದ ವಸ್ತುವಿನಿಂದಲೇ ಈ ರೈಲು ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಈಗ ದೇಶದಲ್ಲಿ ಒಂದಾದ ಮೇಲೊಂದರಂತೆ ನಡೆಯುತ್ತಿರುವ ರೈಲು ಅವಘಡಗಳ ಹಿಂದೆ ವಿಧ್ವಂಸಕ ಕೃತ್ಯದ ಸಂಚು ಇರಬಹುದೇ ಎಂಬ ಅನುಮಾನ ಮೂಡಿದ್ದು, ಅಧಿಕಾರಿಗಳು ಈ ಬಗ್ಗೆ ಕಠಿಣವಾದ ತನಿಖೆಗೆ ಮುಂದಾಗಿದ್ದಾರೆ.
ಅಂದಹಾಗೆ ನಿನ್ನೆ ನಡೆದ ರೈಲು ಅವಘಡವೂ ಉತ್ತರ ಪ್ರದೇಶದಲ್ಲಿ ಒಂದೇ ತಿಂಗಳಲ್ಲಿ ನಡೆದಂತಹ 2ನೇ ರೈಲು ಅಪಘಾತವಾಗಿದೆ. ಜುಲೈ 18 ರಂದು ಚಂಢೀಗರ್ ದಿಬ್ರುಗರ್ ಎಕ್ಸ್‌ಪ್ರೆಸ್ ರೈಲೊಂದು ಮೋತಿಗಂಜ್ ಹಾಗೂ ಝಿಲಾಹಿ ರೈಲು ನಿಲ್ದಾಣಗಳ ಮಧ್ಯೆ ಅವಘಡಕ್ಕೀಡಾಗಿತ್ತು. ಈ ಅಪಘಾತದಲ್ಲಿ ನಾಲ್ವರು ರೈಲ್ವೆ ಪ್ರಯಾಣಿಕರು ಸಾವನ್ನಪ್ಪಿ 29 ಜನ ಗಾಯಗೊಂಡಿದ್ದರು.
ಕೊರ್ಬಾ ಎಕ್ಸ್‌ಪ್ರೆಸ್‌ಗೆ ಬೆಂಕಿ, 4 ಎಸಿ ಬೋಗಿಗಳು ಆಹುತಿ; ನಿಲ್ದಾಣದಿಂದ ಎದ್ನೋ ಬಿದ್ನೋ ಅಂತ ಓಡಿದ ಜನರು
ಇದಾದ ನಂತರ ಈಗ ನಿನ್ನೆ ಕಾನ್ಪುರದಲ್ಲಿ ನಡೆದ ರೈಲ್ವೆ ಅವಘಡಕ್ಕೆ ಸಂಬಂಧಿಸಿದಂತೆ ಮಾತನಾಡಿದ, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, 'ತೀಕ್ಷ್ಣವಾದ ಹೊಡೆತದ ಗುರುತನ್ನು ಗಮನಿಸಲಾಗಿದೆ. ಸಾಕ್ಷ್ಯಗಳನ್ನು ರಕ್ಷಿಸಲಾಗಿದೆ. ಐಬಿ ಹಾಗೂ ಉತ್ತರ ಪ್ರದೇಶ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕನಿಗಾಗಲಿ ಸಿಬ್ಬಂದಿಗಾಗಲಿ ಗಾಯಗಳಾಗಿಲ್ಲ, ಘಟನೆ ನಂತರ ಪ್ರಯಾಣ ಮುಂದುವರಿಸಲು ಪ್ರಯಾಣಿಕರಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ . ಈ ರೈಲಿನಲ್ಲಿ 1727 ಜನ ಪ್ರಯಾಣಿಕರಿದ್ದರು. ಅವರಲ್ಲಿ 104 ಜನ ಕಾನ್ಪುರ ಕೇಂದ್ರದಿಂದ ರೈಲು ಏರಿದ್ದರು' ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದರು.
ಮುಂಬೈ-ಹೌರಾ ಪ್ರಯಾಣಿಕರ ರೈಲು ಅಪಘಾತ, ಕನಿಷ್ಠ ಇಬ್ಬರು ಬಲಿ, 20 ಮಂದಿಗೆ ಗಾಯ
ಈ ಅಪಘಾತಕ್ಕೆ ಸಂಬಂಧಿಸಿದಂತೆ ರೈಲು ಚಾಲಕ ಹೇಳುವಂತೆ, ಟ್ರ್ಯಾಕ್‌ನಲ್ಲಿದ್ದ ದೊಡ್ಡದಾದ ಬೊಲ್ಡರ್ ಕಲ್ಲು ರೈಲಿನ ಇಂಜಿನ್‌ಗೆ ತಾಗಿದ ಪರಿಣಾಮ ಇಂಜಿನ್‌ನ ಕ್ಯಾಟಲ್ ಗಾರ್ಡ್‌ಗೆ ತೀವ್ರ ಹಾನಿಯಾಗಿ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಘಟನೆ ವೇಳೆ ರೈಲು 70 ರಿಂದ 80 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಘಟನೆಯ ವೇಳೆ ಡ್ರೈವರ್ ಎಮರ್ಜೆನ್ಸಿ ಬ್ರೇಕ್ ಹಾಕಿದ್ದರಿಂದ ಹಳಿಯಲ್ಲಿದ್ದ ಕೋಚ್‌ಗಳು ಒಮ್ಮೆಲೆ ಜಂಪ್ ಆಗಿ ಮಗುಚಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕೇಂದ್ರ ರೈಲ್ವೆಯ ಎನ್‌ಸಿಆರ್ ಸಿಪಿಆರ್‌ಒ ಶಶಿಕಾಂತ್ ತ್ರಿಪಾಠಿ ಪ್ರತಿಕ್ರಿಯಿಸಿದ್ದು, ಲೋಕೋ ಪೈಲಟ್ ಹೇಳಿಕೆ ಆಧರಿಸಿ ಹಾಗೂ ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಆಧರಿಸಿ ಘಟನೆಗೆ ನಿಜವಾದ ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಘಟನೆಯ ನಂತರ 7 ರೈಲುಗಳು ರದ್ದಾಗಿವೆ. ಮೂರು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ನಾವು 2ನೇ ಲೇನ್ ಅನ್ನು ಸರಿ ಮಾಡಿ ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಘಟನೆಯ ನಂತರ ಇಲ್ಲಿ ಅತೀಹೆಚ್ಚು ಹಾನಿಯಾಗಿದೆ ಎಂದು ಎನ್‌ಸಿಆರ್ ಜನರಲ್ ಮ್ಯಾನೇಜರ್ ಉಪೇಂದ್ರ ಚಂದ್ರ ಹೇಳಿದ್ದಾರೆ.
ಇದಕ್ಕೂ ಮೊದಲು ಸಂಭವಿಸಿದ್ದ ಚಂಢೀಗರ್ ದಿಬ್ರುಗರ್ ರೈಲು ಅಪಘಾತದ ಸಂದರ್ಭದಲ್ಲಿ ರೈಲು ಚಾಲಕ ರೈಲು ಹಳಿ ತಪ್ಪುವ ಮೊದಲು ಭಾರಿ ಸದ್ದು ಕೇಳಿದ್ದಾಗಿ ಹೇಳಿದ್ದರು. ಹೀಗಾಗಿ ಇದು ತನ್ನನ್ನು ತುರ್ತು ಬ್ರೇಕ್ ಹಾಕುವಂತೆ ಪ್ರೇರೆಪಣೆ ಮಾಡಿತ್ತು ಎಂದು ಹೇಳಿದ್ದರು.