Asianet Suvarna News Asianet Suvarna News

ಕೂದಲು ಉದುರಿದ್ದರೆ ಪೂರ್ತಿ ತಲೆ ಶೇವ್‌ ಮಾಡಿ : ಸಿಬ್ಬಂದಿಗೆ ಏರ್ ಇಂಡಿಯಾ ಸೂಚನೆ

ಟಾಟಾ ಒಡೆತನದ ಏರಿಂಡಿಯಾ ತನ್ನ ಕ್ಯಾಬಿನ್‌ ಸಿಬ್ಬಂದಿಗಳಿಗೆ ಹೊಸ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ. ಇದರ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿಗಳು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಅಲ್ಲದೇ ಮಹಿಳೆಯರು ಮುತ್ತು ಇರುವ ಕಿವಿ ಓಲೆಗಳನ್ನು ಧರಿಸದಂತೆಯೂ ಸೂಚಿಸಿದೆ.

Shave your entire head if you have hair loss Air India instructs staff akb
Author
First Published Nov 25, 2022, 10:25 AM IST

ನವದೆಹಲಿ: ಟಾಟಾ ಒಡೆತನದ ಏರಿಂಡಿಯಾ ತನ್ನ ಕ್ಯಾಬಿನ್‌ ಸಿಬ್ಬಂದಿಗಳಿಗೆ ಹೊಸ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ. ಇದರ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿಗಳು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಅಲ್ಲದೇ ಮಹಿಳೆಯರು ಮುತ್ತು ಇರುವ ಕಿವಿ ಓಲೆಗಳನ್ನು ಧರಿಸದಂತೆಯೂ ಸೂಚಿಸಿದೆ.

ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರಿಂಡಿಯಾ (Air India) ತನ್ನ ಸಿಬ್ಬಂದಿಗಳ ವಸ್ತ್ರಸಂಹಿತೆ (dress code) ಅಂತಾರಾಷ್ಟ್ರೀಯ ಮಾನದಂಡಕ್ಕೆ (international standards) ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು ಬೋಳು ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದನ್ನು ಪ್ರತಿನಿತ್ಯ ಶೇವ್‌ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯವಾಗಿ ವರ್ತಿಸುವುದನ್ನು ನಿಲ್ಲಿಸಬೇಕು. ಸಮವಸ್ತ್ರದಲ್ಲಿದ್ದಾಗ ಯಾವಾಗಲೂ ಅಲಂಕಾರವನ್ನು ಕಾಪಾಡಿಕೊಳ್ಳಬೇಕು ಮತ್ತು ಶಾಂತ ಸಂಭಾಷಣೆಯನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.

ಮಹಿಳಾ ಸಿಬ್ಬಂದಿಗಳು (Women staff) ಕೇವಲ ಚಿನ್ನ (gold) ಮತ್ತು ವಜ್ರದ (diamond)ವೃತ್ತಾಕಾರದ ಕಿವಿ ಓಲೆಗಳನ್ನು ಮಾತ್ರ ಧರಿಸಬೇಕು. 0.5 ಸೆಂ.ಮೀ. ಅಗಲದ ಬಿಂದಿ ಮತ್ತು 1 ಸೆಂ.ಮೀ.ಗಿಂತ ಹೆಚ್ಚು ಅಗಲ ಇಲ್ಲದ ಉಂಗುರಗಳನ್ನು ಧರಿಸಬೇಕು. ಒಂದು ಕೈಗೆ ಒಂದು ಉಂಗುರ ಮಾತ್ರ ಧರಿಸಬೇಕು. ಜೊತೆಗೆ ಯಾವುದೇ ಡಿಸೈನ್‌ಗಳಿಲ್ಲದ ಒಂದು ಬಳೆ ಮಾತ್ರ ಧರಿಸಬೇಕು ಎಂದು ತಿಳಿಸಲಾಗಿದೆ.ಏರಿಂಡಿಯಾ ರಾಷ್ಟ್ರೀಕರಣಗೊಂಡ 70 ವರ್ಷಗಳ ಬಳಿಕ ಟಾಟಾ ಕಂಪನಿ (Tata company) ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಮಾನ ಸಂಸ್ಥೆಯ ಒಡೆತನವನ್ನು ಮರಳಿ ಪಡೆದುಕೊಂಡಿತ್ತು.

ಟಾಟಾ ಗ್ರೂಪ್ಸ್ ಒಡೆತನದ ಏರ್ ಇಂಡಿಯಾಗೆ ಅಮೆರಿಕದಿಂದ 987 ಕೋಟಿ ರೂ ದಂಡ!

ಏರ್ ಇಂಡಿಯಾದ ಎಲ್ಲ ಏರ್ ಲೈನ್ಸ್ ಗಳಿಗೂ ಇನ್ಮುಂದೆ ಗುರುಗ್ರಾಮ ಕೇಂದ್ರ ಕಚೇರಿ!

ಏರ್ ಇಂಡಿಯಾ ಪೈಲಟ್‌ಗಳಿಗೆ ಸಿಹಿ ಸುದ್ದಿ, ನಿವೃತ್ತಿಯ ಬಳಿಕವೂ ಉದ್ಯೋಗ!

 

Follow Us:
Download App:
  • android
  • ios