ನವದೆಹಲಿ(ನ.23): ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ಇಡೀ ದೇಶ ಕುತೂಹಲದಿಂದ ನೋಡುತ್ತಿದೆ. ಏಕಾಏಕಿ ಬಿಜೆಪಿಗೆ ಬೆಂಬಲ ಘೋಷಿಸಿ ಎನ್’ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಮಧ್ಯೆ ಅಪರೂಪದ ಆಂಗ್ಲ ಶಬ್ಧಗಳನ್ನು ಬಳಸುವಲ್ಲಿ ನಿಸ್ಸೀಮರಾಗಿರುವ ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತು ಟ್ವಿಟ್ ಮಾಡಿರುವ ಶಶಿ ತರೂರ್, ಈ ಹಿಂದೆ ತಾವು ಬಳಸಿದ್ದ Snollygoster (ಸ್ನೋಲಿಗೊಸ್ಟರ್)ಎಂಬ ಆಂಗ್ಲ ಪದವನ್ನು ಮತ್ತೊಮ್ಮೆ ಬಳಸಿದ್ದಾರೆ.

Snollygoster ಎಂದರೆ ತತ್ವರಹಿತ ರಾಜಕಾರಣಿ ಎಂದಾಗುತ್ತದೆ. ಈ ಹಿಂದೆ 26/7/2017ರಲ್ಲಿ ಈ ಪದ ಬಳಿಸಿ ಟ್ವಿಟ್ ಮಾಡಿದ್ದ ತರೂರ್, ಅಮೆರಿಕನ್ ಇಂಗ್ಲಿಷ್’ನ ಉಪಭಾಷೆಯಾಗಿರುವ ಈ ಪದವನ್ನು ಮೊದಲು 1845ರಲ್ಲಿ ಬಳಸಲಾಗಿತ್ತು ಎಂದು ತಿಳಿಸಿದ್ದರು.

ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಉಚ್ಛಾಟನೆಗೊಂಡ ಅಜಿತ್ ಪವಾರ್!
 

ಇದೀಗ ಮತ್ತೆ ಈ ಪದವನ್ನು ಟ್ವಿಟ್ ಮಾಡಿರುವ ತರೂರ್, Snollygoster ಪದವನ್ನು ಮೂರನೇ ಬಾರಿ 23/11/2019ರಲ್ಲಿ ಮತ್ತೊಮ್ಮೆ ಬಳಸಬೇಕಾಗಿ ಬಂದಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಹಗರಣಗಳ ಸರದಾರ 'ಮಹಾ' ಸರ್ಕಾರದ 'ಕಿಂಗ್ ಮೇಕರ್' ಅಜಿತ್ ಪವಾರ್!