ಸಂಸದ ಶಶಿ ತರೂರ್, ಭಾರತ-ಪಾಕಿಸ್ತಾನ ಸಂಘರ್ಷ ವಿಚಾರವಾಗಿ ಜಾಗತಿಕ ಸಮುದಾಯಕ್ಕೆ ಭಾರತದ ನಿಲುವು ತಿಳಿಸುವ ಬಹುಪಕ್ಷೀಯ ನಿಯೋಗದಲ್ಲಿ ಸ್ಥಾನ ಪಡೆದಿದ್ದಾರೆ. ಹಿಂದೆ ಮಹಿಳಾ ಸಂಸದರೊಂದಿಗಿನ ಫೋಟೋಗಳು ಮತ್ತು ಇಂಗ್ಲಿಷ್ ಜ್ಞಾನಕ್ಕೆ ಸುದ್ದಿಯಾಗಿದ್ದ ತರೂರ್, ಈಗ ಗಂಭೀರ ವಿಷಯಕ್ಕೆ ಮನ್ನಣೆ ಪಡೆದಿದ್ದಾರೆ. ಈ ಹಿಂದೆ ಸಂಸತ್ತಿನಲ್ಲಿ ಮಹಿಳಾ ಸಹೋದ್ಯೋಗಿಗಳೊಂದಿಗೆ ತೆಗೆದ ಫೋಟೋ ಟ್ರೋಲ್‌ಗೆ ಗುರಿಯಾಗಿತ್ತು.

ಬೆಂಗಳೂರು (ಮೇ.17): ಕೊನೆಗೂ ತಿರುವನಂತಪುರ ಸಂಸದ ಶಶಿ ತರೂರ್‌ಗೆ ಅವರ ಅರ್ಹತೆಯ ಕೆಲಸ ನೀಡೋದಕ್ಕೆ ಮೋದಿ ಸರ್ಕಾರವೇ ಬರಬೇಕಾಯ್ತು ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ವೈರಲ್‌ ಆಗುತ್ತಿದೆ. ಅದರಕ್ಕೆ ಕಾರಣ, ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದ ಬಗ್ಗೆ ಜಗತ್ತಿನ ಪ್ರಮುಖ ದೇಶಗಳ ಎದುರು ಭಾರತ ಕೈಗೊಂಡ ಕ್ರಮಗಳನ್ನು ತಿಳಿಸಲು ಸರ್ಕಾರ ಬಹುಪಕ್ಷೀಯ ನಿಯೋಗವನ್ನು ರಚಿಸಿದೆ. ಅದರಲ್ಲಿ ಶಶಿ ತರೂರ್‌ ಅವರಿಗೂ ಪ್ರಮುಖ ಸ್ಥಾನ ನೀಡಲಾಗಿದೆ.

ಇಷ್ಟು ದಿನ ಹೆಣ್ಮಕ್ಕಳ ಜೊತೆ ಫೋಟೋ ತೆಗೆಸಿಕೊಳ್ಳುವ ವಿಚಾರಕ್ಕೆ ಹಾಗೂ ತಮ್ಮ ಇಂಗ್ಲೀಷ್‌ ಗ್ರಾಮರ್‌ ವಿಚಾರವಾಗಿ ಸುದ್ದಿಯಾಗುತ್ತಿದ್ದ ಶಶಿ ತರೂರ್‌, ಇದೇ ಮೊದಲ ಬಾರಿಗೆ ಒಳ್ಳೆಯ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

2021ರ ನವೆಂಬರ್‌ನಲ್ಲಿ ಶಶಿ ತರೂರ್‌ ಒಂದು ಫೋಟೋ ಹಂಚಿಕೊಂಡಿದ್ದರು. ಇದರಲ್ಲಿ ಶಶಿ ತರೂರ್ ಅವರೊಂದಿಗೆ ಸುಪ್ರಿಯಾ ಸುಲೆ, ಪ್ರಣೀತ್ ಕೌರ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ಮತ್ತು ಜೋತಿಮಣಿ ಅವರೊಂದಿಗೆ ಇದ್ದರು. ಈ ಫೋಟೋಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಅಂದು ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿತ್ತು. ಮೊದಲ ದಿನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕಾನೂನಿನ ಬಗ್ಗೆ ಸದನದೊಳಗೆ ಗದ್ದಲ ನಡೆದರೆ, ಮತ್ತೊಂದೆಡೆ, ಸಂಸತ್ತು ಕೂಡ ಸಂಸದರಿಂದ ತುಂಬಿತ್ತು. ಇನ್ನೊಂದೆಡೆ ಇದ್ಯಾವುದರ ಲೆಕ್ಕವೇ ಇಲ್ಲದೆ, ತಮ್ಮ ವಿಶಿಷ್ಟ ಶೈಲಿಗೆ ಹೆಸರುವಾಸಿಯಾದ ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಶಿಯಲ್‌ ಮೀಡಿಯಾದಲ್ಲಿ ಮಾಡಿದ ಟ್ವೀಟ್‌ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ತರೂರ್ ಒಂದು ಫೋಟೋ ಟ್ವೀಟ್ ಮಾಡಿ, "ಲೋಕಸಭೆ ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ? ಇಂದು ಬೆಳಿಗ್ಗೆ, ನಾನು ನನ್ನ ಆರು ಸಹ ಸಂಸದರೊಂದಿಗೆ ಇದ್ದೇನೆ" ಎಂದು ಬರೆದಿದ್ದರು.

ತರೂರ್ ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ, ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್, ಕಾಂಗ್ರೆಸ್ ಸಂಸದೆ ಜೋತಿಮಣಿ ಜೊತೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ತರೂರ್ ಹೊರತುಪಡಿಸಿ, ಉಳಿದ ಎಲ್ಲಾ ಸಂಸದರು ಮಹಿಳೆಯರು ಎಂಬುದು ಗಮನಿಸಬೇಕಾದ ಸಂಗತಿ. ಈ ಕಾರಣದಿಂದಾಗಿ, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ತರೂರ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.

'ತಿರುವನಂತಪುರದ ಜನ ನಿಮಗೆ ಇದಕ್ಕಾಗಿಯೇ ಸಂಸತ್ತಿಗೆ ಕಳಿಸಿದ್ದಾರೆ. ಈಗಲೂ ಕೂಡ ನೆಹರೂ ಸಿದ್ಧಾಂತದಲ್ಲಿಯೇ ಬದುಕುತ್ತಿದ್ದೀರಿ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ, ನೀವು ಕೇವಲ ಹುಡುಗಿಯರತ್ತ ಮಾತ್ರವೇ ಅಟ್ರಾಕ್ಟ್‌ ಆಗ್ತೀರಾ? ನೀವು ಕೆಲಸ ಮಾಡುವ ಸ್ಥಳ ಅಟ್ರಾಕ್ಟಿವ್‌ ಆಗಿರಬೇಕು ಎಂದು ನಿಮಗೆ ಅನಿಸೋದಿಲ್ಲವೇ ಎಂದು ಮತ್ತೊಬ್ಬರು ಬರೆದಿದ್ದರು.

'ಕಚೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಸಹೋದ್ಯೋಗಿಗಳೊಂದಿಗೆ ಫೋಟೋ ತೆಗೆಸಿಕೊಂಡರೆ ಪರವಾಗಿಲ್ಲ ಆದರೆ ಶಶಿ ತರೂರ್ ಸಹೋದ್ಯೋಗಿಗಳೊಂದಿಗೆ ಕ್ಲಿಕ್ ಮಾಡಿದಾಗ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.. ಅಸಮಾನತೆ ಮತ್ತು ಪಕ್ಷಪಾತದ ಜನರು ಯಾವಾಗಲೂ ಇರುತ್ತಾರೆ. ನೀವು ಎಂದಾದರೂ ಪುರುಷರು ಮತ್ತು ಮಹಿಳೆಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದರೆ ನಿಮ್ಮ ಕ್ಯಾಮೆರಾ ರೋಲ್ ಅನ್ನು ಸ್ಕ್ರಾಲ್ ಮಾಡಿ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿ' ಎಂದು ಮತ್ತೊಬ್ಬರು ಪೋಸ್ಟ್‌ ಮಾಡಿದ್ದರು.

ವೈರಲ್‌ ಆಗಿದ್ದ ಪಾರ್ಲಿಮೆಂಟ್‌ ವಿಡಿಯೋ: ಇಷ್ಟು ಮಾತ್ರವಲ್ಲದೆ ಸಂಸತ್ತಿನ ವಿಡಿಯೋವೊಂದರಲ್ಲಿ ಫಾರುಖ್‌ ಅಬ್ದುಲ್ಲಾ ಮಾತನಾಡುವ ವೇಳೆ ಅವರ ಹಿಂದೆ ಕುಳಿತಿದ್ದ ಶಶಿ ತರೂರ್‌, ಸುಪ್ರಿಯಾ ಸುಳೆ ಜೊತೆ ಖುಷಿ ಖುಷಿಯಾಗಿ ಮಾತನಾಡುತ್ತಿದ್ದ ವಿಡಿಯೋ ಕೂಡ ಸಖತ್‌ ವೈರಲ್‌ ಆಗಿತ್ತು.

When Shashi Tharoor met Supriya Sule in Parliament | Farooq Abdullah | Sanjay Dixit