ಎಂಜಿನ್‌ ದೋಷ ಕಂಡುಬಂದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶಾರ್ಜಾ-ಹೈದರಾಬಾದ್‌ ಇಂಡಿಗೋ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ಭೂಸ್ಪರ್ಶ ಮಾಡಲಾಗಿದೆ. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.

ನವದೆಹಲಿ (ಜು.18): ಎಂಜಿನ್‌ ದೋಷ ಕಂಡುಬಂದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶಾರ್ಜಾ-ಹೈದರಾಬಾದ್‌ ಇಂಡಿಗೋ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ಭೂಸ್ಪರ್ಶ ಮಾಡಲಾಗಿದೆ. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ. ಒಂದೇ ತಿಂಗಳಲ್ಲಿ ಸ್ಪೈಸ್‌ ಜೆಟ್‌ನ ವಿಮಾನಗಳಲ್ಲಿ 8 ಬಾರಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದಕ್ಕೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಅದರ ಬೆನ್ನಲ್ಲೇ ಮತ್ತೆ ಅಂತಹದ್ದೇ ಘಟನೆ ಇಂಡಿಗೋದಲ್ಲೂ ವರದಿಯಾಗಿದೆ.

‘ವಿಮಾನದ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣದಿಂದಾಗಿ ಕರಾಚಿಯತ್ತ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಲಾಯಿತು. ಕರಾಚಿಗೆ ಇನ್ನೊಂದು ವಿಮಾನವನ್ನು ಕಳುಹಿಸಿ ಎಲ್ಲಾ ಪ್ರಯಾಣಿಕರನ್ನು ಹೈದರಾಬಾದಿಗೆ ಸುರಕ್ಷಿತವಾಗಿ ಕರೆತರಲಾಗಿದೆ’ ಎಂದು ಇಂಡಿಗೋ ಹೇಳಿದೆ. ಜು.14 ರಂದು ಇಂಡಿಗೋದ ದೆಹಲಿ- ವಡೋದರಾ ವಿಮಾನವನ್ನು ತಾಂತ್ರಿಕ ದೋಷದಿಂದ ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಘಟನೆಗಳ ತನಿಖೆ ಮಾಡುವುದಾಗಿ ಡಿಜಿಸಿಎ ಹೇಳಿದೆ.

ಇಂಡಿಗೋ ವಿಮಾನ ಪ್ರಯಾಣಿಕನಿಗೆ ಕ್ಯೂಟ್ ಚಾರ್ಜ್, ಇದೆಂಥಾ ವಿಚಿತ್ರ !

ಜೈಪುರದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ಕಳೆದ ವಾರವಷ್ಟೇ ಸ್ಪೈಸ್‌ ಜೆಟ್‌ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬೆನ್ನಲ್ಲಿಯೇ ಗುರುವಾರ ದೇಶದಲ್ಲಿ ಮತ್ತೊಂದು ಅದೇ ರೀತಿಯ ಪ್ರಕರಣ ವರದಿಯಾಗಿದೆ. ದೆಹಲಿಯಿಂದ ವಡೋದರಾಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನ 6ಇ-859 ಇಂಜಿನ್‌ ಕಂಪನದ ಕಾರಣಕ್ಕಾಗಿ ಜೈಪುರದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದ್ದು, ಸದ್ಯ ವಿಮಾನವನ್ನು ಪರಿಶೀಲನೆ ಮಾಡಲಾಗುತ್ತಿದೆ. ಇಂಡಿಗೋ ಎಂಜಿನ್ ಈ ರೀತಿ ಕಂಪಿಸಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬ ಬಗ್ಗೆ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿಲ್ಲ. 

ವಿಮಾನ ಹಾರಾಟ ವಿಳಂಬವಾದ ಬೆನ್ನಲ್ಲೇ ಪೈಲಟ್ ಗಳ ವೇತನ ಹೆಚ್ಚಿಸಿದ ಇಂಡಿಗೋ

ಕೆಲವು ತಾಂತ್ರಿಕ ದೋಷದಿಂದ ದೆಹಲಿಯಿಂದ ವಡೋದರಾಗೆ ಹೋಗುತ್ತಿದ್ದ ವಿಮಾನವು ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದಷ್ಟೇ ಮಾಹಿತಿ ಸಿಕ್ಕಿದೆ. ಅಂದಹಾಗೆ, ಸ್ಪೈಸ್‌ಜೆಟ್ ವಿಮಾನವು ಈ ಸಮಯದಲ್ಲಿ ಇಂಐ ವಿಚಾರಗಳಿಗಾಗಿ ಹೆಚ್ಚಾಗಿ ಚರ್ಚೆಯಾಗಿತ್ತು. ಕೆಲವೇ ದಿನಗಳಲ್ಲಿ, ಇಂತಹ ಅನೇಕ ಪ್ರಕರಣಗಳು ನಡೆದಿವೆ, ಇದರಿಂದಾಗಿ ವಿಮಾನಯಾನ ಸಂಸ್ಥೆಯ ಇಮೇಜ್ ಕೂಡ ಸ್ವಲ್ಪ ಮಟ್ಟಿಗೆ ಹಾಳಾಗಿದೆ. ಪಾಟ್ನಾದಲ್ಲಿ ಚಲಿಸುವ ವಿಮಾನಕ್ಕೆ ಹಕ್ಕಿ ಬಡಿದು ಇಂಜಿನ್‌ ವೈಫಲ್ಯ ಕಂಡಿದ್ದರೆ, ಪಾಕಿಸ್ತಾನದಲ್ಲಿ ಲ್ಯಾಂಡ್‌ ಆದ ವಿಮಾನದಲ್ಲಿಯೂ ತಾಂತ್ರಿಕ ದೋಷ ಕಂಡು ಬಂದಿತ್ತು. ಕಳೆದ 3 ತಿಂಗಳಲ್ಲಿ ಅಂದಾಜು 8 ಬಾರಿ ಇಂಥ ಘಟನೆಗಳು ಕಂಡುಬಂದಿದೆ.