ಸಿಖ್ಖರಿಗೆ ಖಲಿಸ್ತಾನ್, ಮುಸ್ಲಿಮರಿಗೆ ಉರ್ದುಸ್ತಾನ್; ಉಗ್ರ ಪನ್ನು ಬಗ್ಗೆ ಎನ್ಐಎ ಮಾಜಿ ಮಹಾನಿರ್ದೇಶಕ ವೈಸಿ ಮೋದಿ ಹೇಳಿದ್ದೇನು?
ಖಲಿಸ್ತಾನ್ ಭಯೋತ್ಪಾದಕರನ್ನು ಬೆಂಬಲಿಸುವಲ್ಲಿ ಪಾಕಿಸ್ತಾನ ಮತ್ತು ಕೆನಡಾ ಶಾಮೀಲಾಗಿರುವುದನ್ನು ಎನ್ ಐಎ ಮಾಜಿ ಮಹಾನಿರ್ದೇಶಕ ವೈ.ಸಿ.ಮೋದಿ ಬಹಿರಂಗಪಡಿಸಿದ್ದಾರೆ. ಈ ಕುರಿತು ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೋದಿ ಬಹಿರಂಗಪಡಿಸಿದ್ದಾರೆ.

India-canada row:
ಖಲಿಸ್ತಾನ್ ಭಯೋತ್ಪಾದಕರನ್ನು ಬೆಂಬಲಿಸುವಲ್ಲಿ ಪಾಕಿಸ್ತಾನ ಮತ್ತು ಕೆನಡಾ ಶಾಮೀಲಾಗಿರುವುದನ್ನು ಎನ್ ಐಎ ಮಾಜಿ ಮಹಾನಿರ್ದೇಶಕ ವ ಬಹಿರಂಗಪಡಿಸಿದ್ದಾರೆ. ಈ ಕುರಿತು ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೋದಿ ಬಹಿರಂಗಪಡಿಸಿದ್ದಾರೆ.
ಕೆನಡಾದಲ್ಲಿರುವ ಪ್ರತ್ಯೇಕತಾವಾದಿಗಳ ಬಗ್ಗೆ ಎನ್‌ಐಎ ಈ ಹಿಂದೆ ಒಟ್ಟಾವಾ ಜತೆ ಸಾಕಷ್ಟು ಮಾಹಿತಿ ಹಂಚಿಕೊಂಡಿತ್ತು. ಈ ಪ್ರಯತ್ನಗಳಿಗೆ ಕೆನಡಾದ ಪ್ರತಿಕ್ರಿಯೆ ಮೌನವಾಗಿತ್ತು. ಗುರ್ಪತ್‌ವಂತ್ ಸಿಂಗ್ ಪನ್ನುನ್(Gurpatwant Singh Pannun ) ಮತ್ತು ಹರ್ದೀಪ್ ಸಿಂಗ್ ನಿಜ್ಜರ್(Hardeep Singh Nijjar) ನಂತಹ ಖಲಿಸ್ತಾನಿ ಉಗ್ರರ ವಿರುದ್ಧ ನಿಖರವಾದ ಪುರಾವೆಗಳನ್ನು ಒದಗಿಸಿದ್ದರೂ ಕೆನಡಾ ಸರ್ಕಾರವು ಪ್ರತಿಕ್ರಿಯಿಸಲು ಅಥವಾ ಆ ಬಗ್ಗೆ ಕ್ರಮ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಮೋದಿ ಕೆನಡಾದ ಗೋಸುಂಬೆತನ ಬಯಲು ಮಾಡಿದ್ದಾರೆ.
ಹೇಗಿದೆ ಗೊತ್ತಾ ಭಾರತ-ಕೆನಡಾ ಸಂಬಂಧ ? ಖಲಿಸ್ತಾನಿಗಳ ಟಾರ್ಗೆಟ್ ಹಿಂದಿರೋ ಅಸಲಿ ಕತೆ ಏನು ?
ಜಸ್ಟಿನ್ ಟ್ರುಡೊ(Justin Trudeau) ಅವರು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂದು ಆರೋಪಿಸಿ ಸರ್ಕಾರಿ ತನಿಖೆಗೆ ಆದೇಶಿಸಿದ್ದರು. ಭಾರತ ಮತ್ತು ಕೆನಡಾ ನಡುವೆ ವಿವಾದ ನಡೆಯುತ್ತಿರುವ ಸಂದರ್ಭದಲ್ಲಿ ವೈಸಿ ಮೋದಿ(YC Modi)ಯವರು ಇದೀಗ ಕೆನಡಾದ ಮುಖವಾಡ ಬಯಲಿಗೆಳೆದಿದ್ದಾರೆ. ಅದ್ಯಾಗೂ ನಿಜ್ಜರ್ ಹತ್ಯೆಯಲ್ಲಿ ಕೆನಡಾ ಮಾಡಿರುವ ಆರೋಪವನ್ನು ಭಾರತ ನಿರಾಕರಿಸಿದೆ.
ಕೆನಡಾ ಸರ್ಕಾರದ ಆರೋಪಗಳು ನಿರಾಧಾರ ಎಂದು ತಳ್ಳಿಹಾಕಿದ ಮೋದಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಇಮೇಜ್‌ಗೆ ಧಕ್ಕೆ ತರುವಂಥ ಯಾವ ಕೆಲಸ ಮಾಡಬಾರದು ಎಂಬುದು ಭಾರತದ ನೀತಿ. ಅಂತಹದ್ದರಲ್ಲಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬುದಕ್ಕೆ ಕೆನಡಾದ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
“ಪ್ರತಿ ಬಾರಿ ಕೆನಡಾದ ಸರ್ಕಾರವು ಭಯೋತ್ಪಾದಕ ಅಥವಾ ಖಲಿಸ್ತಾನಿಯನ್ನು ಗಡಿಪಾರು ಮಾಡಲು ಅಥವಾ ಹಸ್ತಾಂತರಿಸಲು ಮಾತುಕತೆಯ ಮೂಲಕ ಕೇಳಿದಾಗ, ಕೆನಡಾ ಸರ್ಕಾರವು ಸಹಾಯ ಮಾಡಲಿಲ್ಲ. ಅವರು ತಮ್ಮ ದೇಶದಲ್ಲಿ ಭಯೋತ್ಪಾದಕರು ಮತ್ತು ಅಪರಾಧಿಗಳ ಬಗ್ಗೆ ತಿಳಿದಿದ್ದಾರೆ ಆದರೂ ಕೆನಡಾ ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತಿಲ್ಲ. ಕೆನಡಾದ ಅಸಹಕಾರದ ಬಗ್ಗೆ ಮಾಜಿ NIA ಮುಖ್ಯಸ್ಥ ಕಳವಳ ವ್ಯಕ್ತಪಡಿಸಿದರು. ಅಂತಹ ವ್ಯಕ್ತಿಗಳಿಗೆ ಇದು ಕೆನಡಾ ಸುರಕ್ಷಿತ ಸ್ವರ್ಗವಾಗಿದೆ. ಕೆನಡಾದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೇರಬೇಕು, ಆಗ ಮಾತ್ರ ಖಲಿಸ್ತಾನಿಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತಾರೆ ಎಂದಿದ್ದಾರೆ.
ಖಲಿಸ್ತಾನಿಗಳಿಗೆ ಪಾಕಿಸ್ತಾನ ಬೆಂಬಲ!
ವಿವಿಧ ದೇಶಗಳಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗಳು ಖಲಿಸ್ತಾನಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿವೆ ಎಂದು ವೈಸಿ ಮೋದಿ ಆರೋಪಿಸಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಪಾತ್ರವಿದೆ ಎಂದಿದ್ದಾರೆ. ಪಂಜಾಬ್‌ನಲ್ಲಿ ಶಾಂತಿ ಕದಡುವ ಪ್ರಯತ್ನಗಳಲ್ಲಿ ನಿಜ್ಜರ್ ತೊಡಗಿಸಿಕೊಂಡಿದ್ದಾನೆ ಆದರೆ ಭಯೋತ್ಪಾದನೆಯನ್ನು ಹರಡಲು ನಿಜ್ಜರನ ಪ್ರಯತ್ನಗಳು ವಿಫಲವಾಗಿವೆ ಎಂದು ಮೋದಿ ಹೇಳಿದ್ದಾರೆ.
ಸಿಖ್ಖರಿಗೆ ಖಲಿಸ್ತಾನ್, ಮುಸ್ಲಿಮರಿಗೆ ಉರ್ದುಸ್ತಾನ್:
ಖಲಿಸ್ತಾನ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಭಾರತವನ್ನು ಧಾರ್ಮಿಕ ಸಾಮ್ರಾಜ್ಯಗಳಾಗಿ ಕತ್ತರಿಸಲು ಯೋಜಿಸಿದ್ದಾನೆ. ಇಂದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿರುವ ಉಗ್ರ ಇವನು. ಒಂದರ್ಥದಲ್ಲಿ ಭಾರತ-ಕೆನಡಾ ಬಾಂಧವ್ಯ ತೀರಾ ಹದಗೆಡಲು ಈ ಖಲಿಸ್ತಾನ್ ಪ್ರತ್ಯೇಕತಾವಾದಿಯೂ ಕಾರಣ. ಉಗ್ರ ಪನ್ನು ಹುಟ್ಟಿದ್ದು ಪಂಜಾಬ್ ನಲ್ಲಿ. ಇಲ್ಲೆ ಶಿಕ್ಷಣವನ್ನೂ ಪೂರೈಸಿದ್ದು. ಆದರೆ ಈಗ ಅವನು ವಿದೇಶದಲ್ಲಿ ನೆಲೆಸಿದ್ದಾನೆ. ಅವನೀಗ ಯಾವ ದೇಶದಲ್ಲಿದ್ದಾನೆ ಎಂದು ಕೇಳಿದರೆ ನಿಖರವಾದ ಉತ್ತರವನ್ನು ನೀಡಲು ಸಾಧ್ಯವಿಲ್ಲ.ಅವನು ಕೆಲವೊಮ್ಮೆ ಕೆನಡಾದಲ್ಲಿ, ಕೆಲವೊಮ್ಮೆ ಅಮೆರಿಕಾದಲ್ಲಿ ... ಹೀಗೆ ಬೇರೆ ಬೇರೆ ದೇಶಗಳ ಮೂಲಕ ಭಯೋತ್ಪಾದಕ ದಾಳಿ ಬಗ್ಗೆ ಭಾರತಕ್ಕೆ ಬೆದರಿಕೆ ಹಾಕುವುದು ಅವನ ಮುಖ್ಯ ಕಾರ್ಯವಾಗಿದೆ. ಈ ಖಲಿಸ್ತಾನ ಉಗ್ರರ ಗುಂಪು ಇನ್ನೂ ಒಂದು ಕೆಲಸ ಮಾಡುತ್ತಿದೆ. ಅದೇನೆಂದರೆ ಕೆನಡಾದಲ್ಲಿ ನೆಲೆಸಿರುವ ಹಿಂದೂಗಳಿಗೆ ಬೆದರಿಕೆ ಹಾಕುವುದು. ಭಾರತ-ಕೆನಡಾ ಸಂಘರ್ಷದ ನಂತರ ಪನ್ನು ಹಿಂದೂಗಳನ್ನು ಬೆದರಿಸುವುದು ಶುರು ಮಾಡಿದ್ದಾನೆ.
ಇದೇ ವೇಳೆ ಇತ್ತೀಚೆಗೆ ಪನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ರಹಸ್ಯ ಸಭೆ ನಡೆಸಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಸಭೆಯ ವೀಡಿಯೋ ಬಹಿರಂಗವಾಗಿ ಇದು ದೃಢಪಟ್ಟಿದೆ. ಈ ವಿಡಿಯೋ ಮೂಲಕ ಪನ್ನು ವಿಶ್ವಕಪ್ ಕ್ರಿಕೆಟ್ ವೇಳೆ ಅಹಮದಾಬಾದ್‌ನಲ್ಲಿ ಉಗ್ರರ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.
ಹದಗೆಟ್ಟ ಭಾರತ-ಕೆನಡಾ ಸಂಬಂಧ:
ಖಲಿಸ್ತಾನ್ ಪರವಾದ ಕಾರಣ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಬಹಳವಾಗಿ ಹದಗೆಟ್ಟಿವೆ. ದಿನದಿಂದ ದಿನಕ್ಕೆ ಆ ಅಂತರ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ ಪನ್ನು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪನ್ನು ಹಿಂದೂಗಳಿಗೆ ಕೆನಡಾ ತೊರೆಯುವಂತೆ ಬೆದರಿಕೆ ಹಾಕಿದ್ದ. ಹಿಂದೂಗಳು ಕೆನಡಾವನ್ನು ತಮ್ಮ ದೇಶವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪನ್ನು ಆರೋಪಿಸಿದ್ದ.
ಗುರುಪತ್ವಂತ್ ಸಿಂಗ್ ಪನ್ನು ಹೊಸ ದಾಖಲೆ ಬಿಡುಗಡೆ:
ಭಾರತ ಸರ್ಕಾರವು ಗುರುಪತ್ವಂತ್ ಸಿಂಗ್ ಪನ್ನು ಅವರ ಮೂಲ ಮಾಹಿತಿಯನ್ನು ಪ್ರಕಟಿಸುವ ಮೂಲಕ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದೆ.
ದಾಖಲೆಗಳ ಪ್ರಕಾರ, ಉಗ್ರ ಪನ್ನು ಕುಟುಂಬವು 1947 ರಲ್ಲಿ ವಿಭಜನೆಯ ನಂತರ ಪಾಕಿಸ್ತಾನದಿಂದ ಅಮೃತಸರದ ಖಾನ್ಕೋಟ್ ಗ್ರಾಮಕ್ಕೆ ಬಂದಿತು. ಅವನು ಫೆಬ್ರವರಿ 14, 1967 ರಂದು ಜನಿಸಿದರು. ಅವನ ತಂದೆ ಪಂಜಾಬ್‌ನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪನ್ನುವಿಗೆ ಮತ್ತೊಬ್ಬ ಸಹೋದರನಿದ್ದಾನೆ. ಆದರೆ ಪಾಲಕರು ತೀರಿಕೊಂಡಿದ್ದಾರೆ.
ಪನ್ನು ಚಂಡೀಗಢ ಮೂಲದ ಪಂಜಾಬ್ ವಿಶ್ವವಿದ್ಯಾಲಯದಿಂದ ತೆರಿಗೆ ಕಾನೂನು ಅಧ್ಯಯನ ಮಾಡಿದರು. ಬಳಿಕ ಭಾರತ ತೊರೆದಿದ್ದಾನೆ. ಇದೀಗ ಅಮೆರಿಕದಲ್ಲಿ ವಕೀಲರಾಗಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಹೊರಬೀಳುತ್ತಿದೆ. 2007 ರಲ್ಲಿ, ಪನ್ನು ಅವರು 'ಸಿಖ್ಸ್ ಫಾರ್ ಜಸ್ಟಿಸ್' ಎಂಬ ಸಂಘಟನೆಯನ್ನು ಸ್ಥಾಪಿಸಿದ. ಜುಲೈ 2020 ರಲ್ಲಿ ಭಾರತವು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿತು. ಐಎಸ್‌ಐ ನೆರವಿನೊಂದಿಗೆ ಖಲಿಸ್ತಾನ್ ಅಪಪ್ರಚಾರ ನಡೆಸುತ್ತಿದೆ ಎಂದು ಭಾರತದ ಈ ನಡೆ ಆರೋಪಿಸಿದೆ.
ಖಲಿಸ್ತಾನ ಜೊತೆಗೆ ಉರ್ದುಸ್ತಾನ ಕನಸು:
ಪನ್ನುವಿನ ಆಸೆ ಭಾರತದಿಂದ ಬೇರ್ಪಟ್ಟು ಖಲಿಸ್ತಾನವನ್ನು ರಚಿಸುವುದು ಮಾತ್ರವಲ್ಲ. ಪನ್ನು ಕೂಡ ಉರ್ದುಸ್ತಾನ್ ರಚಿಸಲು ಬಯಸಿದ್ದಾನೆ. ಭಾರತ ಬಿಡುಗಡೆ ಮಾಡಿರುವ ಹೊಸ ದಾಖಲೆಯ ಪ್ರಕಾರ ಪನ್ನು ಭಾರತವನ್ನು ಹಲವು ಭಾಗಗಳಾಗಿ ವಿಭಜಿಸಿ ಹಲವು ದೇಶಗಳನ್ನು ರಚಿಸಲು ಬಯಸಿದ್ದಾನೆ. ಪನ್ನು ಧರ್ಮದ ಆಧಾರದ ಮೇಲೆ ವಿಭಜನೆಯನ್ನು ಸೃಷ್ಟಿಸಲು ಬಯಸಿದ್ದಾನೆ. ಅವನು ಕೂಡ ಇಸ್ಲಾಂ ಧರ್ಮದ ಅನುಯಾಯಿಗಳನ್ನು ಸೆಳೆದು ಮುಸ್ಲಿಂ ದೇಶವನ್ನು ಸೃಷ್ಟಿಸಲು ಪ್ಲಾನ್ ಮಾಡಿದ್ದಾನೆ. ಅದಕ್ಕೆ ‘ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಉರ್ದುಸ್ತಾನ್’ ಎಂದು ಹೆಸರಿಡಲಾಗುವುದು ಎಂದು ಪನ್ನು ಬಹಿರಂಗಗೊಳಿಸಿದ್ದಾನೆ. ಇದಲ್ಲದೇ ಪನ್ನು ಕೂಡ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಪ್ಲಾನ್ ಮಾಡಿದ್ದಾನೆ. ಅದಕ್ಕಾಗಿ ಕಾಶ್ಮೀರದ ಜನರನ್ನು ಪ್ರಚೋದಿಸಲು ಪನ್ನು ಪ್ರಯತ್ನಿಸುತ್ತಿದ್ದಾನೆ.
ಸಿಖ್ಸ್ ಫಾರ್ ಜಸ್ಟಿಸ್ ನ ಮುಖ್ಯಸ್ಥ ಪನ್ನು ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕ. ಅವನ ವಿರುದ್ಧ ದೇಶಾದ್ಯಂತ 16 ಪ್ರಕರಣಗಳು ಬಾಕಿ ಇವೆ. ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಖಲಿಸ್ತಾನಿ ಚಳವಳಿಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಪನ್ನು ವಿರುದ್ಧ ಪಂಜಾಬ್‌ನ ಸಿರ್ಹಿಂದ್‌ನಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಮೃತಸರದಲ್ಲಿ ಯುಎಪಿಎ ಅಡಿಯಲ್ಲಿ ನಾಲ್ಕು ಪ್ರಕರಣಗಳು ಮತ್ತು ದೆಹಲಿಯಲ್ಲಿ ಯುಎಪಿಎ ಅಡಿಯಲ್ಲಿ ಹಲವು ಪ್ರಕರಣಗಳಿವೆ. ಗುರುಗ್ರಾಮದಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣವೂ ಇದೆ. ಯುಎಪಿಎ ಅಡಿಯಲ್ಲಿ ಎನ್ಐಎ ಪ್ರಕರಣ ಮತ್ತು ಯುಎಪಿಎ ಅಡಿಯಲ್ಲಿ ಧರ್ಮಶಾಲಾ ಪ್ರಕರಣದಂತಹ ಪ್ರಕರಣಗಳ ವಿವರಗಳನ್ನು ವಿಸ್ತರಿಸಲಾಗುತ್ತಿದೆ.
ಕೆನಡಾ ಈಗ ಉಗ್ರರ ಪಾಲಿನ ಹೊಸ ಸ್ವರ್ಗ..ಖಲಿಸ್ತಾನಿ ಉಗ್ರರಿಗೆ ಮೇವು ಹಾಕೋದೇಕೆ ಟ್ರುಡೊ?
ಈ ರೀತಿಯಾಗಿ ಒಟ್ಟು ಒಂಬತ್ತು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ, ಅಂದರೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ. ಇಂಡಿಯಾ ಗೇಟ್‌ನಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸಿದವರಿಗೆ 2.5 ಮಿಲಿಯನ್ ಯುಎಸ್ ಡಾಲರ್ ನೀಡುವುದಾಗಿ ಪನ್ನು ಘೋಷಿಸಿದ್ದ. ಆಗಸ್ಟ್ 15, 2021 ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ತಡೆಯುವ ಪೊಲೀಸರಿಗೆ ಒಂದು ಮಿಲಿಯನ್ ಯುಎಸ್ ಡಾಲರ್ ಪಾವತಿಸುವುದಾಗಿ ಹೇಳಿದ್ದ ಪನ್ನು ಇದಲ್ಲದೆ, ಭಾರತದ ಏಕತೆ ಮತ್ತು ಸಮಗ್ರತೆ ವಿರುದ್ಧ ಹಲವಾರು ಬಾರಿ ಆಡಿಯೋ ಧ್ವನಿ ಸಂದೇಶಗಳ ಮೂಲಕ ಸವಾಲು ಹಾಕಿರುವ ಖಲಿಸ್ತಾನ ಉಗ್ರ ಪನ್ನು.
ಪನ್ನು ತನ್ನ ಸಹಾಯಕರ ಮೂಲಕ ಪಂಜಾಬ್, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಹರಿಯಾಣದಲ್ಲಿ ಖಲಿಸ್ತಾನಿ ಪೋಸ್ಟರ್ ಮತ್ತು ಧ್ವಜಗಳನ್ನು ಹಾಕಲು ಹಲವಾರು ಬಾರಿ ಪ್ರಯತ್ನಿಸಿದ್ದಾನೆ.