ಮಹಾ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್‌: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ 2 ಪ್ರಮುಖ ಅಚ್ಚರಿಗಳು ನಡೆಯಲಿವೆ ಎಂದು ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಹೇಳಿಕೆ ನೀಡಿದ್ರು. ಆ ಬೆನ್ನಲ್ಲೇ ಶರದ್‌ ಪವಾರ್‌ ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

sharad pawar says he has decided to step down as ncp president ash

ಮುಂಬೈ (ಮೇ 2, 2023): ಮಹಾರಾಷ್ಟ್ರ ರಾಜಕೀಯದಲ್ಲಿ ಇತ್ತೀಚಿನ ಕೆಲ ದಿನಗಳಿಂದ ನಾನಾ ತಿರುವುಗಳು ಕಾಣಿಸಕೊಳ್ಳುತ್ತಿದೆ. ಅಜಿತ್ ಪವಾರ್‌ ಎನ್‌ಸಿಪಿ ತೊರೆದು ಬಿಜೆಪಿಗೆ ಹೋಗ್ತಾರೆ, ಹಾಗೇ ಅವರ ಜತೆಗೆ ಅನೇಕ ಶಾಸಕರನ್ನೂ ಕರೆದೊಯ್ತಾರೆ ಎಂಬ ನಾನಾ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಅದೆಲ್ಲ ಕೇವಲ ಊಹಾಪೋಹ ಎಂದು ಅಜಿತ್ ಪವಾರ್‌ ಹಾಗೂ ಶರದ್‌ ಪವಾರ್‌ ಹೇಳಿದ್ದರು. ಆದರೀಗ, ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ ನೀಡಿದ್ದಾರೆ.

ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ 2 ಪ್ರಮುಖ ಅಚ್ಚರಿಗಳು ನಡೆಯಲಿವೆ ಎಂದು ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಏಪ್ರಿಲ್‌ ತಿಂಗಳಲ್ಲಿ ಹೇಳಿಕೆ ನೀಡಿದ್ರು. ಅವರು ಆ ರೀತಿ ಹೇಳಿದ ಕೆಲ ದಿನಗಳಲ್ಲೇ ಶರದ್‌ ಪವಾರ್‌ ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಇದರಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೇನು ಬೆಳವಣಿಗೆಳು ನಡೆಯಲಿವೆ ಎಂಬುದು ಕುತೂಹಲ ಕೆರಳಿಸಿದೆ.  

ಇದನ್ನು ಓದಿ: ಬೆಳಗ್ಗೆ ಬೆಳಗ್ಗೆಯೇ ಮತ್ತಿನಲ್ಲಿ ಮಾತಾಡ್ತಾರೆ: ಸಂಜಯ್‌ ರಾವತ್‌ಗೆ ದೇವೇಂದ್ರ ಫಡ್ನವೀಸ್‌ ತಿರುಗೇಟು

ಶರದ್‌ ಪವಾರ್‌ ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ರಾಜಕೀಯದಿಂದ ನಿವೃತ್ತನಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಅವರು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದಲ್ಲಿ ನಡೆಯುತ್ತಿದೆ ಎನ್ನಲಾದ ಅನೇಕ ಬೆಳವಣಿಗೆಗಳ ನಡುವೆ ಅವರು ರಾಜೀನಾಮೆ ನೀಡುತ್ತಿರುವುದು ಅಚ್ಚರಿ ಎನಿಸಿದೆ.

ಅಲ್ಲದೆ, ಅಜಿತ್ ಪವಾರ್ ಅವರು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರು ಮತ್ತು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲು ಪ್ರಮುಖ ಪಾತ್ರ ವಹಿಸಿದ್ದರು. ಶಿವಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವಿನ ಅಸಂಭವ ಮೈತ್ರಿಯನ್ನು ಒಟ್ಟಿಗೆ ಸೇರಿಸುವಲ್ಲಿ ದೊಡ್ಡ ಪಾತ್ರ ಹೊಂದಿದ್ದಾರೆ. ಈ ಮಧ್ಯೆ, ಶರದ್‌ ಪವಾರ್‌ ನಂತರ ಎನ್‌ಸಿಪಿಯ ಪಕ್ಷದ ಮುಖ್ಯಸ್ಥರು ಯಾರು ಎಂಬ ಬಗ್ಗೆ ಇನ್ನೂ ಯಾವುದೇ ಘೋಷಣೆಯಾಗಿಲ್ಲ.

ಇದನ್ನೂ ಓದಿ: ‘ಮಹಾ’ ಬಿಜೆಪಿಗೆ ಅಜಿತ್ ಪವಾರ್‌ ಹಾಗೂ 40 ಶಾಸಕರ ಬೆಂಬಲ? ಎನ್‌ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..

ನಾಲ್ಕು ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಶರದ್‌ ಪವಾರ್‌, ಮುಂಬೈನಲ್ಲಿ ನಡೆದ ತಮ್ಮ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸೋದರಳಿಯ ಅಜಿತ್ ಪವಾರ್ ಅವರು ಪಕ್ಕದಲ್ಲಿದ್ದಾಗಲೇ ಈ ಆಶ್ಚರ್ಯಕರ ಘೋಷಣೆ ಮಾಡಿದ್ದಾರೆ. ಅವರ ನಿರ್ಧಾರವನ್ನು ಕೇಳಿ ಎನ್‌ಸಿಪಿ ಕಾರ್ಯಕರ್ತರು ಮತ್ತು ಮುಖಂಡರು ಅಚ್ಚರಿ ಹಾಗೂ ವಿರೋಧ ವ್ಯಕ್ತಪಡಿಸಿದರು. ಹಲವರು ಕಣ್ಣೀರನ್ನೂ ಹಾಕಿದ್ದಾರೆ. ಇನ್ನು, ಮುಂದಿನ ಕ್ರಮವನ್ನು ರೂಪಿಸಲು ಪಕ್ಷದ ಹಿರಿಯ ನಾಯಕರ ಸಮಿತಿಯನ್ನು ಶರದ್‌ ಪವಾರ್‌ ಘೋಷಿಸಿದರು.
"ಕಳೆದ ಆರು ದಶಕಗಳಲ್ಲಿ ಮಹಾರಾಷ್ಟ್ರ ಮತ್ತು ನೀವೆಲ್ಲರೂ ನನಗೆ ಬಲವಾದ ಬೆಂಬಲ ಮತ್ತು ಪ್ರೀತಿಯನ್ನು ನೀಡಿದ್ದನ್ನು ನಾನು ಮರೆಯಲು ಸಾಧ್ಯವಿಲ್ಲ. ಹೊಸ ಪೀಳಿಗೆಯು ಪಕ್ಷವನ್ನು ಮತ್ತು ಅದು ತೆಗೆದುಕೊಳ್ಳಲು ಉದ್ದೇಶಿಸಿರುವ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುವ ಸಮಯವಾಗಿದೆ. ನಾನು NCP ಸದಸ್ಯರ ಸಮಿತಿಯನ್ನು ಶಿಫಾರಸು ಮಾಡುತ್ತಿದ್ದೇನೆ. ತೆರವಾಗಿರುವ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ನಿರ್ಧರಿಸಲು ರಚಿಸಬೇಕು’’ ಎಂದು ಶರದ್‌ ಪವಾರ್ ಮರಾಠಿಯಲ್ಲಿ ತಮ್ಮ ಭಾಷಣದಲ್ಲಿ ಹೇಳಿದರು.

ಈ ಮಧ್ಯೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶರದ್ ಪವಾರ್ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳದ ಹೊರತು ಆ ಸ್ಥಳದಿಂದ ಹೊರಬರುವುದಿಲ್ಲ ಎಂದು ಬೆದರಿಕೆ ಹಾಕಿದರು. ಇನ್ನು, ಎನ್‌ಸಿಪಿಯ ಉನ್ನತ ನಾಯಕ ಮತ್ತು ರಾಜ್ಯಸಭೆಯ ಪ್ರಫುಲ್ ಪಟೇಲ್ ಅವರು ತಮ್ಮ ರಾಜೀನಾಮೆಯನ್ನು ಘೋಷಿಸುವ ಮೊದಲು ಶರದ್ ಪವಾರ್ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಅದಾನಿಗೆ ಚೀನಾ ನಂಟು; ಆದರೂ ಬಂದರು ನಿರ್ವಹಣೆಗೆ ಅವಕಾಶ: ಕಾಂಗ್ರೆಸ್‌ ಆಕ್ರೋಶ

ಶರದ್‌ ಪವಾರ್ ಅವರ ಸೋದರಳಿಯ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಹತ್ತಿರವಾಗುತ್ತಿರುವ ನಡುವೆಯೇ ಅವರ ಈ ದೊಡ್ಡ ನಡೆ ಕುತೂಹಲ ಮೂಡಿಸಿದೆ. ಇನ್ನು, ಶರದ್ ಪವಾರ್ ಅವರ ಈ ಹಠಾತ್ ನಡೆ, ಅಜಿತ್ ಪವಾರ್ ನಿಜಕ್ಕೂ ಬಿಜೆಪಿಯೊಂದಿಗೆ ಹೋಗಬಹುದು ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ ಮತ್ತು ಉನ್ನತ ಮುಖ್ಯಸ್ಥರು ಅವರ ರಾಜೀನಾಮೆಯೊಂದಿಗೆ ಈಗ ಅದನ್ನು ಮಾಡಲು ಸುಲಭಗೊಳಿಸಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ. 

ಇದನ್ನೂ ಓದಿ: ಅದಾನಿ ಬೆಂಬಲಕ್ಕೆ ಪವಾರ್‌: ಹಿಂಡನ್‌ಬರ್ಗ್‌ ವರದಿಗೆ ಎನ್‌ಸಿಪಿ ನಾಯಕ ಕಿಡಿ

Latest Videos
Follow Us:
Download App:
  • android
  • ios