ಅದಾನಿ ಬೆಂಬಲಕ್ಕೆ ಪವಾರ್: ಹಿಂಡನ್‌ಬರ್ಗ್ ವರದಿಗೆ ಎನ್‌ಸಿಪಿ ನಾಯಕ ಕಿಡಿ
ಹಿಂಡನ್‌ಬರ್ಗ್ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ. ಈಗ ಅವರು ಗೌತಮ್ ಅದಾನಿ ಬಗ್ಗೆ ವರದಿ ನೀಡಿದ್ದಾರೆ. ಆ ಕಂಪನಿಯ ಹಿನ್ನೆಲೆ ಮುನ್ನೆಲೆ ಏನು? ಅವರು ನೀಡಿದ ವರದಿಗೆ ದೇಶದ ಆರ್ಥಿಕತೆಯೇ ತಲ್ಲಣಗೊಂಡಿದೆ. ಹೀಗಾಗಿ ಇದೊಂದು ಬೇಕೆಂದೇ ನೀಡಿದ ಉದ್ದೇಶಿತ ವರದಿಯಂತಿದೆ’ ಎಂದು ಹೇಳಿದರು. ಈ ಮೂಲಕ ಗೌತಮ್ ಅದಾನಿಯನ್ನು ಬೆಂಬಲಿಸಿದರು.
ನವದೆಹಲಿ (ಏಪ್ರಿಲ್ 8, 2023): ಉದ್ಯಮಿ ಗೌತಮ್ ಅದಾನಿ ಔದ್ಯಮಿಕ ಅಕ್ರಮ ಎಸಗಿದ್ದಾರೆ ಎಂಬ ಅಮೆರಿಕ ಮೂಲದ ಹಿಂಡನ್‌ಬರ್ಗ್ ಕಂಪನಿ ನೀಡಿದ ವರದಿಯು ದೇಶದಲ್ಲಿ ರಾಜಕೀಯ ಹಾಗೂ ವ್ಯಾಪಾರ ತಲ್ಲಣ ಸೃಷ್ಟಿಸಿದ ನಡುವೆಯೇ, ಗೌತಮ್ ಅದಾನಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್ ನಿಲುವಿಗೆ ವಿರುದ್ಧವಾಗಿ ಅದರ ಮಿತ್ರಪಕ್ಷ ಎನ್‌ಸಿಪಿ ನಾಯಕ ಶರದ್ ಪವಾರ್ ಮಾತನಾಡಿದ್ದಾರೆ. ‘ಹಿಂಡನ್‌ಬರ್ಗ್ ವರದಿ ‘ಉದ್ದೇಶಿತ ವರದಿ’ಯಂತಿದೆ’ ಎಂದು ಹೇಳಿದ್ದಾರೆ.
ಶುಕ್ರವಾರ ಎನ್‌ಡಿಟಿವಿಗೆ ಸಂದರ್ಶನ ನೀಡಿದ ಅಜಿತ್ ಪವಾರ್ (Ajit Pawar) , ‘ಹಿಂಡನ್‌ಬರ್ಗ್ (Hindenburg) ಬಗ್ಗೆ ನಮಗೆ ಗೊತ್ತೇ ಇರಲಿಲ್ಲ. ಈಗ ಅವರು (ಹಿಂಡನ್‌ಬರ್ಗ್) ಗೌತಮ್ ಅದಾನಿ (Gautam Adani) ಬಗ್ಗೆ ವರದಿ ನೀಡಿದ್ದಾರೆ. ಆ ಕಂಪನಿಯ ಹಿನ್ನೆಲೆ ಮುನ್ನೆಲೆ ಏನು? ಅವರು ನೀಡಿದ ವರದಿಗೆ ದೇಶದ ಆರ್ಥಿಕತೆಯೇ (Country Economy) ತಲ್ಲಣಗೊಂಡಿದೆ. ಹೀಗಾಗಿ ಇದೊಂದು ಬೇಕೆಂದೇ ನೀಡಿದ ಉದ್ದೇಶಿತ ವರದಿಯಂತಿದೆ’ ಎಂದು ಹೇಳಿದರು. ಈ ಮೂಲಕ ಗೌತಮ್ ಅದಾನಿಯನ್ನು ಬೆಂಬಲಿಸಿದರು.
ಇದನ್ನು ಓದಿ: ಭ್ರಷ್ಟರೆಲ್ಲ ಇಂದು ಒಂದೇ ವೇದಿಕೆಗೆ: ವಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಹಾರ; ಕರ್ನಾಟಕದಲ್ಲಿ ಬಿಜೆಪಿ ನಂ. 1 ಎಂದ ಮೋದಿ
ಇದಲ್ಲದೆ, ‘ಅದಾನಿ ಹಗರಣದ ಬಗ್ಗೆ ಜಂಟಿ ಸದನ ಸಮಿತಿ (Joint Parliamentary Committee) (ಜೆಪಿಸಿ) (JPC) ತನಿಖೆಗೆ ಕಾಂಗ್ರೆಸ್ ಆಗ್ರಹಿಸುತ್ತಿದೆ. ಆದರೆ ಜೆಪಿಸಿಗೆ ಬಿಜೆಪಿ (BJP) ಸಂಸದರೇ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಅವರು ನಿಷ್ಪಕ್ಷ ತನಿಖಾ ವರದಿ ನೀಡುತ್ತಾರೆ ಎನ್ನಲಾಗದು. ಅದರ ಬದಲು ಗೌತಮ್ ಅದಾನಿ ಪ್ರಕರಣ ಕುರಿತಂತೆ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದೆ. ಅಲ್ಲಿ ನಿಷ್ಪಕ್ಷ ತನಿಖೆ ಸಾಧ್ಯ. ಹೀಗಾಗಿ ನಾನು ಜೆಪಿಸಿ ತನಿಖೆ ಬೆಂಬಲಿಸಲ್ಲ’ ಎಂದರು.
ಮೋದಿ ವಿರುದ್ಧ ಒಗ್ಗಟ್ಟಾಗಲು ಖರ್ಗೆ ‘ವಿಪಕ್ಷ ಸಭೆ’
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವ ಗುರಿಯನ್ನು ಹೊಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾನಮನಸ್ಕ ವಿಪಕ್ಷಗಳ ನಾಯಕರ ಸಭೆ ಕರೆಯಲು ತೀರ್ಮಾನಿಸಿದ್ದಾರೆ. ಈ ಸಭೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ರಾಹುಲ್ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್ ಸಂಸದರು
ಆದರೆ ಈ ಸಭೆ ಯಾವಾಗ, ಎಲ್ಲಿ ನಡೆಯಲಿದೆ ಎಂಬುದನ್ನು ಇನ್ನೂ ಸಹ ಅಂತಿಮಗೊಳಿಸಿಲ್ಲ. ಆದರೆ, ಈಗಾಗಲೇ ಬಹುತೇಕ ವಿಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾ ದಳ ಮತ್ತು ಎಡಪಕ್ಷಗಳ ಪ್ರತಿಕ್ರಿಯೆಗಾಗಿ ಕಾಂಗ್ರೆಸ್ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಬಜೆಟ್ ಅಧಿವೇಶನದ ಸಮಯದಲ್ಲಿ ವಿಪಕ್ಷಗಳು ತೋರಿದ ಒಗ್ಗಟ್ಟನ್ನು ಮುಂದುವರೆಸಲು ಬಯಸಿರುವ ಕಾಂಗ್ರೆಸ್, ಈ ಒಕ್ಕೂಟವನ್ನು 2024ರ ಚುನಾವಣೆವರೆಗೂ ಮುಂದುವರೆಸಲು ನಿರ್ಧರಿಸಿದೆ. ಅಲ್ಲದೇ ಇತ್ತೀಚೆಗೆ ನಡೆದ ರಾಹುಲ್ ಗಾಂಧಿ ಪ್ರಕರಣವನ್ನು ಬಳಸಿಕೊಂಡು ವಿಪಕ್ಷಗಳನ್ನು ಒಂದುಗೂಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅದಾನಿ ಗೆಳೆತನದ ವಿದೇಶಿ ಕಂಪನಿಗೆ ರಕ್ಷಣಾ ಗುತ್ತಿಗೆ? ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ ಎಂದು ವಿಪಕ್ಷ ಹೊಸ ಆರೋಪ