Asianet Suvarna News Asianet Suvarna News

ನ್ಯಾಯಾಧೀಶೆಗೇ ಲೈಂಗಿಕ ಕಿರುಕುಳ : ಈಗಿಂದೀಗಲೇ ವರದಿ ನೀಡುವಂತೆ ಕೇಳಿದ ಸುಪ್ರೀಂ ಮುಖ್ಯ ನ್ಯಾಯಾಧೀಶರು

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್‌ಗೆ ಬಹಿರಂಗ ಪತ್ರ ಬರೆದಿರುವ ಮಹಿಳಾ ಜಡ್ಜ್‌ವೊಬ್ಬರು  ತನಗೆ ಜಿಲ್ಲಾ ನ್ಯಾಯಾಧೀಶರು ಹಾಗೂ ಅವರ ಸಹಚರರಿಂದ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.  

Sexual Harassment to Judge Female Judiciary officer wrote Letter to Supreme chief Judge  Chandrachud asked report Right now akb
Author
First Published Dec 15, 2023, 11:54 AM IST | Last Updated Dec 15, 2023, 12:13 PM IST

ನವದೆಹಲಿ: ಜನ ಸಾಮಾನ್ಯ ಮಹಿಳೆಯರು ಪ್ರತಿದಿನ ಒಂದಿಲ್ಲೊಂದು ಲೈಂಗಿಕ ದೌರ್ಜನ್ಯಗಳಿಗೆ ಬಲಿಯಾಗುವ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಉನ್ನತ ಸ್ಥಾನದಲ್ಲಿರುವ ಸುಶಿಕ್ಷಿತ, ಅಬಲೆಯಲ್ಲ ಸಬಲೆ ಎನಿಸಿರುವ, ನ್ಯಾಯ ನೀಡುವ ಸ್ಥಾನದಲ್ಲಿರುವ ಮಹಿಳಾ ನ್ಯಾಯಾಧೀಶರೇ ತಮಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ತನಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶದ ಬರಬಂಕಿಯಲ್ಲಿ ಮಹಿಳಾ ನ್ಯಾಯಾಧೀಶರೇ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿರುವ ಆಘಾತಕಾರಿ ಘಟನೆ ನಡೆದಿದೆ. ಈ ಲೈಂಗಿಕ ಕಿರುಕುಳ ಘಟನೆ ನಿಜವೇ ಆಗಿದ್ದಲ್ಲಿ ಜನಸಾಮಾನ್ಯರ ಕತೆಯೇನೋ ಎಂಬ ಪ್ರಶ್ನೆ ಮೂಡುತ್ತಿದೆ. 

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್‌ಗೆ ಬಹಿರಂಗ ಪತ್ರ ಬರೆದಿರುವ ಮಹಿಳಾ ಜಡ್ಜ್‌ವೊಬ್ಬರು  ತನಗೆ ಜಿಲ್ಲಾ ನ್ಯಾಯಾಧೀಶರು ಹಾಗೂ ಅವರ ಸಹಚರರಿಂದ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.  ನನ್ನ ಜೀವನವನ್ನು ಗೌರವಯುತವಾಗಿ ಕೊನೆಗೊಳಿಸಲು ಅವಕಾಶ ನೀಡಿ. ನನ್ನ ಜೀವನವನ್ನು ಅಂತ್ಯಗೊಳಿಸಲು ಬಿಡಿ ಎಂದು ಉತ್ತರಪ್ರದೇಶದ ಬರಬಂಕಿಯ ಬಂಡದ ಮಹಿಳಾ ನ್ಯಾಯಾಧೀಶರು ಪತ್ರ ಬರೆದಿದ್ದಾರೆ. 

 ಬೆಳಗಾವಿ ಕೇಸ್ ದ್ರೌಪದಿ ವಸ್ತ್ರಾಪಹರಣಕ್ಕಿಂತಲೂ ಕ್ರೂರ: ಹೈಕೋರ್ಟ್ 

ನನಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ನನ್ನನ್ನು ಸಂಪೂರ್ಣ ಕಸದಂತೆ ನಡೆಸಿಕೊಳ್ಳಲಾಗಿದೆ. ಇವರ ಕಿರುಕುಳದಿಂದ ನನಗೆ ನಾನೊಂದು ಬೇಡದ ಕೀಟ ಎಂಬಂತೆ ಭಾಸವಾಗುತ್ತಿದೆ ಎಂದು ಅವರು ತಮ್ಮ ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ. ಇವರ ಈ ಬಹಿರಂಗ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. 

ಈ ಪತ್ರದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರು ಸುಪ್ರೀಂಕೋರ್ಟ್‌ನ ಸೆಕ್ರಿಟರಿ ಜನರಲ್ ಆಗಿರುವ ಅತುಲ್ ಎಂ ಕುರ್ಹೆಕರ್ ಅವರಿಗೆ ಈ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು ವರದಿ ನೀಡುವಂತೆ ಇಂದು ಮುಂಜಾನೆಯೊಳಗೆ ಮಹಿಳಾ ಜಡ್ಜ್ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಕೇಳಿದ್ದಾರೆ. 

ನಂಗೆ ಮುಜುಗರ ಮಾಡ್ಬೇಡ ಎಂದಿದ್ಲು ಮಗಳು: ಮಲಯಾಳಂ ನಟ ದಿಲೀಪ್

ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಈ ವಿಚಾರವಾಗಿ ನಿನ್ನೆ ರಾತ್ರಿಯೇ ಫೋನ್ ಮೂಲಕ ಮಾಹಿತಿ ನೀಡಲಾಗಿದ್ದು,  ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೂ  ಈ ಬಹಿರಂಗ ಪತ್ರದ ಬಗ್ಗೆ ಗಮನಕ್ಕೆ ತರಲಾಗಿದೆ.  ಇನ್ನು ಮಹಿಳಾ ಜಡ್ಜ್‌ ತಮ್ಮ ಪತ್ರದಲ್ಲಿ  ಜುಲೈ 2023ರಲ್ಲೇ ಹೈಕೋರ್ಟ್‌ನ ಆಂತರಿಕ ದೂರುಗಳ ಸಮಿತಿಗೆ ದೂರು ಸಲ್ಲಿಸಿದ ನಂತರ ತನ್ನ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದೂ ಮಾಹಿತಿ ನೀಡಿದ್ದು, ಆ ವಿಚಾರಣೆ ಬರೀ ನಾಟಕ ಎಂದು ದೂರಿದ್ದಾರೆ. 

ತನಿಖೆಯಲ್ಲಿರುವ ಸಾಕ್ಷಿಗಳು ಜಿಲ್ಲಾ ನ್ಯಾಯಾಧೀಶರ ತಕ್ಷಣದ ಅಧೀನದವರಾಗಿದ್ದಾರೆ. ಹೀಗಿರುವಾಗ ಈ ಸಾಕ್ಷಿಗಳು ತಮ್ಮ ಬಾಸ್ ವಿರುದ್ಧ ಆರೋಪ ಮಾಡಬಹುದು ಎಂದು  ಹೇಗೆ ನಿರೀಕ್ಷಿಸಲಾಗುತ್ತದೆ ಎಂಬುದು ನನ್ನ ತಿಳುವಳಿಕೆಗೆ ಮೀರಿದೆ ಎಂದು ಅವರು ಬರೆದುಕೊಂಡಿದ್ದಾರೆ. ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ವಿಚಾರಣೆಯ ಬಾಕಿ ಇರುವ ಈ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವಂತೆ ನಾನು ವಿನಂತಿಸಿದ್ದೇನೆ ಆದರೆ ಸುಪ್ರೀಂ ಕೋರ್ಟ್ ತನ್ನ ಅರ್ಜಿಯನ್ನು ಕೇವಲ ಎಂಟು ಸೆಕೆಂಡುಗಳಲ್ಲಿ ವಜಾಗೊಳಿಸಿದೆ ಎಂದು ಅವರು ಹೇಳಿದ್ದಾರೆ. 

ಹೀಗಾಗಿ ಇನ್ನು ನನಗೆ  ಬದುಕುವ ಆಸೆ ಇಲ್ಲ. ಕಳೆದ ಒಂದೂವರೆ ವರ್ಷದಲ್ಲಿ ನಾನು ನಡೆದಾಡುವ ಶವದಂತಾಗಿದ್ದೇನೆ ಇನ್ನು ಮುಂದೆ ಈ ನಿರ್ಜೀವ ಮತ್ತು ನಿರ್ಜೀವ ದೇಹವನ್ನು ಹೊತ್ತುಕೊಂಡು ಹೋಗುವುದರಲ್ಲಿ ಯಾವುದೇ ಉದ್ದೇಶವಿಲ್ಲ. ನನ್ನ ಜೀವನದಲ್ಲಿ ಯಾವುದೇ ಉದ್ದೇಶವಿಲ್ಲ  ಎಂದು ಅವರು ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿ ಸಾಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios