Asianet Suvarna News Asianet Suvarna News

ನಂಗೆ ಮುಜುಗರ ಮಾಡ್ಬೇಡ ಎಂದಿದ್ಲು ಮಗಳು: ಮಲಯಾಳಂ ನಟ ದಿಲೀಪ್

1992ರ ಸಮಯದಿಂದಲೂ ಮಲೆಯಾಳಂ ಸಿನಿಮಾ ರಂಗದಲ್ಲಿ ತನ್ನದೇ ಚಾಪು ಮೂಡಿಸಿದ್ದ  ನಟ ದಿಲೀಪ್ ಕನ್ನಡ ನಟಿಯೊಬ್ಬರನ್ನು ಕಿಡ್ನಾಪ್ ಮಾಡಿ ಲೈಂಗಿಕ ಕಿರುಕುಳದ ಆರೋಪ ಎದುರಿಸಿ, ನಂತರ ಇದೇ ಕಾರಣಕ್ಕೆ ಜೈಲಿಗೂ ಹೋಗಿ ಬಂದವರು.

Malayalam Actor Dilip kumar reveals about his daughter statement on his Dancing with Actress Tamannaah Bhatia skill akb
Author
First Published Dec 12, 2023, 12:48 PM IST

ಮಲೆಯಾಳಂ ನಟ ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಸಿನಿಮಾ ನಟನೆಗಿಂತಲೂ ಹೆಚ್ಚಾಗಿ ಬೇರೆಯದೇ ವಿವಾದದ ಕಾರಣಕ್ಕೆ ಸುದ್ದಿಯಾದವರು. 1992ರ ಸಮಯದಿಂದಲೂ ಮಲೆಯಾಳಂ ಸಿನಿಮಾ ರಂಗದಲ್ಲಿ ತನ್ನದೇ ಚಾಪು ಮೂಡಿಸಿದ್ದ ಈ ನಟ ಕನ್ನಡ ನಟಿಯೊಬ್ಬರನ್ನು ಕಿಡ್ನಾಪ್ ಮಾಡಿ ಲೈಂಗಿಕ ಕಿರುಕುಳದ ಆರೋಪ ಎದುರಿಸಿ, ನಂತರ ಇದೇ ಕಾರಣಕ್ಕೆ ಜೈಲಿಗೂ ಹೋಗಿ ಬಂದಿದ್ದರು. 

ಇದಾದ ನಂತರ ತಮ್ಮನ್ನು ತಾವು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಈ ವರ್ಷದ ಜೂನ್‌ನಲ್ಲಿ ಕೊನೆಯದಾಗಿ ವಾಯ್ಸ್ ಆಫ್ ಸತ್ಯನಾರಾಯಣ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮಲೆಯಾಳಂನ ಆಕ್ಷನ್ ಡ್ರಾಮಾ ಸಿನಿಮಾ ಬಾಂದ್ರದಲ್ಲಿ ನಟಿಸಿದ್ದು, ಆ ಸಿನಿಮಾ ಕೂಡ ಕಳೆದ ನವೆಂಬರ್‌ನಲ್ಲಿ ರಿಲೀಸ್ ಆಗಿತ್ತು. ಮಲೆಯಾಳಂನ ನಿರ್ದೇಶಕ ಅರುಣ್ ಗೋಪಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಇದರಲ್ಲಿ ದಿಲೀಪ್‌ ಕುಮಾರ್‌ಗೆ ಜೊತೆಯಾಗಿ ಮಿಲ್ಕಿಬ್ಯೂಟಿ ತಮನ್ನಾ ಭಟಿಯಾ ನಟಿಸಿದ್ದು, ಇದು ಮಲೆಯಾಳಂನಲ್ಲಿ ತಮನ್ನಾ ಅವರ  ಡೆಬ್ಯೂಟ್ ಸಿನಿಮಾವಾಗಿದೆ. 

ನಟಿ ಭಾವನಾ ಮೆನನ್‌ರಿಂದ ಕಲಿಯಬೇಕಾದ ಜೀವನ ಪಾಠಗಳಿದು!

ಈ ಸಿನಿಮಾದ ವೇಳೆ ಮಲೆಯಾಳಂ ನಟ ದಿಲೀಪ್ ಕುಮಾರ್ ತನ್ನ ಮಗಳ ಬಗ್ಗೆ ಮಾತನಾಡಿದ್ದು ಈ ವೀಡಿಯೋ ಈಗ ವೈರಲ್ ಆಗಿದೆ. ಬಂದ್ರಾ ಸಿನಿಮಾದ ಆಡಿಯೋ ಲಾಂಚ್ ವೇಳೆ ಮಾತನಾಡಿದ್ದ ನಟ ದಿಲೀಪ್ ಕುಮಾರ್, ತಾನು ಈ ಸಿನಿಮಾದಲ್ಲಿ ನಟಿ ತಮನ್ನಾ ಜೊತೆ ಡಾನ್ಸ್ ಮಾಡುವ ದೃಶ್ಯವಿದೆ ಎಂದು ಮಗಳೊಂದಿಗೆ ಹೇಳಿದೆ. ಹೀಗೆ ಹೇಳಿದಾಗ ಮಗಳು ಮೀನಾಕ್ಷಿ ದಿಲೀಪ್ ತಮನ್ನಾ ಜೊತೆ ನೀನು ಡಾನ್ಸ್ ಮಾಡಿ ನನಗೆ ಮುಜುಗರ ಮಾಡಬೇಡ ಎಂದು ಹೇಳಿದಳು ಎಂದು ನಟ ದಿಲೀಪ್ ಹೇಳಿದ್ದಾರೆ. 

ಏಕೆ ಎಂದು ನಾನು ಕೇಳಿದಾಗ ತಮನ್ನಾ ಓರ್ವ ಕ್ಲಾಸಿ ಡಾನ್ಸರ್‌ ಆಕೆ ಹೇಗೆ ಬೇಕಾದರೂ ಡಾನ್ಸ್ ಮಾಡುತ್ತಾರೆ. ಆಕೆಯೊಂದಿಗೆ ನಿನ್ನ ಡಾನ್ಸ್ ನೋಡಲಾಗದು ಎಂದು ಹೇಳಿದ್ದಳು ಎಂದು ನಟ ದಿಲೀಪ್ ಹೇಳಿದ್ದು, ದಿಲೀಪ್ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕಿದ್ದಾರೆ. ಇದೇ ವಿಚಾರವನ್ನು ತಮನ್ನಾಗೆ ಹೇಳಿದಾಗ ನನಗೂ ಡಾನ್ಸ್ ಹೇಗೆ ಮಾಡೋದೆಂದು ಗೊತ್ತಿಲ್ಲ ಎಂದು ತಮನ್ನಾ ಹೇಳಿದರು ಎಂದು ದಿಲೀಪ್ ಹೇಳಿದ್ದಾರೆ.

ಪಿಂಕ್ ಸ್ಯಾರಿಯಲ್ಲಿ ಮಲಯಾಳಂ ನಟಿ ಮಂಜು ವಾರಿಯರ್, ವಯಸ್ಸು ಕಡಿಮೆಯಾಗ್ತಾ ಹೋಗ್ತಿದೆ ಎಂದ ಫ್ಯಾನ್ಸ್‌

ಅಂದಹಾಗೆ ದಿಲೀಪ್ ಹಾಗೂ ತಮನ್ನಾ ನಟನೆಯ ಬಾಂದ್ರಾ ಸಿನಿಮಾಗೆ ವೀಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ನಟ ದಿಲೀಪ್ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ದಿಲೀಪ್ ಮಲೆಯಾಳಂ ನಟಿ ಮಂಜು ವಾರಿಯರ್ ಅವರನ್ನು 1998ರಲ್ಲಿ ಮದುವೆಯಾಗಿದ್ದು , 2016ರಲ್ಲಿ ಈ ಜೋಡಿ ವಿಚ್ಛೇದನ  ಪಡೆದಿದ್ದಾರೆ. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಂತರ ಮಲೆಯಾಳಂನ ಮತ್ತೊರ್ವ ಖ್ಯಾತ ನಟಿ ಕಾವ್ಯ ಮಾಧವನ್ ಅವರನ್ನು 2016ರಲ್ಲಿ ದಿಲೀಪ್ ಮದುವೆಯಾದರು.

ಮೊದಲ ಪುತ್ರಿ ಮಹಾಲಕ್ಷ್ಮಿ ದಿಲೀಪ್, ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ್ದು, ಚೆನ್ನೈನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. 

Follow Us:
Download App:
  • android
  • ios