Asianet Suvarna News Asianet Suvarna News

ಶಾಲಾ, ಕಾಲೇಜು ಪಠ್ಯಕ್ರಮದಲ್ಲಿ ಸೆಕ್ಸ್‌ ಎಜುಕೇಶನ್‌, ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಒತ್ತಾಯ

ಪೋಷಕರಿಗೆ ಮುಜುಗರವನ್ನು ತಪ್ಪಿಸಲು ಸುರಕ್ಷಿತ ಲೈಂಗಿಕ ಶಿಕ್ಷಣವು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಾಲಯವು ಹೇಳಿದೆ. ತನ್ನ ಸ್ವಂತ ಸಹೋದರನಿಂದ ಗರ್ಭಧರಿಸಿದ ತನ್ನ ಅಪ್ರಾಪ್ತ ಮಗಳ ಗರ್ಭವನ್ನು ವೈದ್ಯಕೀಯವಾಗಿ ಅಂತ್ಯಗೊಳಿಸುವಂತೆ ತಂದೆಯ ಮನವಿಯ ವಿಚಾರಣೆಯ ವೇಳೆ ಈ ಅಭಿಪ್ರಾಯ ತಿಳಿಸಿದೆ.

sex education in curriculum of schools and colleges Kerala High Court urges State san
Author
First Published Jun 26, 2023, 4:40 PM IST

ತಿರುವನಂತಪುರಂ (ಜೂ.26): ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಸುರಕ್ಷಿತ ಲೈಂಗಿಕ ಶಿಕ್ಷಣವನ್ನು ಸೇರಿಸುವ ಅಗತ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ತನ್ನ ಸ್ವಂತ ಸಹೋದರನಿಂದ ಗರ್ಭಿಣಿಯಾಗಿರುವ ತನ್ನ ಅಪ್ರಾಪ್ತ ಮಗಳ ಗರ್ಭವನ್ನು ವೈದ್ಯಕೀಯವಾಗಿ ಅಂತ್ಯಗೊಳಿಸುವಂತೆ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡುವಾಗ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪೋಷಕರಿಗೆ ಈ ರೀತಿಯ ಮುಜುಗರವನ್ನು ತಪ್ಪಿಸಲು ಸುರಕ್ಷಿತ ಲೈಂಗಿಕ ಶಿಕ್ಷಣವು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ತಿಳಿಸಿದ್ದಾರೆ.

"ಯಾರೂ ಪೋಷಕರನ್ನು ದೂಷಿಸಲು ಸಾಧ್ಯವಿಲ್ಲ. ಆದರೆ ಇದಕ್ಕೆ ಒಂದು ಸಮಾಜವಾಗಿರುವ ನಾವೇ ಹೊಣೆಗಾರರು. ತನ್ನ ಮನೆಯವರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸದ ಕುಟುಂಬ ವ್ಯವಸ್ಥೆಯಲ್ಲಿ ಒಡಹುಟ್ಟಿದವರ ಸಂಭೋಗ ಸಂಭವಿಸುವ ಸಾಧ್ಯತೆಗಳಿರುತ್ತದೆ.  ಆದರೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಇದು ಸಂಭವಿಸಬಹುದು. ಶಾಲಾ-ಕಾಲೇಜುಗಳಲ್ಲಿ ಸರಿಯಾದ ‘ಲೈಂಗಿಕ ಶಿಕ್ಷಣ’ದ ಅಗತ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು.  ಸಮಾಜಕ್ಕೆ ಉತ್ತಮ ಕೌಟುಂಬಿಕ ವಾತಾವರಣ ಅಗತ್ಯ. ಇದನ್ನು ಸಾಧಿಸಲು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಇಂತಹ ದುರದೃಷ್ಟಕರ ಸಂಗತಿಯ ಮೇಲೆ ಸರಿ-ತಪ್ಪಿನ ಚರ್ಚೆ ನಡೆಸದೆ ಒಂದಾಗಬೇಕು,’’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.  ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ‘ಸುರಕ್ಷಿತ ಲೈಂಗಿಕ ಶಿಕ್ಷಣ’ವನ್ನು ಸೇರಿಸುವ ವಿಷಯವನ್ನು ಅಧ್ಯಯನ ಮಾಡಲು ಅಗತ್ಯವಿದ್ದಲ್ಲಿ ಸಮಿತಿಯ ರಚನೆಗೆ ನ್ಯಾಯಾಲಯವು ಕರೆ ನೀಡಿದೆ.

"ಮೊದಲೇ ಹೇಳಿದಂತೆ, ಸುರಕ್ಷಿತ ಲೈಂಗಿಕತೆಯ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಇದು ಸಂಭವಿಸಿದೆ. ಅಪ್ರಾಪ್ತ ಮಕ್ಕಳು ‘ಇಂಟರ್ನೆಟ್’ ಮತ್ತು ‘ಗೂಗಲ್ ಸರ್ಚ್’ ಮುಂದೆ ಇದ್ದಾರೆ. ಮಕ್ಕಳಿಗೆ ಯಾವುದೇ ಮಾರ್ಗದರ್ಶನ ಇಲ್ಲ,’’ ಎಂದು ಕೋರ್ಟ್ ಹೈಲೈಟ್ ಮಾಡಿದೆ. ಆದೇಶದ ಪ್ರತಿಯನ್ನು ಅಗತ್ಯ ಕ್ರಮಕ್ಕಾಗಿ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ರವಾನಿಸುವಂತೆಯೂ ಸೂಚಿಸಲಾಗಿದೆ. ಇದಕ್ಕೂ ಮೊದಲು, ಅಪ್ರಾಪ್ತ ಬಾಲಕಿಯ ಏಳು ತಿಂಗಳ ಗರ್ಭಾವಸ್ಥೆಯ ವೈದ್ಯಕೀಯ ಟರ್ಮಿನೇಷನ್‌ಗೆ ನ್ಯಾಯಾಲಯವು ಆರಂಭದಲ್ಲಿ ಅನುಮತಿ ನೀಡಿತ್ತು. ಆದಾಗ್ಯೂ, ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್‌ ಹೈಕೋರ್ಟ್‌

ಬಾಲನ್ಯಾಯ ಕಾಯಿದೆಗೆ ಅನುಗುಣವಾಗಿ ನವಜಾತ ಶಿಶುವಿನ ಪಾಲನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ಮಕ್ಕಳ ಕಲ್ಯಾಣ ಸಮಿತಿಗೆ ಸೂಚಿಸಿತು. ನವಜಾತ ಶಿಶುವನ್ನು ಸಂಸ್ಥೆಗೆ ಒಪ್ಪಿಸಲಾಗಿದೆ ಮತ್ತು ಅಪ್ರಾಪ್ತ ಬಾಲಕಿಯನ್ನು ಆಕೆಯ ಚಿಕ್ಕಪ್ಪನಿಗೆ ಒಪ್ಪಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯು ನ್ಯಾಯಾಲಯಕ್ಕೆ ತಿಳಿಸಿದೆ. ಹೀಗಾಗಿ, ಪ್ರಕರಣದಲ್ಲಿ ಹೆಚ್ಚಿನ ಆದೇಶಗಳ ಅಗತ್ಯವಿಲ್ಲ ಎಂದು ಗಮನಿಸಿದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಕ್ತಾಯ ಮಾಡಿದೆ. ಆದರೆ ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ಸಂಭವಿಸಬಾರದು ಎಂದು ಒತ್ತಿ ಹೇಳಿದರು.

 

ಸಿಸೇರಿಯನ್‌ ಸಮಯದಲ್ಲಿ ಸಾವು, 13 ವರ್ಷಗಳ ಬಳಿಕ ಬೆಂಗಳೂರಿನ ಆಸ್ಪತ್ರೆಗೆ 1.5 ಕೋಟಿ ದಂಡ ವಿಧಿಸಿದ ಕೋರ್ಟ್‌!

ಈ ವಿಚಾರದಲ್ಲಿ ಮತ್ತೆ ಆದೇಶ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಮಕ್ಕಳ ಕಲ್ಯಾಣ ಸಮಿತಿಯು ಕಾನೂನಿನ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನವಜಾತ ಶಿಶುವಿನ ರಕ್ಷಣೆ ರಾಜ್ಯದ ಕರ್ತವ್ಯವಾಗಿದೆ. ಈ ರೀತಿಯ ಕಾರಣಗಳು ಭವಿಷ್ಯದಲ್ಲಿ ನಮ್ಮ ಸಮಾಜದಲ್ಲಿ ಇರುವುದಿಲ್ಲ. ಪೋಷಕರು ಮತ್ತು ಸಂತ್ರಸ್ತ ಬಾಲಕಿಯ ಮುಜುಗರವನ್ನು ಊಹಿಸಲು ಸಾಧ್ಯವಿಲ್ಲ, ”ಎಂದು ನ್ಯಾಯಾಲಯವು ಹೇಳಿದೆ.

Follow Us:
Download App:
  • android
  • ios