ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್ ಹೈಕೋರ್ಟ್
14, 15 ವರ್ಷಕ್ಕೆ ಮದುವೆಯಾಗುವುದು ಹಾಗೂ 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಸಾಮಾನ್ಯವಾಗಿತ್ತು. ನೀವು ಮನುಸ್ಮೃತಿಯನ್ನು ಓದಿಲ್ಲ. ಒಮ್ಮೆ ಓದಿ’ ಎಂದು ಕೋರ್ಟ್ ಹೇಳಿದೆ.
ಅಹಮದಾಬಾದ್ (ಜೂನ್ 10, 2023): ‘ಹಿಂದಿನ ಕಾಲದಲ್ಲಿ ಹುಡುಗಿಯರು 14-15 ವರ್ಷಕ್ಕೆ ಮದುವೆಯಾಗುತ್ತಿದ್ದರು ಮತ್ತು 17 ವರ್ಷಕ್ಕಾಗಲೇ ಮಗುವಿಗೆ ಜನ್ಮ ನೀಡುತ್ತಿದ್ದರು. ಈ ಬಗ್ಗೆ ಮನುಸ್ಮೃತಿಯನ್ನು ಓದಿ’ ಎಂದು ಗುಜರಾತ್ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿರುವ 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಮೀರ್ ಜೆ ದೇವ್, ‘14, 15 ವರ್ಷಕ್ಕೆ ಮದುವೆಯಾಗುವುದು ಹಾಗೂ 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಸಾಮಾನ್ಯವಾಗಿತ್ತು. ನೀವು ಮನುಸ್ಮೃತಿಯನ್ನು ಓದಿಲ್ಲ. ಒಮ್ಮೆ ಓದಿ’ ಎಂದರು.
ಇದನ್ನು ಓದಿ: ಹೇಳಿಕೆಗಳು ಎಲ್ಲೆ ಮೀರಬಾರದು: ರಾಹುಲ್ ಗಾಂಧಿಗೆ ಹೈಕೋರ್ಟ್ ಸಲಹೆ
ಇದೇ ವೇಳೆ, ‘ಬಾಲಕಿಯ ಗರ್ಭದಲ್ಲಿ ಎರಡು ಭ್ರೂಣಗಳಿದ್ದು ಆಕೆಯೂ ಉತ್ತಮ ಸ್ಥಿತಿಯಲ್ಲಿರುವುದರಿಂದ ಏಕಾಏಕಿ ಗರ್ಭಪಾತಕ್ಕೆ ಅನುಮತಿ ನೀಡಲು ಆಗದು. ಆದರೂ ಈ ಬಗ್ಗೆ ವೈದ್ಯರಿಂದ ವರದಿ ತರಿಸಿಕೊಂಡು ಮುಂದಿನ ಹೆಜ್ಜೆ ಇಡೋಣ’ ಎಂದು ಸ್ಪಷ್ಟಪಡಿಸಿ ವಿಚಾರಣೆ ಮುಂದೂಡಿದರು.
‘ಮಗಳು 7 ತಿಂಗಳ ಗರ್ಭಿಣಿಯಾದಾಗ ನಮಗೆ ಈ ವಿಷಯ ತಿಳಿದಿದ್ದು, ಆಕೆ ಅಪ್ರಾಪ್ತೆಯಾದ್ದರಿಂದ ವೈದ್ಯಕೀಯವಾಗಿ ಗರ್ಭಪಾತಕ್ಕೆ ಅನುಮತಿ ನೀಡಿ’ ಎಂದು ತಂದೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಮೋದಿ ಸರ್‌ನೇಮ್ ಕೇಸ್: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್ ಗಾಂಧಿ