ಟೈಲರ್ ಅಂಗಡಿಗೆ ಬಂದ ಗಂಡನೊಬ್ಬ, ತನ್ನ ಹೆಂಡತಿಯ ಬಾಯಿಗೆ ಹೊಲಿಗೆ ಹಾಕುವಂತೆ ವಿಲಕ್ಷಣ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಗಂಡ-ಹೆಂಡ್ತಿಗೆ (Husband And Wife) ಸಂಬಂಧಿಸಿದ ತಮಾಷೆಯ ವಿಡಿಯೋಗಳು ಹೆಚ್ಚು ವೈರಲ್ (Viral Video) ಆಗುತ್ತಿರುತ್ತವೆ. ಇಂದು ಎಲ್ಲರೂ ವ್ಲಾಗರ್, ಕಂಟೆಂಟ್ ಕ್ರಿಯೇಟರ್ ಆಗಿದ್ದು, ತಮ್ಮದೇ ಶೈಲಿಯಲ್ಲಿ ತಮಾಷೆಯ ವಿಡಿಯೋಗಳನ್ನು (Funny Viral Video) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಕಮೆಂಟ್ ಮಾಡಿರುವ ನೆಟ್ಟಿಗರು ಇದು ನೊಂದ ಗಂಡನ ಕಥೆ (Husband Story( ಎಂದಿದ್ದಾರೆ. ಇದೇ ರೀತಿ ಹಲವು ಫನ್ನಿ ಕಮೆಂಟ್‌ಗಳು ಈ ವಿಡಿಯೋಗೆ ಬಂದಿವೆ. ಈ ವಿಡಿಯೋಗೆ 66 ಸಾವಿರಕ್ಕೂ ಅಧಿಕ ವ್ಯೂವ್, ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ.

ವೈರಲ್ ಆಗಿರುವ ವಿಡಿಯೋವನ್ನು Lakhan Ghotkar (lakhanghotkar01) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 2 ಮಿಲಿಯನ್ ಫಾಲೋವರ್ಸ್‌ ಳನ್ನು ಹೊಂದಿರುವ ಲಖನ್ ಘೋಟ್ಕರ್, ತಮ್ಮ ಖಾತೆಯಲ್ಲಿ ಹಲವು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?

ಹೆಂಡ್ತಿಯೊಂದಿಗೆ ಗಂಡ, ಬಟ್ಟೆ ಹೊಲಿಯುವ ಟೈಲರ್ ಅಂಗಡಿಗೆ ಬರುತ್ತಾನೆ. ಬಂದು ನೀವು ಏನೆಲ್ಲಾ ಹೊಲಿಯುತ್ತೀರಿ ಎಂದು ಕೇಳುತ್ತಾನೆ. ಇದಕ್ಕೆ ಟೈಲರ್, ನಾನು ಎಲ್ಲಾ ರೀತಿಯ ಬಟ್ಟೆಯನ್ನು ಹೊಲೆಯುತ್ತೇನೆ ಎಂದು ಉತ್ತರಿಸುತ್ತಾನೆ. ನಿಮ್ಮ ಕಾಲುಗಳಿಗೆ ನಮಸ್ಕರಿಸುತ್ತೇನೆ. ದಯವಿಟ್ಟು ನನ್ನ ಪತ್ನಿಯ ಬಾಯಿಗೆ ಹೊಲಿಗೆ ಹಾಕು ಎಂದು ಮನವಿ ಮಾಡಿಕೊಳ್ಳುತ್ತಾನೆ. ಈ ಮಾತುಗಳನ್ನು ಕೇಳಿದ ಟೈಲರ್ ಶಾಕ್ ಆಗುತ್ತಾನೆ. ಮುಂದುವರಿದು ಮಾತನಾಡುವ ಗಂಡ, ಈಕೆಗೆ ನಾಲಿಗೆ ಬಹಳ ಆಟವಾಡುತ್ತಿದೆ. ನನ್ನ ಜೀವನವನ್ನೇ ಕಷ್ಟ ಮಾಡ್ತಿದೆ. ನಿಮ್ಮ ಕಾಲು ಮುಗಿಯುತ್ತೇನೆ. ನೀವು ಕೇಳಿದಷ್ಟು ಹಣ ಕೊಡುತ್ತೇನೆ ಎಂದು ಕಣ್ಣೀರು ಹಾಕುತ್ತಾ ಕೇಳಿಕೊಳ್ಳುತ್ತಾನೆ.

ಇದನ್ನೂ ಓದಿ: Japan Couple: ಇಲ್ಲಿ ಪತಿಗೊಂದು ಹಾಸಿಗೆ, ಪತ್ನಿಗೊಂದು ಹಾಸಿಗೆ ಬೇಕು.. ಯಾಕೆ ಗೊತ್ತಾ?

ಈತನ ಮಾತು ಕೇಳಿದ ಟೈಲರ್ ಮೊದಲು ಇಲ್ಲಿಂದ ನೀನು ಹೋಗು ಎಂದು ಹೊರಗೆ ಕಳುಹಿಸುತ್ತಾನೆ. ನನಗೆ ಹೊಡೆಯುತ್ತಾಳೆ, ದಯವಿಟ್ಟು ಆಕೆಯ ಬಾಯಿಗೆ ಹೊಲಿಗೆ ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದು ಕೇಳಿಕೊಳ್ಳುತ್ತಾನೆ. ಇದನ್ನೆಲ್ಲಾ ಕೇಳಿಸಿಕೊಂಡು ಮಹಿಳೆ, ಮನೆಗೆ ಬನ್ನಿ ನಿಮಗೆಲ್ಲಾ ಹೇಳುತ್ತೇನೆ ಅಂತಾಳೆ.

ತಮಾಷೆ ಪ್ರತಿಕ್ರಿಯೆ

ಈ ವಿಡಿಯೋ ನೋಡಿದ ನೆಟ್ಟಿಗರು, ಇದು ಬಹುತೇಕ ಆಸೆ. ಆದ್ರೆ ಈ ಕನಸು ಈಡೇರಲ್ಲ ಎಂಬುವುದು ಅನ್ನೋದು ಸಾರ್ವಕಾಲಿಕ ಸತ್ಯವಾಗಿದೆ ಎಂದಿದ್ದಾರೆ. ಸೂಪರ್ ಬ್ರೋ, ಒಳ್ಳೆಯ ಕಂಟೆಂಟ್ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು, ಆ ದೇವರಿಂದಲೇ ಮಹಿಳೆಯರ ಬಾಯಿಗೆ ಬೀಗಲು ಹಾಕಲು ಆಗಿಲ್ಲ. ಇನ್ನು ಸಾಮಾನ್ಯ ಜನರಿಂದ ಇದು ಸಾಧ್ಯವೇ? ಇದು ನಿನ್ನ ಅವಿನಾಶ ಹಾದಿ ಎಂದು ಹೇಳಿದ್ದಾರೆ. ಮತ್ತೊಂದಿಷ್ಟು ಮಂದಿ, ಇದು ಮಹಿಳೆಯರನ್ನು ಅವಮಾನಿಸುವ ಕಂಟೆಂಟ್. ಇಂತಹ ವಿಡಿಯೋಗಳಿಗೆ ಪ್ರೋತ್ಸಾಹ ನೀಡಬಾರದು. ಇದು ತಪ್ಪಾದ ಸಂದೇಶ ರವಾನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Games for Couple: ದೊಡ್ಡೊರು ಆಟ ಆಡ್ಬಾರ್ದು ಅಂತೇನಿಲ್ಲ, ಪತಿ-ಪತ್ನಿ ಆಟವಾಡಿ ಬಾಂಡಿಂಗ್ ಹೆಚ್ಚಿಸಿಕೊಳ್ಳಿ

View post on Instagram