ಭಾರತದ ಹಲವು ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅನಾಹುತಗಳು ಸಂಭವಿಸಿದೆ. ಹಲವು ಜಿಲ್ಲೆಗಳು ಸಂಪರ್ಕ ಕಡಿದುಕೊಂಡಿದೆ. ಇದರ ಪರಿಣಾಮ ವಂದೇ ಭಾರತ್, ಶತಾಬ್ದಿ ಸೇರಿದಂತೆ ಹಲವು ರೈಲು ಸಂಚಾರ  ರದ್ದಾಗಿದೆ.

ನವದೆಹಲಿ(ಜು.11) ಭಾರಿ ಮಳೆ ಭಾರತದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಉತ್ತರ ಭಾರತ ತತ್ತರಿಸಿದೆ. ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ, ಉತ್ತರಖಂಡ್, ಪಂಜಾಬ್ ಜೊತೆ ಈಶಾನ್ಯ ರಾಜ್ಯಗಳು ಮಳೆಯಿಂದ ನಲುಗಿದೆ. ಪ್ರವಾಹ, ಭೂಕುಸಿತಕ್ಕೆ ಮನೆ, ಕಟ್ಟಡ, ವಾಹನಗಳು ಕೊಚ್ಚಿ ಹೋಗಿದೆ. ಪಟ್ಟಣಗಳು, ಗ್ರಾಮಗಳು ಕೆಸರು ಮಟ್ಟಿನಿಂದ ತುಂಬಿದೆ. ಭಾರಿ ಮಳೆ ಹಾಗೂ ಪ್ರವಾಹಕ್ಕೆ 80 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶದ 10ಕ್ಕೂ ಹೆಚ್ಚು ಜೆಲ್ಲೆಗಳು ಸಂಪರ್ಕ ಕಡಿದುಕೊಂಡಿದೆ. ಹೆದ್ದಾರಿಗಳು, ಸೇತುವೆಗಳು ಕೊಚ್ಚಿ ಹೋಗಿದೆ. ಇತ್ತ ಮಳೆ ಆರ್ಭಟ ಹೆಚ್ಚಾಗಿದೆ. ಹೀಗಾಗಿ ವಂದೇ ಭಾರತ್, ಶತಾಬ್ದಿ ಸೇರಿದಂತೆ ಹಲವು ರೈಲು ಸಂಚಾರ ರದ್ದಾಗಿದೆ.

ಹಿಮಾಚಲ ಪ್ರದೇಶ, ಉತ್ತರಖಂಡ, ಹರ್ಯಾಣ, ದೆಹಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಮಳೆ ಅಬ್ಬರ ಹೆಚ್ಚಾಗಿದೆ. ಹೀಗಾಗಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಕಲ್ಕಾ-ನವದೆಹಲಿಯ ಎರಡು ಶತಾಬ್ದಿ ರೈಲು, ಹಾಗೂ ಚಂಡೀಘಡ-ನವದೆಹಲಿ ನಡುವಿನ ಶತಾಬ್ದಿ ರೈಲು ಸಂಚಾರ ರದ್ದಾಗಿದೆ. ಭಾನುವಾರ(ಜು.09) ರಿಂದ ಜನಶತಾಬ್ದಿ ಹಾಗೂ ವಂದೇ ಭಾರತ್ ರೈಲು ಸಂಚಾರ ರದ್ದಾಗಿದೆ. ಇನ್ನು ಕಲ್ಕಾ-ಶಿಮ್ಲಾ ನಡುವಿನ ರೈಲು ಸಂಚಾರವನ್ನು ಕೆಲ ದಿನಗವರೆಗೆ ರದ್ದು ಮಾಡಲಾಗಿದೆ.

ಗತಕಾಲ ವೈಭವ ಸವಿಯಲು ಮತ್ತೊಂದು ಕೊಡುಗೆ, ಉಗಿಬಂಡಿ ಹೆರಿಟೇಜ್ ರೈಲು ಶೀಘ್ರದಲ್ಲಿ ಆರಂಭ!

ಕಲ್ಕಾ-ಅಂಬಾಲಾ- ಚಂಡಿಘಡ ನಡುವಿನ ರೈಲು ಸಂಚಾರವನ್ನು ಮುಂದಿನ 24 ಗಂಟೆಗಳ ಕಾಲ ರದ್ದು ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚರಿವು ಸುಮಾರು 35 ಪ್ರಯಾಣಿಕರ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ಇತ್ತ ಮಹಾರಾಷ್ಟ್ರದಲ್ಲೂ ಹಲವು ರೈಲು ಸಂಚಾರ ರದ್ದಾಗಿದಿ.ಮುರ್ತಿಜಾಪುರ- ಮಾನ ಮಾರ್ಗ ಮಳೆಯಿಂದ ಜಲಾವೃತಗೊಂಡಿದೆ. ಹೀಗಾಗಿ ಈ ರೈಲು ಸಂಚಾರ ರದ್ದಾಗಿದೆ. ಚತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಹೊರಡುವ ನಾಗ್ಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಿದೆ . ಅಕೋಲಾ ರೈಲು ನಿಲ್ದಾಣದಿಂದ ಹೊರಡು ಮಡಗಾಂವ್ ನಾಗ್ಪುರ ಎಕ್ಸ್‌ಪ್ರೆಸ್ ರೈಲು ರದ್ದು ಮಾಡಲಾಗಿದೆ. ಅಮರಾವತಿ-ಚತ್ರವತಿ ಶಿವಾಜಿ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲು ಕೂಡ ರದ್ದು ಮಾಡಲಾಗಿದೆ.

ಭಾರೀ ಮಳೆಗೆ ತುತ್ತಾಗಿರುವ ಹಿಮಾಚಲ ಪ್ರದೇಶದಲ್ಲಿ ಕಳೆದ 3 ದಿನಗಳಲ್ಲಿ 72 ಮಂದಿ ಸಾವನ್ನಪ್ಪಿದ್ದಾರೆ. ಭೂಕುಸಿತ ಮತ್ತು ಎದೆ ಝಲ್ಲೆನಿಸುವ ಪ್ರವಾಹಗಳಿಂದ ರಾಜ್ಯದ ವಿವಿಧೆಡೆ ಸಿಲುಕಿರುವ 400 ಪ್ರವಾಸಿ ಮತ್ತು ಸ್ಥಳೀಯರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ‘ರಾಜ್ಯವು ಕಳೆದ 50 ವರ್ಷಗಳಲ್ಲೇ ಇಂತಹ ವ್ಯಾಪಕವಾದ ಭಾರೀ ಮಳೆಗೆ ಕಂಡಿಲ್ಲ’ ಎಂದು ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಆತಂಕ ವ್ಯಕ್ತಪಡಿಸಿದ್ದಾರೆ. ಪೈಪ್‌ಗಳು ಒಡೆದು 5000 ಗ್ರಾಮಗಳ ನೀರು ಪೂರೈಕೆ ಸ್ಥಗಿತವಾಗಿದೆ. ಸುಮಾರು 800 ಕೋಟಿ ರು. ಹಾನಿಯಾಗಿದೆ.

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಶೇಕಡಾ 25 ರಷ್ಟು ಕಡಿತ, ಇಲ್ಲಿದೆ ಹೊಸ ಬೆಲೆ ಪಟ್ಟಿ!

ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೇವಲ 3 ದಿನದ ಅಂತರದಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶೇ.11 ಹೆಚ್ಚು ಮಳೆ ಆಗಿದೆ. ಜತೆಗೆ ಪಕ್ಕದ ರಾಜ್ಯಗಳ ಮಳೆ ಕಾರಣ ಗಂಗಾ ನದಿಯಲ್ಲಿ ನೀರಿನ ಮಟ್ಟಹೆಚ್ಚಿದೆ. ವಾರಾಣಸಿಯ ಕೆಲವು ಘಾಟ್‌ಗಳು ಮುಳುಗಡೆ ಆಗಿವೆ.