ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಶೇಕಡಾ 25 ರಷ್ಟು ಕಡಿತ, ಇಲ್ಲಿದೆ ಹೊಸ ಬೆಲೆ ಪಟ್ಟಿ!

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲೇ ಇದೀಗ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈಲು ಟಿಕೆಟ್ ದರ ಶೇಕಡಾ 25 ರಷ್ಟು ಕಡಿತ ಮಾಡಲಾಗಿದೆ. ವಂದೇ ಭಾರತ್ ರೈಲು ಟಿಕೆಟ್ ದರವೂ ಕಡಿತಗೊಳಿಸಲಾಗಿದೆ.

AC trains with sitting accommodation fare slashed up to 25 percent including vande bharat ckm

ನವದೆಹಲಿ(ಜು.08) ಭಾರಿ ಮಳೆ ಹಾಗೂ ಪ್ರವಾಹ, ಇದಕ್ಕೂ ಮೊದಲು ಬಿಸಿ ಗಾಳಿಯಿಂದ ತರಕಾರಿಗಳ ಬೆಲೆ ಹೆಚ್ಚಾಗಿದೆ. ಇತ್ತ ಬೇಳೆ ಕಾಳುಗಳ ಬೆಲೆ ಹೆಚ್ಚಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದು ನೀಡಿದೆ. ಎಸಿ ಕೋಚ್ ರೈಲು ಟೆಕೆಟ್ ದರವನ್ನು ಕಡಿತಗೊಳಿಸಿದೆ.ಈ ಕಡಿತದಲ್ಲಿ ವಂದೇ ಭಾರತ್ ರೈಲು ಕೂಡ ಸೇರಿದೆ. ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳ ಎಸಿ ಕೋಚ್ ಟಿಕೆಟ್ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸಲಾಗಿದೆ. 

ಕೇಂದ್ರ ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಕಾರಣ ಕಳೆದ 30 ದಿನಗಳಲ್ಲಿ ಎಸಿ ಕೋಚ್‌ಗಳಲ್ಲಿ ಶೇಕಡಾ 50 ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿದೆ. ಹೀಗಾಗಿ ಎಸಿ ಕೋಚ್ ಟಿಕೆಟ್ ಬೆಲೆಯಲ್ಲಿ ಶೇಕಡಾ 25 ರಷ್ಟು ಕಡಿತ ಮಾಡಿದೆ. ಎಸಿ ಕೋಚ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲಿನ ಎಸಿ ಕೋಚ್ ಟಿಕೆಟ್ ದರ ಇದೀಗ ಇಳಿಕೆ ಮಾಡಲಾಗಿದೆ.

ವಂದೇ ಭಾರತ್ : ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರು ಟಿಕೆಟ್ ಚೆಕ್ಕರ್‌ಗೆ ಟಿಕೆಟ್ ಸಿಕ್ಕಿರೋದು ನೋಡಿ ವೀಡಿಯೋ

ಟಿಕೆಟ್‌ನ ಮೂಲ ಬೆಲೆಯಲ್ಲಿ ಶೇಕಡಾ 25 ರಷ್ಟು ಕಡಿತ ಮಾಡಲಾಗಿದೆ. ಆದರೆ ಮುಂಗಡ ಬುಕಿಂಗ್, ಸೂಪರ್‌ಫಾಸ್ಟ್ ಸರ್ಚಾರ್ಜ್, ಜಿಎಸ್‌ಟಿ ಸೇರಿದಂತೆ ಇತರ ಶುಲ್ಕ ಯಥಾ ಪ್ರಕಾರ ಇರಲಿದೆ. ಕಳದೆ 30 ದಿನದಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಭರ್ತಿಯಾದ ರೈಲು ಮಾರ್ಗದ ಎಸಿ ಕೋಚ್‌ಗಳ ಟಿಕೆಟ್ ಬೆಲೆ ಶೇಕಡಾ 25 ರಷ್ಟು ಕಡಿತಗೊಳ್ಳಲಿದೆ. ಇನ್ನು ಕಳೆದ 30 ದಿನಗಳಲ್ಲಿ ಯಾವ ಮಾರ್ಗದ ರೈಲಿನ ಎಸಿ ಕೋಚ್ ಸೀಟುಗಳು ಶೇಕಡಾ 50ಕ್ಕಿಂತ ಮೇಲ್ಪಟ್ಟು ಭರ್ತಿಯಾಗಿದ್ದರೆ ಅಂತಹ ಎಸಿ ಕೋಚ್‌ಗಳ ಟಿಕೆಟ್ ದರ ಇಳಿಕೆ ಇಲ್ಲ.

ಟಿಕೆಟ್ ದರದಲ್ಲಿ ಶೇಕಡಾ 25 ರಷ್ಟು ಕಡಿತ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಈ ಡಿಸ್ಕೌಂಟ್ ಆಫರ್ ಗರಿಷ್ಠ 6 ತಿಂಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಇದರ ನಡುವೆ ಎಸಿ ಕೋಚ್‌ಗಳ ಸೀಟುಗಳಿಗೆ ಭಾರಿ ಬೇಡಿಕೆ ವ್ಯಕ್ತವಾದರೆ ಟಿಕೆಟ್ ದರ ಪರಿಷ್ಕರಣೆಯಾಗಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ಪರಿಷ್ಕೃತ ದರ ಅನ್ವಯಾಗುವುದಿಲ್ಲ. ಹೀಗಾಗಿ ಮುಂಗಡ ಟಿಕೆಟ್ ಬುಕಿಂಗ್ ಮಾಡಿದ ಪ್ರಯಾಣಿಕರಿಗೆ ರಿಫಂಡ ಸೌಲಭ್ಯ ಇರುವುದಿಲ್ಲ.

ತಿಪಟೂರಿಗೆ ವಂದೇ ಭಾರತ್‌ ರೈಲು : ಅದ್ದೂರಿ ಸ್ವಾಗತ

ಟಿಕೆಟ್ ದರ ಇಳಿಕೆ ಯೋಜನೆ ವಿಶೇಷ ರೈಲುಗಲಿಗೆ ಅನ್ವಯವಾಗುವುದಿಲ್ಲ. ಹಬ್ಬದ ದಿನಗಳು, ರಜಾ ದಿನಗಳಲ್ಲಿನ ಹೆಚ್ಚುವರಿ ವಿಶೇಷ ರೈಲುಗಳಿಗೆ ಈ ಟಿಕೆಟ್ ದರ ಕಡಿತ ಯೋಜನೆ ಅನ್ವಯವಾಗುವುದಿಲ್ಲ. ರಿಯಾಯಿತಿ ಕೇವಲ ಎಂಡ್ ಟು ಎಂಡ್ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ.

Latest Videos
Follow Us:
Download App:
  • android
  • ios