ಉತ್ತರ ಪ್ರದೇಶ(ಮೇ.09): ಕೊರೋನಾ ವೈರಸ್‌ಗೆ ಪ್ರತಿ ದಿನ ದೇಶದಲ್ಲಿ ಸಾವಿನ ಸಂಖ್ಯೆ 4,000ಕ್ಕೂ ಹೆಚ್ಚಾಗುತ್ತಿದೆ. ಹೀಗಾಗಿ ಶವಾಗಾರ, ಸ್ಮಶಾನಗಳು ಫುಲ್ ಆಗಿದೆ. ಶವಗಳನ್ನು ಸುಡುಲ ಸಾಧ್ಯವಾಗದೆ ಆ್ಯಂಬುಲೆನ್ಸ್‌ನಲ್ಲೇ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಕೆಲ ಕಟುಕ ಕಿರಾತಕರು ಇನ್ನು ಶವಗಳನ್ನು ವ್ಯಾಪಾರ ಮಾಡೋದೊಂದೇ ಬಾಕಿ. ಅಲ್ಲೀಯವರಿಗೆ ಪರಿಸ್ಥಿತಿ ಬಂದು ನಿಂತಿದೆ.

ಸಾವಿನ ವ್ಯಾಪಾರ: ಬಯಲಾಯ್ತು ಧನದಾಹಿ ನೀಚರ ಕರಾಳ ಮುಖ!

ಉತ್ತರ ಪ್ರದೇಶದ ಭಾಗ್‌ಪಟ್‌ನಲ್ಲಿ ಹೆಣದ ಬಟ್ಟೆ ಕದ್ದು ವ್ಯಾಪಾರ ಮಾಡೋ ಕಳ್ಳರ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ.  7 ಮಂದಿಯ ಈ ಗ್ಯಾಂಗ್ ಶವಗಾರ, ಸ್ಮಶಾನಕ್ಕೆ ತೆರಳಿ ಹೆಣದ ಮೇಲಿದ್ದ ಬಟ್ಟೆಗಳನ್ನು ಕದ್ದೊಯ್ಯುತ್ತಿತ್ತು. ಹೆಣದ ಉಡುಪು, ಸ್ಯಾರಿ, ಬಟ್ಟೆ, ಹೊದಿಸಿದ್ದ ಬಟ್ಟೆಯನ್ನೂ ಬಿಡದೆ ಕದ್ದೊಯ್ಯುತ್ತಿದ್ದರು. ಹೀಗೆ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

7 ಮಂದಿ ಚಾಲಾಕಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.  ಈ ವೇಳೆ ಇವರ ಕಳ್ಳತನ ಹಿಸ್ಟರಿ ಬಯಲಾಗಿದೆ. ಈ ರೀತಿಯ ಕದ್ದ ಬಟ್ಟೆಗಳನ್ನು ಇಸ್ತ್ರಿ ಹಾಕಿ ಮತ್ತೆ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 520 ಬೆಡ್‌ಶೀಟ್, 127 ಕುರ್ತಾ, 52 ಬಿಳಿ ಸ್ಯಾರಿ, ಬಿಳಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಕ್ಷ ಲಕ್ಷ ಕೇಳಿದ ಆಸ್ಪತ್ರೆ: ಪತಿ ಶವವನ್ನೇ ಬಿಟ್ಟುಹೋದ ಪತ್ನಿ..!

ವಿಶೇಷ ಅಂದರೆ ಅರೆಸ್ಟ್  ಆಗಿರುವ ಎಲ್ಲಾ 7 ಮಂದಿ ಒಂದೇ ಕುಟುಂಬದವರು. ಕಳೆದ 10 ವರ್ಷದಿಂದ ಹೊರಗೆ ಹಾಕಿದ್ದ ಬಟ್ಟೆ , ಪ್ರಮುಖ ವಸ್ತುಗಳನ್ನು ಕದಿಯುತ್ತಿದ್ದರು. ಆದರೆ ಸದ್ಯ ಲಾಕ್‌ಡೌನ್, ಕರ್ಫ್ಯೂ ಕಾರಣ ಹೊರಗೆ ಬರುವಂತಿಲ್ಲ. ಹೀಗಾಗಿ ಶವಾಗಾರಕ್ಕೆ ತೆರಳಿ ಶವಗಳ ಮೇಲಿನ ಬಟ್ಟೆ ಕದಿಯುತ್ತಿದ್ದರು.