ಕೊಂಗನಾಡು ಪ್ರತ್ಯೇಕ ರಾಜ್ಯ ಬೇಡಿಕೆಯ ಕೂಗು ಮತ್ತೊಮ್ಮೆ ತಮಿಳುನಾಡಿನಲ್ಲಿ ಆರಂಭವಾಗಿದೆ.  

ಚೆನೈ (ಜು.3): ಕೊಂಗನಾಡು ಪ್ರತ್ಯೇಕ ರಾಜ್ಯ ಬೇಡಿಕೆಯ ಕೂಗು ಮತ್ತೊಮ್ಮೆ ತಮಿಳುನಾಡಿನಲ್ಲಿ ಆರಂಭವಾಗಿದೆ. ಡಿಎಂಕೆ ಎಂಪಿ ಎ.ರಾಜಾ ಅವರು ವೇದಿಕೆಯೊಂದರಲ್ಲಿ ಪತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಕೂಡ ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಎಂಬುದು ಗಮನಾರ್ಹ. ಸ್ಟಾಲಿನ್ ಗೆ ಕೂಡ ಪ್ರತ್ಯೇಕ ರಾಜ್ಯವಾಗುವ ಬಗ್ಗೆ ಮನಸ್ಸಿನಲ್ಲಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Scroll to load tweet…

ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬಂದ ಡಿಎಂಕೆ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಡುವಿನ ತಿಕ್ಕಾಟವೇ ಪ್ರತ್ಯೇಕ ರಾಜ್ಯ ಚರ್ಚೆ ಕೂಗಿಗೆ ಕಾರಣ ಎನ್ನಲಾಗಿದೆ . ಹಾಗೆ ನೋಡಿದ್ರೆ ಪ್ರತ್ಯೇಕತೆಯ ಕೂಗು ಇದೇ ಮೊದಲಲ್ಲ. 50ರ ದಶಕದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದಗಿನಿಂದಲೂ ಸಣ್ಣದಾಗಿ ಪ್ರತ್ಯೇಕ ರಾಜ್ಯ ರಚನೆ ಕೂಗು ಕೇಳಿ ಬರುತ್ತಿತ್ತು. ಸದ್ಯ ಎ.ರಾಜಾ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟರ್ ನಲ್ಲಿ ಪರ ವಿರೋಧದ ಚರ್ಚೆ ಆರಂಭವಾಗಿದೆ.

2013 ರಲ್ಲೂ ಪ್ರತ್ಯೇಕತೆಯ ಕೂಗು ಕೇಳಿಬಂದಿತ್ತು. 2021 ಮೇ ತಿಂಗಳಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳು ನಾಡಿನಲ್ಲಿ ಅಧಿಕಾರವನ್ನು ಹಿಡಿಯುತ್ತಿದ್ದಂತೆ ಈ ಪ್ರತ್ಯೇಕತೆಯ ಕೂಗು ತೀವ್ರಗೊಂಡಿತ್ತು. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆಯುವ ನಿರ್ಣಯ ಕೈಗೊಂಡಿದ್ದು , ಜಿಎಸ್‌ಟಿ ಮತ್ತು ನೀಟ್‌ ಕುರಿತು ಪರಿಶೀಲನೆಗೆ ಸದನ ಸಮಿತಿಯನ್ನು ರಚಿಸಿದ್ದಕ್ಕೆ ಕೇಂದ್ರ ಸರ್ಕಾರದ ಅಸಮಾಧಾನ ಅಸಮಾಧಾನಗೊಂಡಿತ್ತು. ಸ್ಟಾಲಿನ್ ತಂತ್ರಕ್ಕೆ ಬಿಜೆಪಿ ಪ್ರತಿ ತಂತ್ರವಾಗಿ ಪ್ರತ್ಯೇಕ ಕೊಂಗುನಾಡು ಬೇಡಿಕೆಯನ್ನು ಹುಟ್ಟುಹಾಕಿತ್ತು ಎನ್ನಲಾಗುತ್ತಿದೆ.

Scroll to load tweet…

ತಮಿಳು ನಾಡಿನ ಪಶ್ಚಿಮ ಭಾಗವನ್ನು ಕೊಂಗು ನಾಡು ಎಂದು ಕರೆಯಲಾಗುತ್ತದೆ. ಸುಮಾರು 61 ವಿಧಾನಸಭಾ ಕ್ಷೇತ್ರಗಳು ಹಾಗೂ 10 ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ವಿಶೇಷವೆಂದರೆ ತಮಿಳು ನಾಡಿನ ಪಶ್ಚಿಮ ಭಾಗದಲ್ಲೇ ಬಿಜೆಪಿ ಅಧಿಕಾರ ಸಿಕ್ಕಿರುವುದು. ಬಹಳ ಮುಖ್ಯವಾಗಿ ಕೊಂಗುನಾಡು ಪ್ರದೇಶ ಕೃಷಿ, ನೀರಾವರಿ, ಉದ್ಯಮ ಸೇರಿದಂತೆ ತಮಿಳಿನ ಶ್ರೀಮಂತ ಸಂಸ್ಕೃತಿಗೆ ಪ್ರಸಿದ್ಧಿಯಾಗಿದೆ.