ಟೊಮ್ಯಾಟೋ ಬೆಳೆಗಾರರು ತಾವು ಬೆಳೆದ ಬೆಳಯನ್ನು ವಿಶಿಷ್ಟ ಶೈಲಿಯಲ್ಲಿ ಲಾರಿಗೆ ಲೋಡ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೀಗೂ ಮಾಡಬಹುದುದಾ ಎಂದು ಅಚ್ಚರಿ ಮೂಡಿಸುತ್ತಿದೆ.
ನವದೆಹಲಿ: ಭಾರತದ ಸಾಮಾನ್ಯ ಜನರು ತಮ್ಮ ಕಾರ್ಯಗಳನ್ನು ಸುಲಭಗೊಳಿಸಲು ಮಾಡುವ ಕೆಲವು ಜುಗಾಡ್ ತಂತ್ರಗಳಿಗೆ ಭಾರೀ ಫೇಮಸ್, ಕಸದಿಂದ ರಸ ತೆಗೆಯುವ ನಮ್ಮ ಭಾರತೀಯರ ಕಲೆಗಾರಿಕೆಗೆ ಮೆಚ್ಚದವರಿಲ್ಲ. ಕೆಲ ದಿನಗಳ ಹಿಂದೆ ಹಾಲು ಮಾರಾಟಗಾರನೋರ್ವ ತನ್ನ ಹಾಲು ಮಾರುವ ವಾಹನವನ್ನು ಫಾರ್ಮುಲಾ ರೇಸ್ ಕಾರ್‌ನಂತೆ ವಿನ್ಯಾಸಗೊಳಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೇ ಆತನ ಬುದ್ಧಿವಂತಿಕೆಗೆ ಜನ ಬೆರಗಾಗಿದ್ದರು. ಅದೇ ರೀತಿ ಈಗ ಟೊಮ್ಯಾಟೋ ಬೆಳೆಗಾರರು ತಾವು ಬೆಳೆದ ಬೆಳಯನ್ನು ವಿಶಿಷ್ಟ ಶೈಲಿಯಲ್ಲಿ ಲಾರಿಗೆ ಲೋಡ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೀಗೂ ಮಾಡಬಹುದುದಾ ಎಂದು ಅಚ್ಚರಿ ಮೂಡಿಸುತ್ತಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಸಾಗರ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹೊಲವೊಂದರಲ್ಲಿ(Farm) ಲಾರಿಯೊಂದನ್ನು ನಿಲ್ಲಿಸಲಾಗಿದ್ದು, ಐದಾರು ಜನ ಕೃಷಿಕ ಮಹಿಳೆಯರು ಹೊಲದಲ್ಲಿರುವ ಟೊಮ್ಯಾಟೋವನ್ನು (tomatoes) ಬುಟ್ಟಿಗಳಿಗೆ ತುಂಬಿಸುತ್ತಿದ್ದರೆ, ಒಬ್ಬ ವ್ಯಕ್ತಿ ಆ ಟೊಮೆಟೋಗಳನ್ನು ಟ್ರಕ್‌ಗೆ ಲೋಡ್ ಮಾಡುತ್ತಿದ್ದಾನೆ. ಇಲ್ಲಿ ಆತ ಲೋಡ್ ಮಾಡುವ ರೀತಿಯೇ ಜನರನ್ನು ಬೆರಗಾಗಿಸಿದೆ. ಬುಟ್ಟಿಯನ್ನು ಟ್ರಕ್(Truck) ಕ್ಯಾರಿಯರ್ ಮೇಲೆಸೆಯುವ ಆತ ಅಲ್ಲಿ ಟೊಮೆಟೋವನ್ನು ಚೆಲ್ಲಿ ಅದಾಗಿಯೇ ಕೆಳಗೆ ಬೀಳುವಂತೆ ಅದನ್ನು ಮೇಲಕ್ಕೆಸೆಯುತ್ತಾನೆ. ಆತ ಎಸೆಯುವ ಶೈಲಿಗೆ ಬುಟ್ಟಿ ಮೇಲೇರಿ ಟೊಮೆಟೋವನ್ನು ಲಾರಿಗೆ ಸುರಿದು ಅದಾಗಿಯೇ ಕೆಳಗೆ ಬೀಳುತ್ತದೆ.
ಫಾರ್ಮುಲಾ ರೇಸರ್‌ಗೆ ಯಾವುದರಲ್ಲೂ ಕಡಿಮೆ ಇಲ್ಲ ಈ ಹಾಲು ಮಾರಾಟಗಾರ: video viral
ನೋಡಲು ಒಂತರ ವಿಚಿತ್ರ ಎನಿಸಿದರು ಇದು ಕೇವಲ ಆತನ ಚಾಣಾಕ್ಷತನದಿಂದ ಮಾತ್ರ ಸಾಧ್ಯವಾದಂತಹ ಒಂದು ಕಲೆ ಇಲ್ಲಿ ಯಾವುದೇ ತಂತ್ರಜ್ಞಾನವನ್ನು(technology) ಬಳಸದೇ ತನ್ನ ನಿರಂತರ ಅಭ್ಯಾಸದಿಂದ ಆತ ಈ ಕಾರ್ಯದಲ್ಲಿ ಪಂಟರ್ ಎನಿಸಿಕೊಂಡಿದ್ದಾನೆ. ಇದನ್ನು ನೋಡಿದಷ್ಟು ಸುಲಭವಾಗಿ ಎಲ್ಲರಿಗೂ ಮಾಡಲು ಸಾಧ್ಯವಾಗದು. ಸತತ ಅಭ್ಯಾಸದಿಂದ ಆತ ಈ ರೀತಿ ಲೋಡ್ ಮಾಡುತ್ತಿದ್ದು, ಈತನ ಈ ತಂತ್ರಕ್ಕೆ ಪ್ರಶಸ್ತಿ ನೀಡಬೇಕೆನಿಸುವುದು.
10 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಅನೇಕರು ಅಚ್ಚರಿಯಿಂದ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈತನನ್ನು ಕಾಲಿವುಡ್ ನಟ ರಜನಿಕಾಂತ್‌ಗೆ (Rajanikanth) ಹೋಲಿಕೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಶೇರ್ ಮಾಡಿಕೊಂಡು ವೈರಲ್ ಆಗುತ್ತಿದೆ.
ಹಾಲು ಮಾರಾಟಗಾರನ ಮಾಸ್ಟರ್ ಪ್ಲಾನ್ ಕಂಡು ಸೋಶಿಯಲ್ ಮೀಡಿಯಾ ದಂಗು
ಒಬ್ಬರು ಇದನ್ನು (Power of centripetal force) ಕೇಂದ್ರಾಭಿಮುಖ ಬಲದ ಶಕ್ತಿ ಎಂದು ಬಣ್ಣಿಸಿದರೆ, ಮತ್ತೆ ಕೆಲವರು ಆತ ಎಲ್ಲೂ ನಿಲ್ಲುವುದಿಲ್ಲ. ಆತ ಎಸೆಯುವ ರೀತಿಗೆ ಒಂದೇ ಒಂದು ಟೊಮ್ಯಟೋ ಕೂಡ ಲಾರಿಯಿಂದ ಕೆಳಗೆ ಬೀಳುವುದಿಲ್ಲ ಎಂದು ಆತನ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಶಕ್ತಿ, ಕೌಶಲ್ಯ, ಸಮಯ, ತಂತ್ರ ಎಲ್ಲವೂ ಬೇಕಾಗುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆತನಿಗೂ ಆ ಕೃಷ ಭೂಮಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ದೇವರು ಆಶೀರ್ವದಿಸಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೋವಿಡ್ ಸಮಯದಲ್ಲಿ ಹಾಲು ಮಾರುವ ವ್ಯಕ್ತಿಯೊಬ್ಬ ಸಾಮಾಜಿಕ ಅಂತರ (Social Distence) ಕಾಯ್ದುಕೊಳ್ಳುವ ಸಲುವಾಗಿ ಪ್ರಯೋಗ ಮಾಡಿದ ಹೊಸ ತಂತ್ರದ ವಿಡಿಯೋವೊಂದು ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.