ಲಾಕ್ ಡೌನ್ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಲು ಮಾರುವವನ ಮಾಸ್ಟರ್ ಪ್ಲಾನ್/ ಹಾಲು ಮಾರಾಟಗಾರನ ಕರಾಮತ್ತು/  ಸೋಶಿಯಲ್ ಮೀಡಿಯಾದಲ್ಲಿ ಜೈಕಾರ

ನವದೆಹಲಿ(ಮೇ 08) ಲಾಕ್ ಡೌನ್ ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮೇಲಿಂದ ಮೇಲೆ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹೇಳುತ್ತಲೇ ಬಂದಿವೆ. ನಿಜವಾದ ಕಾಳಜಿ ಇದ್ದವರು ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಈ ಮನುಷ್ಯ ಮಾಡಿರುವ ಪ್ಲಾನ್ ಮಾತ್ರ ಎಲ್ಲಕ್ಕಿಂತ ಮಿಗಿಲಾಗಿದೆ.

ಈ ಹಾಲುಮಾರುವವ ಮಾಡಿಕೊಂಡಿರುವ ಪ್ಲಾನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಸೃಷ್ಟಿ ಮಾಡಿದೆ.

ಕೊರೋನಾಕ್ಕೆ ಲಸಿಕೆ ಕಂಡು ಹಿಡಿದ ಚೀನಾ

ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಹಾಲು ಮಾರಾಟಗಾರನ ಮಾಸ್ಟರ್ ಪ್ಲಾನ್ ನ್ನು ಶೇರ್ ಮಾಡಿದ್ದಾರೆ. ಹಾಲು ಮಾರಾಟಗಾರ ಮತ್ತು ಹಾಲು ಖರೀದಿ ಮಾಡುವವರು ಇಬ್ಬರು ಮಾಸ್ಕ್ ಧರಿಸಿದ್ದಾರೆ. ಆದರೆ ಸಾಮಾಜಿಕ ಅಂತರ ಕಡಿಮೆ ಆಗುತ್ತದೆ ಎಂದು ಪೈಪ್ ಒಂದನ್ನು ಅಳವಡಿಸಿಕೊಂಡಿದ್ದಾನೆ.

ಇದೊಂದು ಸಾಮಾನ್ಯ ಜ್ಞಾನದಲ್ಲಿ ತಯಾರು ಮಾಡಿದ ಹೊಸ ಆಲೋಚನೆ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

Scroll to load tweet…