ಲಕ್ನೋ(ಆ.08): ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಗಾರ್ಡ್‌ ವೃದ್ಧೆಯೊಬ್ಬರನ್ನು ಕ್ರೂರವಾಗಿ ಥಳಿಸಿದ ಘಟನೆ ನಡೆದಿದೆ. ಘಟನೆ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗಾರ್ಡ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆ ಇಲ್ಲದ, ನಿರಾಶ್ರಿತ ವೃದ್ಧೆ ಆಸ್ಪತ್ರೆ ಮುಂಭಾಗದಲ್ಲಿದ್ದರು. ಈ ಸಂದರ್ಭ ವೃದ್ಧೆಯನ್ನು ಆಲ್ಲಿಂದ ಕಳುಹಿಸುವ ಪ್ರಯತ್ನದ ನಡುವೆ ಗಾರ್ಡ್ ಹಲ್ಲೆ ನಡೆಸಿದ್ದಾನೆ. ಘಟನೆ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಭಾರತದ ಅತ್ಯುತ್ತಮ CM ಸಮೀಕ್ಷೆ ಫಲಿತಾಂಶ ಪ್ರಕಟ, ಸತತ 3ನೇ ಬಾರಿ ಯೋಗಿ ಆದಿತ್ಯಾನಾಥ್‌ಗೆ ಪಟ್ಟ!

ಸ್ವರೂಪ್ ರಾಣಿ ನೆಹರೂ ಆಸ್ಪತ್ರೆ ಮುಂಭಾಗ ವೃದ್ಧೆ ನೆರವಿಗಾಗಿ ಬೇಡುತ್ತಿದ್ದ, ಆಸ್ಪತ್ರೆ ಸೆಕ್ಯುರಿಟಿ ಗಾರ್ಡ್ ಹಲ್ಲೆ ನಡೆಸಿದ್ದಾನೆ. ಪ್ರಯಾಗ್‌ರಾಜ್‌ನ ಆಸ್ಪತ್ರೆ ಮುಂಭಾಗ 80ರ ವೃದ್ಧೆ ಆಶ್ರಯ ಪಡೆದಿದ್ದರು. ಇದನ್ನು ಗಮನಿಸಿ ಗಾರ್ಡ್‌ ಸಂಜಯ್ ಮಿಶ್ರಾ ವೃದ್ಧೆ ಮೇಲೆ ಹಲ್ಲೆ ಮಾಡಿದ್ದಾನೆ. ವೃದ್ಧೆ ನೆರಳಲಲ್ಲಿ ಬಿದ್ದು, ನೋವಿನಿಂದ ಚೀರಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಇನ್ನಿಬ್ಬರು ಮಹಿಳೆ ಕಂಡು ಬಂದಿದ್ದು, ಯಾರೂ ವೃದ್ಧೆಯ ನೆರವಿಗೆ ಧಾವಿಸಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ವೃದ್ಧೆಯನ್ನು ಅದೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

'ಯೋಗಿ ಮಾಡೆಲ್'ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಫುಲ್ ಫಿದಾ!.

ಸೆಕ್ಯುರಿಟಿ ಗಾರ್ಡ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸೆಕ್ಯುರಿಟಿ ಗಾರ್ಡ್‌ನ್ನು ನಿಯೋಜಿಸಿದ ಖಾಸಗಿ ಸಂಸ್ಥೆಯನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಲಾಗಿದೆ. ಘಟನೆ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.