ಭಾರತದ ಅತ್ಯುತ್ತಮ CM ಸಮೀಕ್ಷೆ ಫಲಿತಾಂಶ ಪ್ರಕಟ, ಸತತ 3ನೇ ಬಾರಿ ಯೋಗಿ ಆದಿತ್ಯಾನಾಥ್‌ಗೆ ಪಟ್ಟ!
ಭಾರತದ ಮುಖ್ಯಮಂತ್ರಿ, ಸಚಿವರು, ಪ್ರಧಾನ ಮಂತ್ರಿ ಸೇರಿದಂತೆ ರಾಜಕೀಯ ನಾಯಕರಲ್ಲಿ ಯಾರು ಬೆಸ್ಟ್ ಅನ್ನೋ ಕುತೂಹಲ ಸಾಮಾನ್ಯವಾಗಿ ಇದ್ದೇ ಇರುತ್ತೆ. ಈ ಕುತೂಹಲಕ್ಕೆ ಕಳೆದ ಹಲವು ವರ್ಷಗಳಿಂದ MOTN ಸಮೀಕ್ಷೆ ನಡೆಸುತ್ತಾ ಉತ್ತರ ನೀಡಿದೆ. ಭಾರತದ ಮುಖ್ಯಮಂತ್ರಿಗಳ ಪೈಕಿ ಅತ್ಯುತ್ತಮ ಸಿಎಂ ಯಾರು ಅನ್ನೋ ಸಮೀಕ್ಷಾ ವರದಿ ಪ್ರಕಟಗೊಂಡಿದೆ.
ನವದೆಹಲಿ(ಆ.08): ಭಾರತದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಯಾರು? ರಾಜ್ಯದ ಅಭಿವೃದ್ದಿ, ಸಮಸ್ಯೆಗೆ ಉತ್ತರ, ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟು ನಿಟ್ಟಿನ ಕ್ರಮ, ದಕ್ಷ ಆಡಳಿತ, ಎಲ್ಲಾ ವರ್ಗದವರಿಗೆ ನೆರವು ಸೇರಿದಂತೆ ಹಲವು ಕ್ಷೇತ್ರ ಹಾಗೂ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ ಮುಖ್ಯಮಂತ್ರಿ ಯಾರು ಅನ್ನೋ ಪ್ರಶ್ನೆಗೆ ಇದೀಗ MOTN(ಇಂಡಿಯಾ ಟುಡೆ- ಕಾರ್ವಿ ಇನ್ಸೈಟೈಸ್ ಮೋಡ್ ಆಫ್ ದಿ ನೇಶನ್) ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ವಿಶೇಷ ಅಂದರೆ ಸತತ 3ನೇ ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
'ಯೋಗಿ ಮಾಡೆಲ್'ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫುಲ್ ಫಿದಾ!.
MOTN ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಭಾರತದ ಬೆಸ್ಟ್ ಸಿಎಂ ಎಂದು ಬಹಿರಂಗವಾಗಿದೆ. ಯೋಗಿ ಆದಿತ್ಯನಾಥ್ ಶೇಕಡಾ 24 ರಷ್ಟು ಮತಗಳನ್ನು ಪಡೆದಿದ್ದಾರೆ. ಕಳೆದ ವರ್ಷವೂ ಬೆಸ್ಟ್ ಸಿಎಂ ಪಟ್ಟ ಮುಡಿಗೇರಿಸಿದ ಆದಿತ್ಯನಾಥ್ ಶೇಕಡಾ 18 ರಷ್ಟು ಮತ ಪಡೆದಿದ್ದರು. ವಿಶೇಷ ಅಂದರೆ ಟಾಪ್ 7 ಪಟ್ಟಿಯಲ್ಲಿ 6 ಬಿಜೆಪಿಯೇತರ ಮುಖ್ಯಮಂತ್ರಿಗಳಾಗಿದ್ದಾರೆ.
'ಎರಡು ಎಕರೆ ಜಾಗ ಕೊಡಿ ' ಯುಪಿ ಸಿಎಂ ಯೋಗಿಗೆ BSY ಪತ್ರ
ಅತ್ಯುತ್ತಮ ಸಿಎಂ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಮೊದಲ ಸ್ಥಾನ ಪಡೆದಿದ್ದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 2ನೇ ಸ್ಥಾನ ಪಡೆದಿದ್ದಾರೆ. ಕೇಜ್ರಿವಾಲ್ ಶೇಕಡಾ 15 ರಷ್ಟು ಮತಗಳನ್ನು ಪಡೆದಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಯಡಿಯೂರಪ್ಪ ಬೆಸ್ಟ್ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿ
1 ಯೋಗಿ ಆದಿತ್ಯನಾಥ್(ಉತ್ತರ ಪ್ರದೇಶ)
2 ಅರವಿಂದ್ ಕೇಜ್ರಿವಾಲ್ (ದೆಹಲಿ)
3 ಜಗನ್ ರೆಡ್ಡಿ (ಆಂಧ್ರ ಪ್ರದೇಶ)
4 ಮಮತಾ ಬ್ಯಾನರ್ಜಿ(ಪಶ್ಚಿಮ ಬಂಗಾಳ)
5 ನಿತೀಶ್ ಕುಮಾರ್ (ಬಿಹಾರ)
6 ಉದ್ಧವ್ ಠಾಕ್ರೆ (ಮಹಾರಾಷ್ಟ್ರ)
7 ನವೀನ್ ಪಟ್ನಾಯಕ್ (ಒಡಿಶಾ)
8 ಕೆ ಚಂದ್ರಶೇಖರ್ ರಾವ್(ತೆಲಂಗಾಣ)
9 ಅಶೋಕ್ ಗೆಹ್ಲೋಟ್(ರಾಜಸ್ಥಾನ)
10 ಬಿಎಸ್ ಯಡಿಯೂರಪ್ಪ(ಕರ್ನಾಟಕ)