Asianet Suvarna News Asianet Suvarna News

Mathura: ಮಸೀದೀಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ : ನಿಷೇಧಾಜ್ಞೆ ಜಾರಿ!

*ವಿಗ್ರಹ ಸ್ಥಾಪಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಘೋಷಣೆ
*ದಂಗೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ
*ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಸಹಕರಿಸುವಂತೆ ಎಸ್‌ಎಸ್‌ಪಿ ಮನವಿ

Section 144 imposed in Mathura over Lord Krishna idol Eidgah row mnj
Author
Bengaluru, First Published Nov 29, 2021, 11:40 AM IST

ಮಥುರಾ(ನ.29): ಇಲ್ಲಿನ ಕೃಷ್ಣ ದೇಗುಲಕ್ಕೆ  (Temple) ಹೊಂದಿಕೊಂಡಂತೆ ಇರುವ ಮಸೀದಿಯು (Masjid) ಕೃಷ್ಣನ ನಿಜವಾದ ಜನ್ಮಸ್ಥಳವಾಗಿದ್ದು (Janmabhoomi), ಅಲ್ಲಿ ಕೃಷ್ಣನ ವಿಗ್ರಹವನ್ನು (Krishna Idol) ಸ್ಥಾಪಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ (Akhila Bharatha Hindu Mahasabha) ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ (Babri Masjid) ಕೆಡವಿದ ಸ್ಮರಣಾರ್ಥ ಡಿ.6ರಂದು ಶಾಹಿ ಈದ್ಗಾ ಮಸೀದಿಯನ್ನು ಮಹಾ ಜಲಾಭಿಷೇಕದಿಂದ ಪವಿತ್ರಗೊಳಿಸಿ ಕೃಷ್ಣ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಮಹಾಸಭಾ ನಾಯಕರು ಹೇಳಿದ್ದರು. 

ಇನ್ನೊಂದೆಡೆ ನಾರಾಯಣಿ ಸೇನೆಯು ಮಸೀದಿಯನ್ನು ಕೆಡವುವ ಬೇಡಿಕೆಯೊಂದಿಗೆ ವಿಶ್ರಾಮ ಘಾಟ್‌ನಿಂದ ಕೃಷ್ಣ ಜನ್ಮಸ್ಥಾನದವರೆಗೆ ಪಾದಯಾತ್ರೆ ಮಾಡುವುದಾಗಿ ಘೋಷಿಸಿದೆ. ಈ ಹಿನ್ನೆಲೆ ದಂಗೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೆ ತಂದಿದ್ದು, ಕತ್ರಾ ಕೇಶವದೇವ ಮಂದಿರ ಹಾಗೂ ಶಾಹಿ ಈದ್ಗಾ ಮಸೀದಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನವನೀತ್‌ ಸಿಂಗ್‌ ಚಹಲ್‌ ಹೇಳಿದ್ದಾರೆ. ಡಿಸೆಂಬರ್ 6 ರಂದು ಶಾಹಿ ಈದ್ಗಾದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸುವುದಾಗಿ ಬಲಪಂಥೀಯ ಗುಂಪುಗಳು ಘೋಷಿಸಿದ ನಂತರ ಉತ್ತರ ಪ್ರದೇಶದ ಮಥುರಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಸೀದಿಯು ಕೃಷ್ಣ ಜನಮಸ್ಥಾನ ದೇವಸ್ಥಾನದ ಪಕ್ಕದಲ್ಲಿದೆ.

ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಸಹಕರಿಸುವಂತೆ ಎಸ್‌ಎಸ್‌ಪಿ ಮನವಿ

ಎಸ್‌ಎಸ್‌ಪಿ (ಮಥುರಾ SSP) ಗೌರವ್ ಗ್ರೋವರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಯಲ್ಲಿದೆ, ವದಂತಿ ಹಬ್ಬಿಸುವ  (rumor-mongering) ಅಥವಾ ಪಟ್ಟಣದ ಶಾಂತಿಯುತ ವಾತಾವರಣಕ್ಕೆ ಭಂಗ ತರಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಿಸೆಂಬರ್ 6 ರಂದು ಕೆಲವು ಸಂಘಟನೆಗಳು ಕಾರ್ಯಕ್ರಮ ಅಥವಾ ಪಾದಯಾತ್ರೆ (ಈದ್ಗಾಕ್ಕೆ) ನಡೆಸಲು ನಿರ್ಧರಿಸಿವೆ ಎಂದು  ಮಾಹಿತಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಕೆಲಸ ಮಾಡುವಂತೆ ಎಸ್‌ಎಸ್‌ಪಿ ಜನರಿಗೆ ಮನವಿ ಮಾಡಿದ್ದಾರೆ.

ಕೃಷ್ಣಜನ್ಮಭೂಮಿ ವಿವಾದ: ಜಾಮಾ ಮಸೀದಿ ಸರ್ವೆಗೆ ಮಥುರಾ ಕೋರ್ಟ್‌ನಲ್ಲಿ ಮನವಿ!

ಮಥುರಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗೆ ಸಂವಾದ ನಡೆಸಿದ ಸರ್ಕಲ್ ಆಫೀಸರ್ (Circle Officer) (ನಗರ) ಅಭಿಷೇಕ್ ತಿವಾರಿ, ಆಡಳಿತವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಭರವಸೆ ನೀಡಿದ್ದಾರೆ ಮತ್ತು "ಯಾರಿಗೂ ಯಾವುದೇ ಕಿಡಿಗೇಡಿತನ ಮಾಡಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದಾರೆ. 

ಸ್ಥಳೀಯ ನ್ಯಾಯಾಲಯ ಅರ್ಜಿ ವಿಚಾರಣೆ! 

17ನೇ ಶತಮಾನದ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸ್ಥಳೀಯ ನ್ಯಾಯಾಲಯವು (Court) ವಿಚಾರಣೆ ನಡೆಸುತ್ತಿರುವ ಸಮಯದಲ್ಲಿ ಈದ್ಗಾದಲ್ಲಿ ವಿಗ್ರಹ ಸ್ಥಾಪಿಸುವ  ಬೆದರಿಕೆ ಬಂದಿದೆ. ಆದರೆ, ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಮತ್ತು ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಮಥುರಾದಲ್ಲಿರುವ ಕ್ವಾಮಿ ಏಕತಾ ಮಂಚ್‌ನ (Quami Ekta Manch ) ಸದಸ್ಯರು ಡಿಸೆಂಬರ್ 6 ರಂದು ಹೆಚ್ಚುವರಿ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಒತ್ತಾಯಿಸಿದ್ದಾರೆ.

ಶ್ರೀನಾಥ್‌ ದೋಸೆ ಕಾರ್ನರ್‌ ಎಂದು ಹೆಸರಿಟ್ಟ ಮುಸ್ಲಿಂ ವ್ಯಕ್ತಿಗೆ ಬೆದರಿಕೆ!

ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ಸಂಪೂರ್ಣ ನಿಷೇಧ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ನಿಷೇಧಕ್ಕೆ ಯೋಜನೆಗಳನ್ನು ರೂಪಿಸಲು ಹಾಗೂ ಇತರ ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಲಕ್ನೋದಲ್ಲಿ ನಡೆದ ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿ ಈ ವಿಚಾರವನ್ನು ಘೋಷಿಸಿದ್ದಾರೆ. ಈ ಮೂಲಕ ಮಥುರಾದಲ್ಲಿ ಸಂಪೂರ್ಣವಾಗಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧವಾಗಿದೆ.

Follow Us:
Download App:
  • android
  • ios