ಪಿಎಫ್‌ಐ ಬ್ಯಾನ್ ಬಳಿಕ ಎಸ್‌ಡಿಪಿಐ ಮೇಲೆ ಭಯೋತ್ಪಾದನೆಯ ಆರೋಪ ಕೇಳಿಬಂದಿದೆ. ಎಸ್‌ಡಿಪಿಐ ಮುಖವಾಡದಲ್ಲಿ ಪಿಎಫ್‌ಐ ಕಾರ್ಯಚಟುವಟಿಕೆ ಮುಂದುವರೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ಮತ್ತು ಕಚೇರಿಗಳ ಮೇಲೆ ಇ.ಡಿ ದಾಳಿ ನಡೆದಿದೆ.
ಬೆಂಗಳೂರು (ಮಾ.6): ನಿಷೇಧೀತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಳಿಕ ಅದರ ರಾಜಕೀಯ ಘಟಕವಾಗಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೂಡ ಬ್ಯಾನ್ ಆಗುವ ಸಾಧ್ಯತೆ ಇದೆ. ಪಿಎಫ್‌ಐ ಬಳಿಕ ಎಸ್‌ಡಿಪಿಐ ವಿರುದ್ಧ ಭಯೋತ್ಪಾದನೆಯ ಆರೋಪ ಕೇಳಿ ಬಂದಿದ್ದು, ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.ಎಸ್‌ಡಿಪಿಐ ಮುಖವಾಡದಲ್ಲಿ ಪಿಎಫ್ಐ ಆ್ಯಕ್ಟೀವ್ ಆಗಿರೋ ಅನುಮಾನ ವ್ಯಕ್ತವಾಗಿದೆ. ಪಿಎಫ್ಐ ಹವಾಲಾ ಮೂಲಕ ಸಂಗ್ರಹಿಸಿದ್ದ ಹಣ ಎಸ್‌ಡಿಪಿಐಗೆ ವರ್ಗವಾಗಿದೆ ಎಂದು ಹೇಳಲಾಗಿದ್ದು, ಪಿಎಫ್ಐ ಭಯೋತ್ಪಾದಕ ಚಟುವಟಿಕೆ ಎಸ್ಡಿಪಿಐನಿಂದ ಮುಂದುವರಿಕೆ ಆಗುತ್ತಿದೆ ಎನ್ನಲಾಗಿದೆ. ದೇಶದಲ್ಲಿರಾಜಕೀಯ ಪಕ್ಷ ಎಸ್‌ಡಿಪಿಐ ಬ್ಯಾನ್ ಮಾಡಲು ಸಾಧ್ಯವಾಗುತ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. 2022ರಲ್ಲಿ ಭಯೋತ್ಪಾದನೆ ಆರೋಪದ ಮೇಲೆ ಪಿಎಫ್ಐ ಬ್ಯಾನ್ ಮಾಡಲಾಗಿತ್ತು.ಈಗ ಪಿಎಫ್ಐನ ರಾಜಕೀಯ ಘಟಕ ಎಸ್‌ಡಿಪಿಐ ಪಕ್ಷಕ್ಕೂ ಬ್ಯಾನ್ ಕರಿನೆರಳು ಎದುರಾಗಿದೆ.
2 ದಿನದ ಹಿಂದೆ ದೆಹಲಿಯಲ್ಲಿ ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷನನ್ನು ಇಡಿ ಬಂಧಿಸಿದೆ. ರಾಷ್ಟ್ರಾಧ್ಯಕ್ಷ ಫೈಜಿ ಬಂಧನ ಬೆನ್ನಲ್ಲೇ ದೇಶಾದ್ಯಂತ ಇ.ಡಿ ಬೇಟೆ ಶುರುವಾಗಿದೆ. ದೇಶದ 12 ಕಡೆ ಎಸ್‌ಡಿಪಿಐ ಪಕ್ಷದ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಇದರಲ್ಲಿ ದೆಹಲಿ,ಕೊಲ್ಕತ್ತಾ, ಚೆನ್ನೈ,ಆಂಧ್ರ, ಬೆಂಗಳೂರಲ್ಲಿ ದಾಳಿ ನಡೆದಿದ್ದು, ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಎಸ್‌ಡಿಪಿಐ ಅಧ್ಯಕ್ಷ ಎಂ.ಕೆ ಫೈಜಿ ಅರೆಸ್ಟ್ ಆಗಿದ್ದಾರೆ. 2022ರಲ್ಲಿ ಪಿಎಫ್ಐ ಬ್ಯಾನ್ ಅನ್ನು ನರೇಂದ್ರ ಮೋದಿ ಸರ್ಕಾರ ಬ್ಯಾನ್ ಮಾಡಿತ್ತು. ಪಿಎಫ್ಐನ ರಾಜಕೀಯ ಘಟಕವಾಗಿ 2009ರಲ್ಲಿ ಎಸ್‌ಡಿಪಿಐ ಸ್ಥಾಪನೆಯಾಗಿತ್ತು.
ಎಸ್‌ಡಿಪಿಐ ವಿರುದ್ಧ ಇ.ಡಿ ಕಾರ್ಯಾಚರಣೆ ಯಾಕೆ?: ಪಿಎಫ್ಐ ಉಗ್ರ ಸಂಘಟನೆಯಿಂದ ಎಸ್‌ಡಿಪಿಐಗೆ ಹಣಕಾಸಿನ ನೆರವು ಸಿಕ್ಕಿದೆ. ಚುನಾವಣೆಗಾಗಿ ಎಸ್‌ಡಿಪಿಐಗೆ ಪಿಎಫ್ಐನಿಂದ 3.75 ಕೋಟಿ ನೀಡಿದ್ದು ಪತ್ತೆಯಾಗಿದೆ. ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಫೈಜಿ ಓಡಾಡುತ್ತಿದ್ದ ಎನ್ನಲಾಗಿದೆ. ಪಿಎಫ್ಐಗೆ ಬಂದಿದ್ದ ಹವಾಲಾ ದುಡ್ಡು ಎಸ್‌ಡಿಪಿಐಗೆ ವರ್ಗಾವಣೆ ಮಾಡಲಾಗಿತ್ತು, ಉಗ್ರ ಚಟುವಟಿಕೆಗಾಗಿ ಹವಾಲಾ ಮೂಲಕ ಪಿಎಫ್ಐ ಹಣ ಸಂಗ್ರಹಿಸಿತ್ತು. ಪಿಎಫ್ಐ-ಎಸ್‌ಡಿಪಿಐ ಮಧ್ಯೆ ರಾಜಕೀಯ ಹೊಂದಾಣಿಕೆ ಹಿನ್ನೆಲೆ ದಾಳಿಯಾಗಿದೆ.
ಇ.ಡಿ ದಾಳಿಯಲ್ಲಿ ಸಿಕ್ಕಿದ್ದೇನು..?: ಬ್ಯಾನ್ ಆದ ಪಿಎಫ್ಐಗೂ ಎಸ್ಡಿಪಿಐಗೂ ವ್ಯತ್ಯಾಸ ಇಲ್ಲ. ಪಿಎಫ್ಐನ ಚಟುವಟಿಕೆಗಳು ಎಸ್‌ಡಿಪಿಐ ಮೂಲಕ ಮುಂದುವರಿಕೆ ಅಗುತ್ತಿದೆ. ದೇಶದಲ್ಲಿ ಇಸ್ಲಾಮಿಕ್ ಚಳವಳಿ ಮಾಡುವುದೇ ಪ್ರಮುಖ ಉದ್ದೇಶ. ಜಿಹಾದ್ ತತ್ವಗಳನ್ನ ನಾವು ಎತ್ತಿ ಹಿಡಿಯುವುದೇ ಎಸ್‌ಡಿಪಿಐ ಧ್ಯೇಯ. ಪಕ್ಷ ಬಳಸಿಕೊಂಡು ಇಸ್ಲಾಮಿಕ್ ಮೂಲಭೂತವಾದದ ಉದ್ದೇಶ ಹರಡಲಾಗುತ್ತಿದೆ. ಆಂತರಿಕವಾಗಿ ಇಸ್ಲಾಮಿಕ್ ಚಳವಳಿ, ಬಹಿರಂಗವಾಗಿ ಸಾಮಾಜಿಕ ಚಳವಳಿ ನಡೆಸುತ್ತಿದ್ದಾರೆ ಎಂದು ಆರೋಪ ಎದುರಾಗಿದೆ.
ಪಿಎಫ್ಐ ಬ್ಯಾನ್... ಎಸ್‌ಡಿಪಿಐ ಆ್ಯಕ್ಟೀವ್: ಪಿಎಫ್ಐ ಬ್ಯಾನ್ ಆಗಿದ್ದರೂ ಚಟುವಟಿಕೆಗಳು ಮುಂದುವರೆದಿತ್ತು. ಪಿಎಫ್ಐ ಮಾಡುತ್ತಿದ್ದ ಕೆಲಸ ಎಸ್ ಡಿಪಿಐ ಮೂಲಕ ಮಾಡಲಾಗುತ್ತಿತ್ತು. ಪಿಎಫ್ಐ ಮತ್ತು ಎಸ್‌ಡಿಪಿಐ ಎರಡೂ ಕೇಡರ್ ಒಂದೇ ಆಗಿದೆ. ಪಿಎಫ್ಐನಲ್ಲಿ ಇದ್ದವರೇ SDPIನಲ್ಲಿ ಸದಸ್ಯರಾಗಿ ಮುಂದುವರಿಕೆಯಾಗಿದ್ದಾರೆ. ಪಿಎಫ್ಐನ ತಂಡದಿಂದಲೇ SDPIನ ಚಟುವಟಿಕೆ ಮೇಲೆ ನಿಗಾ ವಹಿಸಲಾಗುತ್ತಿದೆ. SDPIಗೂ ಪಿಎಫ್ಐಗೂ ಲಿಂಕ್ ಇರುವ ಹಲವು ದಾಖಲೆ ಲಭ್ಯವಾಗಿದೆ.
ನಮ್ಮ ಮೇಲೆ ದಬ್ಬಾಳಿಕೆ: SDPI ಕಚೇರಿಗಳ ಮೇಲಿನ ಇಡಿ ದಾಳಿ ಒಂದು ರೀತಿಯ ದಬ್ಬಾಳಿಕೆ.ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದಬ್ಬಾಳಿಕೆಯ ನೀತಿ ಹೊಂದಿದೆ. ದೇಶದ ರಾಜಕೀಯ ಪಕ್ಷಗಳ ಶಕ್ತಿಯನ್ನ ಕುಂದಿಸುವ ಯತ್ನ ಎಂದು SDPI ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ ಹೇಳಿದ್ದಾರೆ.
ಸಿಮಿಯ ಅವತಾರ ಪಿಎಫ್ಐ ಈಗ ಎಸ್‌ಡಿಪಿಐ: ಭಯೋತ್ಪಾದಕ ಸಂಘಟನೆಯಾಗಿದ್ದ ಸಿಮಿಯ ಮತ್ತೊಂದು ರೂಪವಾಗಿ ಪಿಎಫ್ಐ ಹುಟ್ಟಿಕೊಂಡಿತ್ತು. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸೋ ಸಿದ್ಧಾಂತ ಹೊಂದಿದ್ದ ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾವನ್ನು 1977ರಲ್ಲಿ ಸ್ಥಾಪನೆ ಮಾಡಲಾಗಿತ್ತು. 2001ರಲ್ಲಿ ಕೇಂದ್ರ ಸರ್ಕಾರ ಇದನ್ನು ಬ್ಯಾನ್ ಮಾಡಿತ್ತು. ಪಿಎಫ್ಐ ಸ್ಥಾಪಕ ಸದಸ್ಯರೆಲ್ಲರೂ ಸಿಮಿ ಸಂಘಟನೆಯ ಸದಸ್ಯರಾಗಿದ್ದವರು. ಈಗ ಪಿಎಫ್ಐ ಬ್ಯಾನ್ ಆದ ನಂತರ ಎಸ್‌ಡಿಪಿಐ ಹೆಸರಲ್ಲಿ ಕಾರ್ಯನಿರ್ವಹಣೆ. ಪಿಎಫ್ಐನಲ್ಲಿದ್ದ ಸದಸ್ಯರೇ ಎಸ್‌ಡಿಪಿಐ ಪಕ್ಷದ ನಾಯಕರು, ಸದಸ್ಯರಾಗಿದ್ದಾರೆ.
ಬ್ಯಾನ್ ಆಗುತ್ತಾ SDPI ಪಕ್ಷ..?: ಜಕೀಯ ಪಕ್ಷವನ್ನ ಬ್ಯಾನ್ ಮಾಡುವುದು ಅಷ್ಟು ಸುಲಭವಲ್ಲ. ಸಂಘಟನೆಯಾಗಿ ಒಂದು ರಾಜಕೀಯ ಪಕ್ಷ ನೊಂದಣಿಯಾಗಿರಲ್ಲ. ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷ ನೊಂದಣಿಯಾಗಿರುತ್ತೆ. ರಾಜಕೀಯ ಪಕ್ಷ ಬ್ಯಾನ್ ಅಧಿಕಾರ ಚುನಾವಣಾ ಆಯೋಗಕ್ಕೆ ಮಾತ್ರವೇ ಇದೆ. ರಾಜಕೀಯ ಚಟುವಟಿಕೆ ಬಿಟ್ಟು ದೇಶವಿರೋಧಿ ಕೃತ್ಯಕ್ಕೆ ಬಲವಾದ ಸಾಕ್ಷ್ಯ ಬೇಕು. ಸೂಕ್ತ ಸಾಕ್ಷ್ಯ ಸಿಕ್ಕರೆ ಚುನಾವಣೆ ಆಯೋಗಕ್ಕೆ ಮನವಿ ಮಾಡಬಹುದು. ನಿಷೇಧ ಅಥವಾ ನೋಂದಣಿಯನ್ನ ರದ್ದು ಮಾಡುವ ಅಧಿಕಾರ ಆಯೋಗಕ್ಕಿದೆ . 2009ರಲ್ಲಿ ಸಿಪಿಐ (ಮಾವೋವಾದಿ) ಪಕ್ಷ ಬ್ಯಾನ್ ಮಾಡಲಾಗಿತ್ತು. ಯುಎಪಿಎ ಕಾಯ್ದೆಯಡಿ ಉಗ್ರ ಸಂಘಟನೆ ಎಂದು ಬ್ಯಾನ್ ಆಗಿರುವ ಉದಾಹರಣೆ ಇದೆ.
ರಂಜಾನ್ ಹೆಸರಲ್ಲಿ ಹಣ ಸಂಗ್ರಹಿಸಿ ಭಾರತದಲ್ಲಿ ಭಯೋತ್ಪಾದಕ ಕೃತ್ಯ, SDPI ರಾಷ್ಟ್ರೀಯ ಅಧ್ಯಕ್ಷ ಅರೆಸ್ಟ್
2047ರೊಳಗೆ ಇಸ್ಲಾಮಿಕ್ ದೇಶ, ಪಿಎಫ್ಐ ಮಹಾ ಷಡ್ಯಂತ್ರ: 2047ರ ಒಳಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸೋ ಷಡ್ಯಂತ್ರ ಪಿಎಫ್‌ಐನದ್ದಾಗಿತ್ತು. ಬಿಹಾರ ಪೊಲೀಸರ ತನಿಖೆ ವೇಳೆ ಮಹಾ ಷಡ್ಯಂತ್ರ ಬಯಲಾಗಿತ್ತು. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸೋ ಪ್ರಯತ್ನದ ಪ್ಲಾನ್ ‘ಇಂಡಿಯಾ ವಿಷನ್ 2047-ಇಸ್ಲಾಮಿಕ್ ಆಳ್ವಿಕೆ ಕಡೆಗೆ ಭಾರತ’ ಎನ್ನುವ ದಾಖಲೆ ಸಿಕ್ಕಿತ್ತು. ಬಿಹಾರದಲ್ಲಿ ಬಂಧಿತರಾದ ಪಿಎಫ್ಐ ಮುಖಂಡರ ಬಳಿ ಬ್ಲೂಪ್ರಿಂಟ್ ಲಭ್ಯವಾಗಿತ್ತು. 8 ಪುಟಗಳ ದಾಖಲೆಯನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿತ್ತು. ಪಿಎಫ್ಐ ಸಂಘಟನೆಯ ಒಳಗೆ ರಹಸ್ಯ ಕಾರ್ಯಸೂಚಿಯ ದಾಖಲೆ ಇದಾಗಿತ್ತು. ಈ ದಾಖಲೆ ಬಯಲಿಗೆ ಬಂದ ನಂತರ ಪಿಎಫ್‌ಐ ಬ್ಯಾನ್ ಆಗಿತ್ತು.
