ಉತ್ತರ ಭಾರತದಲ್ಲಿ ಭೀಕರ ಉಣುಗು ಕಾಟ, ಒಟ್ಟು 14 ಮಂದಿ ಸಾವು, 700 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ!
ಒಡಿಶಾದಲ್ಲಿ ಉಣುಗು ಕಾಟ ಮತ್ತು ಪ್ರಾಣಿಗಳಿಂದ ಹರಡುವ ಕಾಯಿಲೆ ಉಲ್ಬಣಗೊಳ್ಳುತ್ತಿದೆ. ಈ ಭೀಕರ ಸಾಂಕ್ರಾಮಿಕ ಕಾಯಿಲೆಗೆ ಈವರೆಗೆ 14 ಮಂದಿ ಸಾವನ್ನಪ್ಪಿದ್ದು, 700 ಕ್ಕೂ ಹೆಚ್ಚು ಪ್ರಕರಣಗಳು ಈವರೆಗೆ ವರದಿಯಾಗಿವೆ.
ಒಡಿಶಾದಲ್ಲಿ ಉಣುಗು ಕಾಟ ಮತ್ತು ಪ್ರಾಣಿಗಳಿಂದ ಹರಡುವ ಕಾಯಿಲೆ ಉಲ್ಬಣಗೊಳ್ಳುತ್ತಿದೆ. ಸರ್ಕಾರವು ರಾಜ್ಯದಲ್ಲಿ ಸ್ಕ್ರಬ್ ಟೈಫಸ್ (Scrub Typhus -ಉಣುಗು ) ಮತ್ತು ಲೆಪ್ಟೊಸ್ಪಿರೋಸಿಸ್ನ (Leptospirosis) ಅಂದರೆ ಪ್ರಾಣಿಗಳ ಮೂತ್ರ ಮತ್ತು ಮಲದಿಂದ ಹರಡುವ ಕಾಯಿಲೆ ಉಲ್ಬಣಕ್ಕೆ ಕಣ್ಗಾವಲು ಹೆಚ್ಚಿಸಲು ಅಲ್ಲಿನ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಕೊಡಗಿನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯರ ಕಿಡ್ನಾಪ್, ನಾಲ್ವರ ರ ಗ್ಯಾಂಗ್ ಅರೆಸ್ಟ್!
ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವರದಿ ಪ್ರಕಾರ ಬರ್ಗರ್ ಜಿಲ್ಲೆಯಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಸ್ಕ್ರಬ್ ಟೈಫಸ್ ಎಂಬ ಬ್ಯಾಕ್ಟೀರಿಯಾದ ಸೋಂಕು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿಯೂ ಕಂಡುಬಂದಿದ್ದು, ಶಿಮ್ಲಾದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 700 ಕ್ಕೂ ಹೆಚ್ಚು ಪ್ರಕರಣಗಳು ಈವರೆಗೆ ವರದಿಯಾಗಿವೆ.
ಇಂದಿರಾಗಾಂಧಿ ವೈದ್ಯಕೀಯ ಕಾಲೇಜಿನ (ಐಜಿಎಂಸಿ) ತಜ್ಞರ ಪ್ರಕಾರ ಶಿಮ್ಲಾದ ಸೋಲನ್ ಜಿಲ್ಲೆಯಲ್ಲಿ ಐವರು ಸ್ಕ್ರಬ್ ಟೈಫಸ್‌ನಿಂದ (ಉಣುಗು ಕಾಟ) ಸಾವನ್ನಪ್ಪಿದ್ದಾರೆ, ನಾಲ್ಕು ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ.
ಬುಷ್ ಟೈಫಸ್ ಎಂದೂ ಕರೆಯಲ್ಪಡುವ ಓರಿಯಂಟಿಯಾ ಸುತ್ಸುಗಮುಶಿ ಬ್ಯಾಕ್ಟೀರಿಯಂ ಸ್ಕ್ರಬ್ ಟೈಫಸ್ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದ ಸೋಂಕಿನ ಮೂಲವಾಗಿದೆ. ಇದು ಸೋಂಕಿತ ಚಿಗ್ಗರ್‌ಗಳ ಕಡಿತದ ಮೂಲಕ ಹರಡುತ್ತದೆ. ಜ್ವರ, ತಲೆನೋವು, ಸ್ನಾಯು ನೋವು ಮತ್ತು ಸಾಂದರ್ಭಿಕ ವಿಶಿಷ್ಟ ಲಕ್ಷಣಗಳಾಗಿವೆ.
ಮತ್ತೆ ಬಾಲ ಬಿಚ್ಚಿದ ಶತ್ರು ರಾಷ್ಟ್ರ, ಭಾರತೀಯ ಸೇನೆಯ ದಾರಿ ತಪ್ಪಿಸಲು ಉಗ್ರರ ಶಿಬಿರ
ಸೋಂಕಿನ ಲಕ್ಷಣಗಳೆಂದರೆ - ಶೀತ, ತಲೆನೋವು, ಸ್ನಾಯು ನೋವು ಮತ್ತು ನೋವಿನೊಂದಿಗೆ ಜ್ವರ, ಚಿಗ್ಗರ್ ಕಚ್ಚಿದ ಕಪ್ಪು, ಹುರುಪು ತರಹದ ಪ್ರದೇಶ (ಎಸ್ಚಾರ್ ಎಂದು ಕರೆಯಲಾಗುತ್ತದೆ), ಗೊಂದಲದಿಂದ ಕೋಮಾದವರೆಗಿನ ಮಾನಸಿಕ ಬದಲಾವಣೆಗಳು, ವಿಸ್ತರಿಸಿದ ದುಗ್ಧರಸ ಗ್ರಂಥಿಗಳು, ದದ್ದು ಮತ್ತು ಸ್ಕ್ರಬ್ ಟೈಫಸ್‌ನ ತೀವ್ರತರವಾದ ಪ್ರಕರಣಗಳು ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು, ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು.
ಸ್ಕ್ರಬ್ ಟೈಫಸ್ ಅನ್ನು ತಡೆಗಟ್ಟಲು ಪ್ರಸ್ತುತ ಯಾವುದೇ ಲಸಿಕೆ ಇಲ್ಲ, ಆದರೆ ಸೋಂಕಿತ ಕೀಟಗಳ ಸಂಪರ್ಕವನ್ನು ತಪ್ಪಿಸುವ ಮೂಲಕ ನಿಮ್ಮ ಅಪಾಯವನ್ನು ಕಡಿಮೆ ಮಾಡಬಹುದು. ಉಣುಗು ಇರುವ ಪ್ರದೇಶಗಳಿಗೆ ಭೇಟಿ ನೀಡಿದಾಗ, ದೂರವಿರುವುದು ಸೂಕ್ತವಾಗಿದೆ.
ಉಣುಗು ಕೀಟವು ದನಕರುಗಳು, ಎಮ್ಮೆ, ಕುರಿ,ನಾಯಿ, ಕೋಳಿ ಮುಂತಾದ ಸಾಕುಪ್ರಾಣಿಗಳ ರೋಮ, ಗರಿಗಳಿಗೆ ಕಚ್ಚಿಕೊಂಡಿದ್ದು ಅವುಗಳ ರಕ್ತಹೀರಿ ಬದುಕುತ್ತದೆ. ಇದನ್ನು ಉಣ್ಣಿ ಎಂದು ಕೂಡ ಕರೆಯುತ್ತಾರೆ.