Asianet Suvarna News Asianet Suvarna News

ಮತ್ತೆ ಬಾಲ ಬಿಚ್ಚಿದ ಶತ್ರು ರಾಷ್ಟ್ರ, ಭಾರತೀಯ ಸೇನೆಯ ದಾರಿ ತಪ್ಪಿಸಲು ಉಗ್ರರ ಶಿಬಿರ ಸ್ಥಳಾಂತರಿಸಿದ ಪಾಕ್!

ಎಲ್‌ಒಸಿ ಬಳಿಯ ಎಲ್ಲಾ ಉಗ್ರರ ಶಿಬಿರ ಬೇರೆಡೆಗೆ ಶಿಫ್ಟ್‌. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಿಸಲು ಯತ್ನ

Pakistan Has  Relocates Terror Camps near indian line of control gow
Author
First Published Sep 15, 2023, 10:25 AM IST

ನವದೆಹಲಿ (ಸೆ.15): ಜಮ್ಮು ಮತ್ತು ಕಾಶ್ಮೀರದೊಳಗೆ ಭಯೋತ್ಪಾದಕ ಚಟುವಟಿಕೆ ಹೆಚ್ಚಿಸಲು ಯತ್ನಿಸುತ್ತಿರುವ ಪಾಕಿಸ್ತಾನ, ಇದೀಗ ಭಾರತೀಯ ಸೇನೆಯ ದಾರಿತಪ್ಪಿಸಲು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇದ್ದ ಭಯೋತ್ಪಾದಕರ ಶಿಬಿರಗಳನ್ನೆಲ್ಲ ಬೇರೆ ಬೇರೆ ಕಡೆಗಳಿಗೆ ಸ್ಥಳಾಂತರ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ತನಗೆ ಖಚಿತ ಮಾಹಿತಿ ಲಭಿಸಿರುವುದಾಗಿ ‘ನ್ಯೂಸ್‌ 18’ ವರದಿ ಮಾಡಿದೆ. ಅದರಲ್ಲಿ, ‘ಲಷ್ಕರ್‌ ಎ ತೊಯ್ಬಾ, ಜೈಷ್‌ ಎ ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದೀನ್‌ ಮುಂತಾದ ಭಯೋತ್ಪಾದಕ ಸಂಘಟನೆಗಳ ಉಗ್ರರನ್ನು ಜಮ್ಮು ಕಾಶ್ಮೀರದೊಳಗೆ ನುಗ್ಗಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಯತ್ನಿಸುತ್ತಿದೆ. ಆದರೆ ಅವರನ್ನು ಭಾರತದ ಯೋಧರು ತಡೆಯದಂತೆ ನೋಡಿಕೊಳ್ಳಲು ಅವರ ಶಿಬಿರಗಳನ್ನು ಹಾಗೂ ಒಳನುಸುಳುವ ಜಾಗಗಳನ್ನು ಸ್ಥಳಾಂತರ ಮಾಡಿದೆ. ಈಗಾಗಲೇ 300ಕ್ಕೂ ಹೆಚ್ಚು ಸಣ್ಣ ಶಸ್ತ್ರಾಸ್ತ್ರಗಳನ್ನು ಡ್ರೋನ್‌ ಮೂಲಕ ಶ್ರೀನಗರದ ಸುತ್ತಮುತ್ತಲ ಸ್ಥಳಗಳಿಗೆ ರವಾನಿಸಿದೆ’ ಎಂದು ಹೇಳಿದೆ.

ಎಲ್ಲ ದಾಖಲೆಗಳಿಗೂ ಜನನ ಪ್ರಮಾಣಪತ್ರವೇ, ವಿವಾಹ ನೋಂದಣಿಗೂ ಕೂಡ, ಮುಂದಿನ

ಕಾಶ್ಮೀರಕ್ಕೆ ಒಳನುಸುಳಲು ಯತ್ನ: ‘ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಭಾರತದ ಜೊತೆ ಕದನವಿರಾಮ ಮುರಿದುಕೊಳ್ಳುವಂತೆ ಅಲ್ಲಿನ ಸೇನೆಯ ಮೇಲೆ ಒತ್ತಡ ಹೇರುತ್ತಿವೆ. ತಾಲಿಬಾನ್‌ ಉಗ್ರರಿಂದ ತರಬೇತಿ ಪಡೆದ ಸಾಕಷ್ಟು ಉಗ್ರರು ಭಾರತದೊಳಗೆ ನುಸುಳಲು ಪೇಶಾವರ, ಬಹಾವಲ್ಪುರ ಹಾಗೂ ಮುಜಾಫರಾಬಾದ್‌ನಲ್ಲಿ ಕಾಯುತ್ತಿದ್ದಾರೆ. ಪಾಕ್‌ ಯೋಧರು ಭಾರತದ ಮೇಲೆ ಗುಂಡಿನ ದಾಳಿ ನಡೆಸುವಾಗ ಈ ಉಗ್ರರು ಚಳಿಗಾಲದಲ್ಲಿ ಒಳನುಸುಳುತ್ತಾರೆ’ ಎಂದು ವರದಿ ತಿಳಿಸಿದೆ.

ಮಂಗ್ಳೂರು ಕುಕ್ಕರ್ ಬಾಂಬ್ ಸ್ಫೋಟ: 'ಕದ್ರಿ ಮಂಜುನಾಥ ದೇವಸ್ಥಾನವೇ' ಉಗ್ರನ ಟಾರ್ಗೆಟ್

ಉಗ್ರರು ಕಾಯುತ್ತಿರುವ ಸ್ಥಳಗಳು: ‘ಪಿಒಕೆಯ ಮನ್ಶೇರಾ, ಮುಜಾಫರಾಬಾದ್‌ ಹಾಗೂ ಕೋಟ್ಲಿ ಪ್ರದೇಶದಲ್ಲಿ ಉಗ್ರರ ಶಿಬಿರಗಳು ಸಂಪೂರ್ಣ ಸಕ್ರಿಯವಾಗಿವೆ. ಮನ್ಶೇರಾದಲ್ಲಿ ಬೋಯಿ, ಬಾಲಾಕೋಟ್‌ ಹಾಗೂ ಗಾರ್ಹಿ ಹಬೀಬುಲ್ಲಾದಲ್ಲಿ ಉಗ್ರರ ಶಿಬಿರಗಳಿವೆ. ಮುಜಾಫರಾಬಾದ್‌ನಲ್ಲಿ ಚೇಲಾಬಂದಿ, ಶವೈನಾಲಾ, ಅಬ್ದುಲ್ಲಾ ಬಿನ್‌ ಮಸೂದ್‌ ಹಾಗೂ ದುಲಾಯಿಯಲ್ಲಿ ಉಗ್ರರ ಶಿಬಿರಗಳಿವೆ. ಇವು ಮುಂಚೂಣಿ ಉಗ್ರರ ಶಿಬಿರಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಗುರೇಜ್‌, ಕೇಲ್‌, ನೀಲಂ ಕಣಿವೆ, ತಂಗಧಾರ್‌, ಉರಿ ಚಕೋಟಿ, ಗುಲ್ಮಾರ್ಗ್‌, ಪೂಂಚ್‌, ರಾಜೌರಿ, ನೌಶೇರಾ ಹಾಗೂ ಸುಂದರಬನಿ ವಿಭಾಗದಲ್ಲಿ ಎಲ್‌ಒಸಿಯಿಂದ 2-3 ಕಿ.ಮೀ. ದೂರದಲ್ಲಿ ಉಗ್ರರು ಒಳನುಸುಳಲು ಕಾಯುತ್ತಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios